Advertisement

“3 ತಿಂಗಳಲ್ಲಿ 10 ಸಾವಿರ ಸಸಿ ನೆಡುವ ಯೋಜನೆ’

10:14 PM May 15, 2019 | Team Udayavani |

ಬಡಗನ್ನೂರು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್‌ ಯುವಕ ಮಂಡಲದ ನೂತನ ಪದಾಧಿಕಾರಿಗಳ ಪದ ಸ್ವೀಕಾರ ಮತ್ತು ನಿರ್ಗಮಿತ ಪದಾಧಿಕಾರಿಗಳಿಗೆ ಅಭಿನಂದನೆ ಮದ್ಲ ನಿನಾದ ಸಭಾಂಗಣದಲ್ಲಿ ನಡೆಯಿತು.

Advertisement

ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಉದ್ಘಾಟಿಸಿದರು. ತುಡರ್‌ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ ಅಧ್ಯಕ್ಷತೆ ವಹಿಸಿದ್ದರು. ಯುವಕ ಮಂಡಲದ ಗೌರವಾಧ್ಯಕ್ಷ ಶೇಷಪ್ಪ ಗೌಡ ಪರನೀರ, ಕನಕಮಜಲು ಯುವಜನ ವಿಕಾಸ ಯುವಕ ಮಂಡಲದ ಮಾಜಿ ಅಧ್ಯಕ್ಷ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಲಕ್ಷ್ಮೀನಾರಾಯಣ ಕಜೆಗದ್ದೆ, ಕೌಡಿಚ್ಚಾರ್‌ ವಿವೇಕಾನಂದ ಯುವಕ ವೃಂದದ ಮಾಜಿ ಅಧ್ಯಕ್ಷ ದೀಪಕ್‌ ಕುಲಾಲ್‌, ನಿರ್ಗಮಿತ ಅಧ್ಯಕ್ಷ ಗಂಗಾಧರ ನಾಯ್ಕ ಉಪಸ್ಥಿತರಿದ್ದರು.

ಮಕ್ಕಳ ಭಜನ ತಂಡ ಸ್ಥಾಪನೆ
ನೂತನ ಅಧ್ಯಕ್ಷರಾಗಿ ಪದಸ್ವೀಕಾರ ಮಾಡಿದ ಸುನೀಲ್‌ ನಿಧಿಮುಂಡ ಮಾತ ನಾಡಿ, ಪ್ರಸ್ತುತ ಯುವಕ ಮಂಡಲ ದಶಮಾನೋತ್ಸವದ ಹೊಸ್ತಿಲಲ್ಲಿದ್ದು, ಸವಿನೆನಪಿಗಾಗಿ ಅನೇಕ ಕಾರ್ಯಕ್ರಮ ಯೋಜನೆ ಹಾಕಿಕೊಂಡಿದ್ದೇವೆ.

ಡಾ| ಶ್ರೀಕಾಂತ್‌ ರಾವ್‌ ಸಲಹೆಯಂತೆ ಗ್ರಾ.ಪಂ. ವ್ಯಾಪ್ತಿಯಲ್ಲಿ 10 ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಜೂನ್‌ನಲ್ಲಿ ಚಾಲನೆ ನೀಡಿ, ಮೂರು ತಿಂಗಳ ಅಭಿಯಾನ ನಡೆಸಲಿದ್ದೇವೆ. ಯುವಕ ಸಂಘದಲ್ಲಿ ಮಕ್ಕಳ ಭಜನ ತಂಡವನ್ನು ಆರಂಭಿಸಲು ಉದ್ದೇಶಿಸಿದ್ದು, ಅದಕ್ಕಾಗಿ ರಾಮಕೃಷ್ಣ ಕಾಟುಕುಕ್ಕೆ ಅವರ ಮೂಲಕ ಭಜನ ತರಬೇತಿಯನ್ನು ಜೂನ್‌ನಲ್ಲಿ ಆರಂಭಿಸಲಿದ್ದೇವೆ ಎಂದರು.

ಪ್ರೀತಿಕಾ ಚಾಕೋಟೆ ಪ್ರಾರ್ಥಿಸಿದರು. ನಿರ್ಗಮಿತ ಕಾರ್ಯದರ್ಶಿ ನವೀನ ನನ್ಯ ಪಟ್ಟಾಜೆ ಸ್ವಾಗತಿಸಿ, ನೂತನ ಕಾರ್ಯದರ್ಶಿ ಸತೀಶ್‌ ಮದ್ಲ ವಂದಿಸಿದರು. ಸದಸ್ಯ ಶಶಿಕುಮಾರ್‌ ಪಿ. ನಿರೂಪಿಸಿದರು.

Advertisement

ಅರಿಯಡ್ಕ ಗ್ರಾ.ಪಂ. ಉಪಾಧ್ಯಕ್ಷ ಲೋಕೇಶ್‌ ಚಾಕೋಟೆ, ಸದಸ್ಯರಾದ ಹೊನ್ನಪ್ಪ ಪೂಜಾರಿ ಪಿಲಿಪಂಜರ, ನವೀನ ಬಿ.ಡಿ., ಸೀತಾರಾಮ ಮೇಲ್ಪಾದೆ, ಮಾಟ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್‌ ಕೊಚ್ಚಿ, ಉಪಾಧ್ಯಕ್ಷ ಸುರೇಂದ್ರ ಬೋರ್ಕರ್‌ ನನ್ಯ, ನಿರ್ದೇಶಕ ನಾರಾಯಣ ರೈ ಮದ್ಲ, ಕಾವು ಸಹಕಾರ ಸಂಘದ ನಿರ್ದೇಶಕ ಚಂದ್ರಶೇಖರ ರಾವ್‌ ನಿಧಿಮುಂಡ, ಸಿಇಒ ಕೇಶವ ಮೂರ್ತಿ ಪಿ.ಜಿ., ರಾಧಾಕೃಷ್ಣ ಬೋರ್ಕರ್‌ ನನ್ಯ, ಶಿಕ್ಷಕ ಗೋಪಾಲಕೃಷ್ಣ ಭಟ್‌ ಕಮಲಡ್ಕ, ಕಾವು ನವೋದಯ ಒಕ್ಕೂಟದ ಅಧ್ಯಕ್ಷ ಚಿದಾನಂದ ಆಚಾರ್ಯ ಸಸ್ಪೆಟ್ಟಿ, ರಾಮದಾಸ ರೈ ಮದ್ಲ, ಮಾಣಿಯಡ್ಕ ದುರ್ಗಾವಾಹಿನಿ ಮಹಿಳಾ ಭಜನ ಸಂಘದ ಅಧ್ಯಕ್ಷೆ ಮಧುಮತಿ, ಸದಸ್ಯೆ ಗೀತಾ ಮಾಣಿಯಡ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರೇರಕಿ ಸುಧಾ, ಆನಂದ ಗೌಡ ಹೊಸಮನೆ, ತುಡರ್‌ ಯುವಕ ಮಂಡಲದ ಮಾಜಿ ಅಧ್ಯಕ್ಷ ಭಾಸ್ಕರ ಬಲ್ಯಾಯ, ಚಂದ್ರಶೇಖರ ಬಲ್ಯಾಯ, ಭಜನ ಸಂಘದ ಅಧ್ಯಕ್ಷ ರಾಮಣ್ಣ ನಾಯ್ಕ ಆಚಾರಿಮೂಲೆ, ಕಾರ್ಯದರ್ಶಿ ಸಂಕಪ್ಪ ಪೂಜಾರಿ ಚಾಕೋಟೆ, ಸದಸ್ಯರಾದ ಧನಂಜಯನಾಯ್ಕ ಕುಂಞಿಕುಮೇರು, ಪುರುಷೋತ್ತಮ ಆಚಾರ್ಯ ನನ್ಯ, ಹರ್ಷ ಎ.ಆರ್‌., ರಾಘವ ಪಿ.ಎಸ್‌., ರಮೇಶ್‌ ಗೌಡ, ರಾಜೇಶ್‌ ಬಿ., ನಿರಂಜನ ಕಮಲಡ್ಕ, ದಿವ್ಯಪ್ರಸಾದ್‌ ಎ.ಎಂ., ಶ್ರೀಕಾಂತ್‌ ಗೌಡ, ಸಂದೇಶ್‌ ಚಾಕೋಟೆ, ಲಿಂಗಪ್ಪ ನಾಯ್ಕ ನನ್ಯ, ಮೋಹನಚಂದ್ರ ಆಚಾರಿಮೂಲೆ, ಬಾಲಕೃಷ್ಣ ಪಾಟಾಳಿ, ಹರೀಶ್‌ ಕೆರೆಮೂಲೆ, ಆನಂದ ಮೂಲ್ಯ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next