ಹೊಸದಿಲ್ಲಿ: 4.5 ಲಕ್ಷ ಕೋಟಿ ರೂ.ವೆಚ್ಚದಲ್ಲಿ ದೇಶಾದ್ಯಂತ ಒಟ್ಟು 10,000 ಕಿಮೀ ಉದ್ದದ ಹಲವಾರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗಳನ್ನು ಸರಕಾರ ನಿರ್ಮಿಸುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸೋಮವಾರ ಹೇಳಿದ್ದಾರೆ.
ಐಐಎಂ ಕೋಝಿಕ್ಕೋಡ್ ಆಯೋಜಿಸಿದ್ದ ‘ಮೂಲಸೌಕರ್ಯ ಹಣಕಾಸು ನಿರ್ವಹಣೆ ಅಭಿವೃದ್ಧಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವರು ಭಾರತಮಾಲಾ ಪರಿಯೋಜನೆಯಡಿಯಲ್ಲಿ ರಸ್ತೆ ಜಾಲವನ್ನು ನಿರ್ಮಾಣಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವಿವಿಧ ಮಾದರಿಗಳ ಹಣಕಾಸು ನಿಧಿಯ ಮೂಲಕ 70,000 ಕೋಟಿ ರೂ.ಗೂ ಹೆಚ್ಚು ಆದಾಯವನ್ನು ಗಳಿಸಿದೆ ಮತ್ತು ಈ ಮೊತ್ತವನ್ನು ಹೆದ್ದಾರಿ ಯೋಜನೆಗಳನ್ನು ನಿರ್ಮಿಸಲು ಬಳಸಲಾಗುವುದು ಎಂದು ಹೇಳಿದ್ದಾರೆ.
“ದೇಶದಾದ್ಯಂತ 65,000 ಕಿಮೀ ಹೆದ್ದಾರಿ ಅಭಿವೃದ್ಧಿಯ ಭಾರತಮಾಲಾ ಪರಿಯೋಜನಾವನ್ನು ಸರಕಾರವು ಪರಿಕಲ್ಪನೆ ಮಾಡಿದೆ. ಹಂತ 1 ರಸ್ತೆ ಜಾಲವು 34,800 ಕಿಮೀ ಆಗಿದ್ದು ನಾವು ರೂ 4.5 ಲಕ್ಷ ಕೋಟಿ ರೂ. ವೆಚ್ಚದಲ್ಲಿ 10,000 ಕಿಮೀ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸುತ್ತಿದ್ದೇವೆ,”ಎಂದರು
ಸಚಿವರ ಪ್ರಕಾರ, ಭಾರತದ ಒಟ್ಟು ರಾಷ್ಟ್ರೀಯ ಹೆದ್ದಾರಿ (NH) ಜಾಲವು 2014 ರಲ್ಲಿ 91,000 ಕಿಮೀಗಳಿಂದ ಪ್ರಸ್ತುತ ಸುಮಾರು 1.45 ಲಕ್ಷ ಕಿಮೀಗೆ ವಿಸ್ತರಿಸಲ್ ಪಟ್ಟಿದೆ.