Advertisement
ಬುಧವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿತುವ ಬಸವನಬಾಗೆವಾಡಿ ಶಾಸಕ ಶಿವಾನಂದ ಪಾಟೀಲ, ಕೋವಿಡ್ ಹಿನ್ನೆಲೆಯಲ್ಲಿ ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಬಡ ಕುಟುಂಬಗಳ ಮದುವೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಿಂತು ಹೋಗಿವೆ. ಹೀಗಾಗಿ ಬಡ ಕುಟುಂಬಗಳಿಗೆ ನೆರವು ನೀಡುವ ಸಾಮಾಜಿಕ ಹೊಣೆಗಾರಿಕೆಗಾಗಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದರು.
Related Articles
Advertisement
29 ರಂದು ಪುತ್ರಿ ಸಂಯುಕ್ತಾ ವಿವಾಹ : ಕೋವಿಡ್ ಕಾರಣಕ್ಕೆ ಹಲವು ಬಾರಿ ಮುಂದೂಡಲ್ಪಟ್ಟ ನನ್ನ ಹಿರಿಯ ಪುತ್ರಿಯ ವಿವಾಹವನ್ನು ನವೆಂಬರ್ 29 ರಂದು ವಿಜಯಪುರ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ನಗರದ ಬೇಗಂ ತಲಾಬ್ ಕೆರೆ ಪ್ರದೇಶದಲ್ಲಿ ಸಂಜೆ 5-30 ಗೋಧೂಳಿ ಸಂದರ್ಭದಲ್ಲಿ ಪುತ್ರಿಯ ವಿವಾಹ ನಡೆಯಲಿದೆ ಎಂದರು.
ಇದನ್ನೂ ಓದಿ: ಬಿಟ್ ಕಾಯಿನ್ ನಿಷೇಧದ ಸುಳಿವು; ಒಂದೇ ದಿನದಲ್ಲಿ ಭಾರೀ ಕುಸಿತ ಕಂಡ ಕ್ರಿಫ್ಟೋ ಕರೆನ್ಸಿ ಮೌಲ್ಯ
ಕೋವಿಡ್ ನಿಯಮಗಳ ಪಾಲನೆಗಾಗಿ ಯಾರಿಗೂ ಆಮಂತ್ರಣ ಪತ್ರಿಕೆ ನೀಡುತ್ತಿಲ್ಲ. ಆದರೆ ನನ್ನ ಕ್ಷೇತ್ರ, ವಿಜಯಪುರ, ಬಾಗಲಕೋಟೆ ಸೇರಿದಂತೆ ರಾಜ್ಯದ ಜನರು ಮಾಧ್ಯಮಗಳ ಮೂಲಕ ನನ್ನ ಪುತ್ರಿಯ ವಿವಾಹದ ಆಮಂತ್ರಣ ಸ್ವೀಕರಿಸಿ, ಮಗಳ ಮದುವೆಗೆ ಆಗಮಿಸಲು ಕೋರುತ್ತೇನೆ ಎಂದು ಮನವಿ ಮಾಡಿದರು.
ನನ್ನ ಪುತ್ರಿಯ ವಿವಾಹ ಸಂದರ್ಭದಲ್ಲೇ ಬಡವರಿಗಾಗಿ ನೂರೊಂದು ಸಾಮೂಹಿಕ ವಿವಾಹ ಮಾಡುವ ಯೋಜನೆ ರೂಪಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಸ್ಮರಣೆಗಾಗಿ ಬ್ಯಾಂಕ್ ಸಹಯೋಗದಲ್ಲಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದರು.
ಶಾಸಕರ ಪುತ್ರಿಯೂ ಆಗಿರುವ ವಿಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ ಉಪಸ್ಥಿತರಿದ್ದರು.