Advertisement

Elections: ಏಕಕಾಲದ ಚುನಾವಣೆ ನಡೆದರೆ 15 ವರ್ಷಕ್ಕೊಮ್ಮೆ 10,000 ಕೋ.ರೂ. ವೆಚ್ಚ

12:00 AM Jan 21, 2024 | Team Udayavani |

ಹೊಸದಿಲ್ಲಿ : ಏಕಕಾಲದದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ನಡೆದರೆ ಪ್ರತೀ 15 ವರ್ಷಕ್ಕೊಮ್ಮೆ ಹೊಸ ಎಲೆಕ್ಟ್ರಾನಿಕ್‌ ಮತ ಯಂತ್ರ(ಇವಿಎಂ) ಖರೀದಿಗಾಗಿ 10,000 ಕೋಟಿ ರೂ. ಬೇಕಾಗಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಅಂದಾಜಿಸಿದೆ. ಒಂದು ಇವಿಎಂನ ಬಾಳಿಕೆ ಅವಧಿ 15 ವರ್ಷಗಳು. ಒಂದು ಇವಿಎಂ ಅನ್ನು ಏಕಕಾಲಕ್ಕೆ ನಡೆಯುವ ಮೂರು ಚುನಾವಣ ಸರಣಿಗೆ ಬಳಸಬಹುದು.

Advertisement

ಅಂದಾಜಿನ ಪ್ರಕಾರ, ಏಕಕಾಲಕ್ಕೆ ಚುನಾವಣೆ ನಡೆದರೆ, ಲೋಕಸಭೆ ಮತ್ತು ವಿಧಾನಸಭೆ ಸ್ಥಾನಗಳಿಗೆ ಪ್ರತ್ಯೇಕ ಇವಿಎಂ ಅಂದರೆ ಒಂದು ಮತಗಟ್ಟೆಗೆ ಎರಡು ಸೆಟ್‌ ಇವಿಎಂ ಬೇಕಾಗುತ್ತದೆ ಎಂದು ಆಯೋಗ ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next