Advertisement

TN: ಪೊಂಗಲ್‌ಗೆ ತಲಾ 1,000 ನಗದು, ಧೋತಿ, ಸೀರೆ: ಸ್ಟಾಲಿನ್‌ ಘೋಷಣೆ

12:34 AM Jan 06, 2024 | Team Udayavani |

ಚೆನ್ನೈ:  ಸುಗ್ಗಿ ಹಬ್ಬ ಪೊಂಗಲ್‌ (ಸಂಕ್ರಾಂತಿ) ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರವು ರಾಜ್ಯದ ಜನರಿಗೆ ವಿಶೇಷ ಉಡುಗೊರೆ ಘೋಷಿಸಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಉದ್ಯೋಗಿಗಳು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿರುವ ಆದಾಯ ತೆರಿಗೆದಾರರನ್ನು ಹೊರತು ಪಡಿಸಿ, ಉಳಿದಂತೆ ಪಡಿತರ ಚೀಟಿ ಹೊಂದಿರುವ ಎಲ್ಲ ನಾಗರಿಕರಿಗೂ ಸುಗ್ಗಿ ಸಂಭ್ರಮದ ಭಾಗವಾಗಿ ತಲಾ 1,000 ರೂ.ಗಳ ಪ್ರೋತ್ಸಾಹ ಧನ ನೀಡುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹೇಳಿದ್ದಾರೆ.

Advertisement

ಜ.10ರಿಂದಲೇ ನ್ಯಾಯಬೆಲೆ ಅಂಗಡಿಗಳಲ್ಲಿ ಇದರ ವಿತರಣೆ ನಡೆಯಲಿದೆ. ಇದರ ಜತೆಗೆ 1 ಕೆ.ಜಿ. ಅಕ್ಕಿ , ಸಕ್ಕರೆ, ಕಬ್ಬು, ಸೀರೆ -ಪಂಚೆಯೂ ಉಡುಗೊರೆಯಾಗಿ ದೊರೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next