Advertisement

ಸಂಸತ್‌ ಭವನಕ್ಕೆ ಶತಮಾನದ ಸಂಭ್ರಮ

09:45 AM Feb 13, 2021 | Team Udayavani |

ನವದೆಹಲಿ: ಭಾರತದ ಸಂಸತ್‌ ಭವನಕ್ಕೆ ಶುಕ್ರವಾರ ಒಂದು ಶತಮಾನ ಪೂರ್ಣಗೊಂಡಿದೆ! 100 ವರ್ಷಗಳ ಹಿಂದೆ ಅಂದರೆ, ಫೆ.12, 1921ರಂದು ಬ್ರಿಟನ್‌ನ ಡ್ನೂಕ್‌ ಆಫ್ ಕನ್ನಾಟ್‌ ದೆಹಲಿಯಲ್ಲಿನ ಸಂಸತ್‌ ಭವನಕ್ಕೆ ಅಡಿಗಲ್ಲು ಹಾಕಿದ್ದರು.

Advertisement

560 ಅಡಿ ವ್ಯಾಸ, ಒಂದು ಮೈಲಿಯ 1ನೇ 3 ಭಾಗದಷ್ಟು ಸುತ್ತಳತೆ ಹೊಂದಿರುವ ಕಟ್ಟ ಡಕ್ಕೆ ಸರ್‌ ಹರ್ಬರ್ಟ್‌ ಬೇಕರ್‌, ಸರ್‌ ಎಡ್ವಿನ್‌ ಲೂಟೆನ್ಸ್‌ ವಿನ್ಯಾಸ ರೂಪಿಸಿದ್ದರು. ಇವರ ಮಾರ್ಗದರ್ಶನದಲ್ಲಿ ಬ್ರಿಟಿಷ್‌ ಇಂಡಿಯಾದ ಅನುಕೂಲಕ್ಕಾ ಗಿ ದೆಹಲಿಯ ಹೃದಯ ಭಾಗದ ರೈಸಿನಾ ಹಿಲ್‌ ನಲ್ಲಿ ಸಂಸತ್‌ ಕಟ್ಟಡದ ನಿರ್ಮಾಣ ಕೆಲಸಗಳು ಚಾಲನೆಗೊಂಡಿದ್ದವು.

ಇದನ್ನೂ ಓದಿ:ಎರಡನೇ ಟೆಸ್ಟ್: ಮಹತ್ವದ ಟಾಸ್ ಗೆದ್ದ ವಿರಾಟ್, ಟೀಂ ಇಂಡಿಯಾದಲ್ಲಿ ಮೂರು ಬದಲಾವಣೆ

6 ವರ್ಷಗಳ ಕಾಮಗಾರಿ ಬಳಿಕ 1927ರಲ್ಲಿ ಸಂಸತ್‌ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಗಿತ್ತು. ಪ್ರಸ್ತುತ ಇದರ ಪಕ್ಕದಲ್ಲಿಯೇ ನೂತನ ಸಂಸತ್‌ ಭವನ ಮತ್ತು ಕೇಂದ್ರ ಸರ್ಕಾರದ ಸಚಿವಾಲಯದ ಕಟ್ಟಡ ನಿರ್ಮಾಣ ಶುರುವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next