ಬೆಂಗಳೂರು: ಒಳನಾಡು ಮೀನುಗಾರಿಕೆಗೆ ಮುಂದೆ ಬರುವವ ರಿಗೆ ಸ್ತ್ರೀಶಕ್ತಿ ಸಂಘಗಳು ಮತ್ತು ಸ್ವಾಮಿ ವಿವೇಕಾನಂದ ಸಂಘಗಳ ಮೂಲಕ ಸಹಾಯ ಧನ ನೀಡಲು ಸರಕಾರ ನಿರ್ಧ ರಿಸಿದೆ. ಇದರಡಿ ಕನಿಷ್ಠ ಸಾವಿರ ಸಂಘಗಳಿಗೆ ಪ್ರಸಕ್ತ ಸಾಲಿನಲ್ಲಿ ಕೇಬಲ್ ನೆಟ್ ಮೀನುಗಾರಿಕೆಗೆ ಸಹಾಯ ಧನ ನೀಡಲಾಗು ವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ 2022ನೇ ಸಾಲಿನ ಒಳನಾಡು ಮೀನು ಉತ್ಪಾದಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸಚಿವರಾದ ಡಾ| ಸಿ.ಎನ್.ಅಶ್ವತ್ಥ ನಾರಾಯಣ, ಬೈರತಿ ಬಸವರಾಜ, ಕೋಟ ಶ್ರೀನಿವಾಸ ಪೂಜಾರಿ, ಬಿ.ಸಿ. ನಾಗೇಶ, ಶಾಸಕ ಸಂಜೀವ ಮಠಂ ದೂರು, ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಉಪಸ್ಥಿತರಿದ್ದರು.
ಮೀನುಗಾರರು ದೊಡ್ಡ ಟ್ರಾಲರ್ ಬಳಸಿ ಆಳ ಸಮುದ್ರ ಮೀನುಗಾರಿಕೆ ಮಾಡಲು ಅನುಕೂಲವಾಗಲೆಂದು ಈ ವರ್ಷ ಕೇಂದ್ರದ ಮತ್ಸéಸಂಪದ ಯೋಜನೆಯಡಿ ನೂರು ಹೊಸ ಆಳ ಸಮುದ್ರ ಬೋಟುಗಳನ್ನು ಒದಗಿಸಲಾಗುತ್ತಿದೆ. ಸೀಮೆಎಣ್ಣೆ, ಡೀಸೆಲ್ ಸಬ್ಸಿಡಿ ದರದಲ್ಲಿ ಪೂರೈಕೆ, ಮನೆಗಳ ನಿರ್ಮಾಣ ಸೇರಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
-ಎಸ್. ಅಂಗಾರ, ಸಚಿವ