Advertisement
ಡಿಜಿ ಪ್ರಶಾಂತ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ಅಯೋಧ್ಯೆಯ ಪ್ರತಿ ರಸ್ತೆಗಳಲ್ಲೂ ಭದ್ರತೆ ಖಾತರಿ ಪಡಿಸಿಕೊಳ್ಳಲಾಗುತ್ತಿದೆ. ಕೆಂಪು ಜೋನ್, ಹಳದಿ ಜೋನ್ ಸೇರಿದಂತೆ ಜಿಲ್ಲಾದ್ಯಂತ ರಸ್ತೆಗಳ ಮೇಲೆ ಕಣ್ಗಾವಲಿರಿಸಲಾಗಿದೆ. ಇನ್ನು ಅಯೋಧ್ಯೆಗೆ ಸಂಪರ್ಕ ಹೊಂದುವ ಪ್ರಮುಖ ರಸ್ತೆಗಳನ್ನು ಹಸಿರು ಕಾರಿಡಾರ್ ಎಂದು ಗುರುತಿಸಿ ಅಲ್ಲಿ ಯಾವುದೇ ಸಂಚಾರ ದಟ್ಟಣೆ ಏರ್ಪಡದಂತೆ ಜಾಗ್ರತೆ ವಹಿಸಿದ್ದೇವೆ ಎಂದಿದ್ದಾರೆ. ಜತೆಗೆ ಎಐ ಆಧಾರಿತ ಭದ್ರತಾ ತಂತ್ರಜ್ಞಾನಗಳನ್ನೂ ಬಳಕೆ ಮಾಡಲಾಗಿದೆ ಅಲ್ಲದೇ ಹೆಚ್ಚುವರಿ ಭದ್ರತೆಗಾಗಿ ಮಫ್ತಿಯಲ್ಲಿರುವ (ಸಿವಿಲ್ ಡ್ರೆಸ್) ಪೊಲೀಸರನ್ನೂ ನಿಯೋಜಿಸಿರುವುದಾಗಿ ಕುಮಾರ್ ತಿಳಿಸಿದ್ದಾರೆ. ಇನ್ನು ಸರಯೂ ನದಿದಂಡೆಯಲ್ಲಿ ಎಸ್‌ಡಿಆರ್‌ಎಫ್,. ಎನ್‌ಡಿಆರ್‌ಎಫ್ ಪಡೆಗಳನ್ನು ನಿಯೋಜಿಸಲಾಗಿದ್ದು, ನಗರದಾದ್ಯಂತ ಆ್ಯಂಟಿ ಡ್ರೋನ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ ಎಂದಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆ ಹಾಗೂ ಪಶ್ಚಿಮ ಬಂಗಾಳದ ಕೋಲ್ಕತ್ತಾ ನಡುವೆ ಸಂಚಾರ ನಡೆಸಲಿರುವ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಬುಧವಾರ ಚಾಲನೆ ನೀಡಿದ್ದಾರೆ. ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಉಪಸ್ಥಿತಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಮಾನ ಸಂಚಾರಕ್ಕೆ ಹಸಿರು ನಿಶಾನೆ ನೀಡಲಾಗಿದೆ. ಮಂದಿರ ಉದ್ಘಾಟನೆ ಸಮೀಪಿಸುತ್ತಿರುವಂತೆಯೇ ಭಕ್ತಾದಿಗಳ ಭೇಟಿಗೆ ಈ ಕ್ರಮ ಸಹಕಾರಿಯಾಗಲಿದೆ. ಜ.21-22ಕ್ಕೆ ಅಯೋಧ್ಯೆಯಲ್ಲಿ ರೈಲುಗಳು, ಬಸ್‌ಗಳು ನಿಲ್ಲಲ್ಲ
ಪ್ರಾಣ ಪ್ರತಿಷ್ಠೆ ದಿನದಂದು ಸಂಭವಿಸಬಹುದಾದ ಸಂಚಾರ ದಟ್ಟಣೆಯನ್ನು ಗಮನದಲ್ಲಿ ಟ್ಟುಕೊಂಡು ಸುಗಮ ಸಂಚಾರ ಖಾತರಿ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಡಳಿತವು ಜ.21 ಮತ್ತು 22ರಂದು ಯಾವುದೇ ಬಸ್ ಅಥವಾ ರೈಲುಗಳು ಅಯೋಧ್ಯೆ ಯಲ್ಲಿ ನಿಲುಗಡೆ ಹೊಂದದಂತೆ ಸೂಚನೆ ನೀಡಿವೆ. ಈ ನಿಟ್ಟಿನಲ್ಲಿ ಅಯೋಧ್ಯೆ ಜಂಕ್ಷನ್‌ನಲ್ಲಿ ರೈಲು ಗಳು ಸ್ಟಾಪ್ ನೀಡುವುದಿಲ್ಲ. ಜತೆಗೆ ಅಯೋ ಧ್ಯೆ ಮಾರ್ಗವಾಗಿ ಓಡಾಡುವ ಯಾವುದೇ ಬಸ್‌ಗಳು ಕೂಡ ಅಯೋಧ್ಯೆಯಲ್ಲಿ ನಿಲ್ಲುವುದಿಲ್ಲ ಎನ್ನಲಾಗಿದೆ.
Related Articles
ರಾಮ ಮಂದಿರದ ಹೆಸರಿನಲ್ಲಿ ಅಕ್ರಮ ದೇಣಿಗೆ ಸಂಗ್ರಹ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ, ರಾಮ ಮಂದಿರ ಪ್ರಾಸದ ಎಂದು ಹೇಳಿಕೊಂಡು ಆನ್‌ಲೈನ್‌ಗಳಲ್ಲಿ ಕೆಲ ಸಂಸ್ಥೆಗಳು ಲಡ್ಡು ಮಾರಾಟ ಮಾಡಿ, ಭಕ್ತರನ್ನು ವಂಚಿಸುತ್ತಿ ರುವುದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಹಿಂದೂ ಪರಿಷತ್ ಎಫ್ಐಆರ್ ದಾಖಲಿಸಿದೆ. ಅಮೆಜಾನ್‌ನಲ್ಲಿ “ಬಿಹಾರಿ ಬ್ರದರ್ಸ್’ ಎಂಬ ಸಂಸ್ಥೆ 250 ಗ್ರಾಂ ತೂಕದ ಲಡ್ಡುಗಳನ್ನು ಶ್ರೀರಾಮ ಮಂದಿರ ಅಯೋಧ್ಯಾ ಪ್ರಸಾದ ಎನ್ನುವ ಹೆಸರಿನಲ್ಲಿ 299 ರೂ.ಗಳಿಗೆ ಮಾರಾಟ ಮಾಡುತ್ತಿದೆ. ಪೊಟ್ಟಣದ ಒಳಗೆ ಮಾತ್ರ ಇದು ಅಯೋಧ್ಯೆಯಲ್ಲೇ ಇರುವ ರಾಮಕೋಟದ ರಾಮ ಮಂದಿರದ ಪ್ರಸಾದ ಎಂದು ಬರೆಯಲಾಗಿದೆ.
Advertisement
ಪ.ಬಂಗಾಲದಲ್ಲಿ ಲಕ್ಷದೀಪಗಳ ವಿತರಣೆರಾಮ ಮಂದಿರ ಉದ್ಘಾಟನೆಯಂದು ಪಶ್ಚಿಮ ಬಂಗಾಲದ ನಂದಿಗ್ರಾಮದಲ್ಲಿ ರಾಮಜ್ಯೋತಿಗಳನ್ನು ಬೆಳಗಿಸಲು ಬಿಜೆಪಿ ರಾಜ್ಯ ಘಟಕ ಮುಂದಾಗಿದ್ದು, ಬುಧವಾರ ನಗರ ನಿವಾಸಿಗಳಿಗೆ 1 ಲಕ್ಷ ದೀಪಗಳನ್ನು ವಿತರಿಸಿದೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಸ್ವಕ್ಷೇತ್ರವಾದ ನಂದಿಗ್ರಾಮದ 20,000 ಕುಟುಂಬಗಳಿಗೆ ದೀಪವನ್ನು ವಿತರಿಸಲಾಗಿದ್ದು, ಐತಿಹಾಸಿಕ ರಾಮ ಮಂದಿರ ಉದ್ಘಾಟನೆಯಂದು ಈ ರಾಮ ಜ್ಯೋತಿಗಳು ಬೆಳಗಲಿವೆ ಅಧಿಕಾರಿ ಹೇಳಿದ್ದಾರೆ. ಮಂದಿರ ನಿರ್ಮಾಣ ಪೂರ್ಣ: ನೃಪೇಂದ್ರ ಮಿಶ್ರಾ ಸ್ಪಷ್ಟನೆ
ರಾಮಮಂದಿರ ನಿರ್ಮಾಣ ಪೂರ್ಣವಾಗುವ ಮೊದಲೇ ಪ್ರಾಣಪ್ರತಿಷ್ಠಾಪನೆ ಮಾಡುತ್ತಿರುವುದು ಅಸಂಪ್ರದಾಯ ಎಂಬ ವಾದಗಳ ಬಗ್ಗೆ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ಸ್ಪಷ್ಟನೆ ನೀಡಿದ್ದು, ಈಗಾಗಲೇ ಮಂದಿರವನ್ನು ನಿರ್ಮಿಸ ಲಾಗಿದೆ ಎಂದಿದ್ದಾರೆ. ಈ ಕುರಿತು ಮಾತನಾಡಿ, ರಾಮಲ ಲ್ಲಾನಿ ಗಾಗಿ ಗರ್ಭಗೃಹ ನಿರ್ಮಾಣವಾಗಿದೆ. 5 ಮಂಟಪ, ದೇಗುಲ ಇರುವುದು ನೆಲ ಮಹಡಿಯಲ್ಲೇ. ಅದು ಈಗಾಗಲೇ ನಿರ್ಮಿಸಲಾಗಿದೆ. ಉಳಿದಿರುವುದು ಮೊದಲ ಮಹಡಿಯ ದರ್ಬಾರ್ ಮತ್ತು 2ನೇ ಮಹ ಡಿಯ ಯಾಗ ಶಾಲೆ ಮಾತ್ರ ಎಂದಿದ್ದಾರೆ. ಈ ಮೂಲಕ ಪ್ರಾಣ ಪ್ರತಿಷ್ಠೆ ನಡೆಯುತ್ತಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಅಯೋಧ್ಯೆಯಂತೆ ಚಿತ್ರಕೂಟ ಅಭಿವೃದ್ಧಿ: ಮ.ಪ್ರದೇಶ ಸಿಎಂ
ರಾಮಾಯಣದೊಂದಿಗೆ ಪ್ರಮುಖ ನಂಟುಹೊಂದಿ ರುವ ಮಧ್ಯಪ್ರದೇಶದ ಚಿತ್ರಕೂಟವನ್ನು ಅಯೋಧ್ಯೆಯ ಮಾದರಿಯಲ್ಲೇ ಅಭಿವೃದ್ಧಿ ಪಡಿಸುವುದಾಗಿ ಮಧ್ಯ ಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ. ನಗರದಲ್ಲಿ ಅಭಿವೃದ್ಧಿ ಪಡಿಸಲು ಪ್ರಸ್ತಾಪಿಸಿರುವ ಶ್ರೀರಾಮಚಂದ್ರ ಪಥ ಗಮನ್
ನ್ಯಾಸ್ ಸಂಬಂಧಿಸಿದಂತೆ ನಡೆಸಿದ ಸಭೆಯಲ್ಲಿ ಯಾದವ್ ಮಾತನಾಡಿ, ಚಿತ್ರಕೂಟವನ್ನು ಒಳಗೊಂಡಂತೆ “ರಾಮ ವನ ಪಥ ಗಮನ್ ಮಾರ್ಗ್’ನ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಶೀಘ್ರವೇ ಅಯೋಧ್ಯೆ ಮಾದರಿಯ್ಲಲೇ ಚಿತ್ರಕೂಟವೂ ಅಭಿವೃದ್ಧಿ ಹೊಂದಲಿದೆ ಎಂದಿದ್ದಾರೆ. ವಿಶ್ವದೆಲ್ಲೆಡೆಯಿಂದ ರಾಮಾಯಣ ಸ್ಟಾಂಪ್
ಮಧ್ಯ ಪ್ರದೇಶದ ಇಂದೋರ್ ಮೂಲದ ನಿವಾಸಿ ಓಂ ಪ್ರಕಾಶ್ ಕೆಡಿಯಾ ಅವರು ಕಳೆದ 60 ವರ್ಷದಿಂದ ರಾಮಾಯಣ ವಿಷಯ ಆಧ ರಿಸಿ ಇಂಡೋನೇಷ್ಯಾ, ಮ್ಯಾನ್ಮಾರ್, ನೇಪಾಳ, ಲಾವೋಸ್, ಥೈಲ್ಯಾಂಡ್, ಕಾಂಬೋಡಿಯಾ ದಿಂದ ನೂರಾರು ಸ್ಟಾಂಪ್‌ಗ್ಳನ್ನು ಸಂಗ್ರಹಿಸಿ ತಂದಿದ್ದಾರೆ. ಅವುಗಳನ್ನು ಜ.22ರ ಮಂದಿರ ಉದ್ಘಾಟನೆ ನಿಮಿತ್ತ ಆಯೋಜಿಸಿರುವ ವಸ್ತು ಪ್ರದರ್ಶನದಲ್ಲಿ ಅಂಚೆ ಇಲಾಖೆ ವತಿಯಿಂದ ಪ್ರದರ್ಶಿಸಲಾಗುತ್ತಿದೆ. ರಾಮಲಲ್ಲಾನಿಗೆ 1,265 ಕೆ.ಜಿ.ಯ ಬೃಹತ್ ಲಡ್ಡು
ತೆಲಂಗಾಣದ ಹೈದರಾಬಾದ್‌ನ ನಿವಾಸಿ ಯಾದ ನಾಗಭೂಷಣ ರೆಡ್ಡಿ ಎಂಬವರು ರಾಮ ಮಂದಿರದ ಉದ್ಘಾಟನೆಯಲ್ಲಿ ವಿತರಿಸಲೆಂದು 1,265 ಕೆಜಿಯ ಬೃಹತ್ ಲಡ್ಡು ಒಂದನ್ನು ತಯಾ ರಿಸಿ, ಅಯೋಧ್ಯೆಗೆ ಬುಧವಾರ ಕಳುಹಿಸಿ ಕೊಟ್ಟಿದ್ದಾರೆ. ಶ್ರೀರಾಮ್ ಕ್ಯಾಟರಿಂಗ್ ಅನ್ನುವ ಆಹಾರಸೇವಾ ಸಂಸ್ಥೆಯನ್ನು ನಡೆಸುತ್ತಿ ರುವ ರೆಡ್ಡಿ, ಮಂದಿರದ ಶಿಲಾನ್ಯಾಸ ನೆರವೇರಿದ ದಿನದಂದು ಹಿಡಿದು ಉದ್ಘಾಟನೆಯವರೆಗೆ ಪ್ರತಿ ದಿನ 1 ಕೆಜಿ ಲಡ್ಡು ಸಮರ್ಪಿಸಿದ್ದೇವೆ ಎನ್ನು ವ ಅರ್ಥದಲ್ಲಿ ಒಟ್ಟು 1,265 ದಿನಗಳಿಗೆ ಸೂಚಿ ತವಾಗಿ 1,265 ಕೆಜಿ ತೂಕದ ಬೃಹತ್ ಲಡ್ಡು ತಯಾರಿಸಿದ್ದಾರೆ ಇದಕ್ಕಾಗಿ 30 ಮಂದಿ ಸತತ 24 ಗಂಟೆಗಳ ವರೆಗೆ ಶ್ರಮಿಸಿದ್ದಾರೆ ಎಂದಿದ್ದಾರೆ.