Advertisement

ಒಂದೇ ದಿನದಲ್ಲಿ 1,000 ಗಿಡ ನೆಡುವ ನೆಡುವ ಯೋಜನೆ: ರವೀಂದ್ರ ಶೆಟ್ಟಿ

03:45 AM Jul 03, 2017 | Harsha Rao |

ಉಳ್ಳಾಲ: ಪರಿಸರ ಸಂರಕ್ಷಣೆ  ಎಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ರೋಟರಿ ಕ್ಲಬ್‌ ದೇರಳಕಟ್ಟೆ ದಶಮಾನೋತ್ಸವ ಅಂಗವಾಗಿ  ವಿವಿಧ ಪ್ರದೇಶಗಳಲ್ಲಿ ಒಂದೇ ದಿನದಲ್ಲಿ 1,000 ಗಿಡ ನೆಡುವ ನೆಡುವ ಯೋಜನೆ ರೂಪಿಸಿದ್ದು, ಪರಿಸರ ಪ್ರೇಮಿ ಮತ್ತು ಸದಸ್ಯರ ಪಾಲ್ಗೊಳ್ಳುವಿಕೆಯಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ.  ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಲ್ಲೂ ರೋಟರಿ  ಕ್ಲಬ್‌ ಪಾಲ್ಗೊಳ್ಳುವ ಯೋಚನೆ ಮಾಡಲಾಗಿದೆ ಎಂದು ಎಂದು ದಶಮಾನೋತ್ಸವ ವರ್ಷದ  ರೋಟರಿ ಕ್ಲಬ್‌ ದೇರಳಕಟ್ಟೆಯ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.
ಅವರು ರೋಟರಿ ಕ್ಲಬ್‌ ದೇರಳಕಟ್ಟೆ ಇದರ ದಶಮಾನೋತ್ಸವ ಅಂಗವಾಗಿ  ರವಿವಾರ ಕೊಣಾಜೆ, ಕೋಟೆಕಾರು ಹಾಗೂ ಉಳ್ಳಾಲ ವ್ಯಾಪ್ತಿಯಲ್ಲಿ  ಹಮ್ಮಿಕೊಂಡ 1,000 ಗಿಡ ನೆಡುವ ಕಾರ್ಯಕ್ರಮಕ್ಕೆ ಕೊಣಾಜೆ ಮುಲಾರಗುತ್ತು ಅರಸು ಮುಂಡಿತ್ತಾಯ ನಾಗಬನದ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

Advertisement

ಧಾರ್ಮಿಕ ಮುಖಂಡ ಸುದರ್ಶನ್‌ ಭಟ್‌ ಮಾತನಾಡಿ,  ಸದ್ಯ  ನಾಗ ಬನಗಳು ನಾಗನ ಕಟ್ಟೆಯಾಗಿ ಪರಿವರ್ತ ನೆಗೊಳ್ಳುತ್ತಿವೆ. ಕಟ್ಟೆಗಳನ್ನು ಕಟ್ಟುವ ಸಂದರ್ಭ ಸುತ್ತಲಿರುವ  ಗಿಡಮರಗಳನ್ನು ಕಡಿಯಲಾಗುತ್ತಿದೆ. ಆದರೆ ವಾಸ್ತವವಾಗಿ ನಾಗದೇವರು ಇರುವ ಸಾನ್ನಿಧ್ಯ  ವನದಂತೆ ಇರಬೇಕಿದ್ದು, ಇದಕ್ಕೆ ಪೂರಕವಾಗಿ ಇಂದು ರೋಟರಿ ಕ್ಲಬ್‌ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.  ಪರಿಸರ ಕಾರ್ಯಕರ್ತ ಮಾಧವ ಉಳ್ಳಾಲ್‌ ಮಾತನಾಡಿ, ಔಷಧೀಯ ಹಾಗೂ  ಹೆಚ್ಚು ಆಮ್ಲಜನಕ ವನ್ನು ನೀಡುವಂತಹ ಗಿಡಗಳನ್ನು ನಾಗನ ಕಟ್ಟೆಯ ಸುತ್ತಲೂ  ನೆಡುವ ಯೋಜನೆ ರೂಪಿಸಲಾಗಿದೆ. ರಕ್ತಚಂದನ, ಸಂಪಿಗೆ, ಅರ್ಜುನ, ಕೆಂಡಸಂಪಿಗೆ, ಹೊಳೆದಾಸವಾಳ, ಸೀತಶೋಕ, ರೆಂಜ, ಸಾಗುವಾನಿಯ  ಸುಮಾರು  65  ಗಿಡಗಳನ್ನು ಕಟ್ಟೆಯ ಸುತ್ತಲೂ ನೆಟ್ಟು, ಮತ್ತೆ ನಾಗದೇವರ ಸಾನ್ನಿಧ್ಯಕ್ಕೆ ವನದ ರೂಪವನ್ನು  ಕೊಡುವ ಪ್ರಯತ್ನ ನಡೆ ಸ ಲಾ ಗು ವು ದು ಎಂದರು. ಮಂಗಳ  ಗಂಗೋತ್ರಿ ಲಯನ್ಸ್‌ ಕ್ಲಬ್‌ನ ಮಾಜಿ ಅಧ್ಯಕ್ಷ ಪ್ರಸಾದ್‌ ರೈ ಕಲ್ಲಿಮಾರ್‌, ರೋಟರಿ ಕ್ಲಬ್‌ ಕಾರ್ಯದರ್ಶಿ ಜೆ.ಪಿ.ರೈ, ರೋಟರಿ ಮಾಜಿ ಗವರ್ನರ್‌ ವಿಕ್ರಂ ದತ್ತಾ, ಡಾ| ಅನಂತನ್‌, ದಶಮಾನ ಸಮಿತಿ ಅಧ್ಯಕ್ಷ  ಪಿ.ಡಿ.ಶೆಟ್ಟಿ, ಮಾಜಿ ಅಧ್ಯಕ್ಷ ರಾಮಕೃಷ್ಣ ನಾಯಕ್‌, ಲತೀಶ್‌, ಚಂದ್ರಶೇಖರ್‌, ಶ್ರೀಪ್ರಸಾದ್‌ ಆಳ್ವ, ಪುರುಷೋತ್ತಮ್‌ ಅಂಚನ್‌ , ಡಿ.ಎನ್‌.ರಾಘವ  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next