Advertisement

ಶೇ.100ರಷ್ಟು ಲಸಿಕೆ ಗುರಿ: ಶಾಸಕ ನಿರಂಜನ್‌

12:13 PM Jun 01, 2021 | Team Udayavani |

ಗುಂಡ್ಲುಪೇಟೆ: ಪ್ರತಿ ಗ್ರಾಮದಲ್ಲೂ ಎಲ್ಲರೂ ಲಸಿಕೆ ಪಡೆಯಬೇಕು. ಸೋಂಕಿನ ಲಕ್ಷಣ ಕಂಡರೆ ಟೆಸ್ಟ್‌ ಗೊಳಪಡಿಸಬೇಕು. ಪಾಸಿಟಿವ್‌ ಬಂದರೆ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಿಸಬೇಕು ಎಂದು ಶಾಸಕ ಸಿ. ಎಸ್‌.ನಿರಂಜನಕುಮಾರ್‌ ಆಶಾ ಕಾರ್ಯಕರ್ತೆಯರಿಗೆ ಸಲಹೆ ನೀಡಿದರು.

Advertisement

ತಾಲೂಕಿನ ಕಬ್ಬಳ್ಳಿ ಜಿಪಂ ವ್ಯಾಪ್ತಿಯ ಶಿಂಡನಪುರ, ಬನ್ನೀತಾಳಪುರ, ಪಡುಗೂರು,ಕಬ್ಬಳ್ಳಿ, ಅಗತಗೌಡನಹಳ್ಳಿಗ್ರಾಪಂಗಳಲ್ಲಿ ಟಾಸ್ಕ್ಫೋರ್ಸ್‌ ಸಭೆ ನಡೆಸಿ ಮಾತನಾಡಿ, 2ನೇ ಅಲೆಯಲ್ಲಿ ತಾಲೂಕಿನ ಕೆಲಸೂರುಪುರದಲ್ಲಿ ಯಾರಿಗೂ ಸೋಂಕು ತಗುಲಿಲ್ಲ. ಆ ರೀತಿ ಗ್ರಾಪಂನ ಎಲ್ಲ ಗ್ರಾಮಗಳು ಕೊರೊನಾ ಮುಕ್ತವಾಗಬೇಕು. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಈ ವೇಳೆ ತಹಶೀಲ್ದಾರ್‌ ರವಿಶಂಕರ್‌, ಇಒ ಶ್ರೀಕಾಂತ ರಾಜೇ ಅರಸ್‌, ಸಿಡಿಪಿಒ ಚಲುವರಾಜು, ಪಿಡಿಒ ನಾಗರಾಜಪ್ಪ, ಪುರಸಭೆ ಅಧ್ಯಕ್ಷ ಪಿ.ಗಿರೀಶ್‌, ಮಂಡಲ ಅಧ್ಯಕ್ಷ ಡಿಪಿ ಜಗದೀಶ್‌, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಎನ್‌.ಮಲ್ಲೇಶ್‌, ಮುಖಂಡರಾದ ಕಲ್ಲಹಳ್ಳಿ ಮಹೇಶ್‌, ಮಲ್ಲಿಕಾರ್ಜುನಪ್ಪ, ಮಹದೇವಪ್ರಸಾದ್‌, ಸುನಿಲ್‌, ಶಿಂಡನಪುರ ಮಂಜು, ಎಸ್‌.ಟಿ. ಮಹದೇವಸ್ವಾಮಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next