Advertisement

ಪ್ರತಿ ಮಗುವಿಗೆ ನೂರು ಮರಗಳ ನೆಡುವ ಅಭಿಯಾನಕ್ಕೆ ಚಾಲನೆ

10:11 PM Feb 03, 2023 | Team Udayavani |

ಗ್ಯಾಂಗ್ಟಕ್‌ : ಮನುಷ್ಯ ಮತ್ತು ಪ್ರಕೃತಿ ನಡುವಿನ ಅವಿನಾಭಾವ ಸಂಬಂಧವನ್ನು ಗಟ್ಟಿಗೊಳಿಸುವುದರ ಜತೆಗೆ ಮಾನವ ಸಂಬಂಧಗಳನ್ನು ಪ್ರಕೃತಿಯೊಂದಿಗೆ ಬೆಸೆಯುವ ಪ್ರಯತ್ನವಾಗಿ ಸಿಕ್ಕಿಂ ಸರ್ಕಾರ ಪ್ರತಿ ಮಗುವಿಗೆ ನೂರು ಮರ ಎನ್ನುವ ವಿಶಿಷ್ಟ ಉಪಕ್ರಮವೊಂದನ್ನು ಆರಂಭಿಸಿದೆ.

Advertisement

ರಾಜ್ಯದಲ್ಲಿ ಜನ್ಮ ತಳೆವ ಪ್ರತಿ ಶಿಶುವಿಗೆ 100 ಸಸಿಗಳನ್ನ ಉಡುಗೊರೆಯಾಗಿ ನೀಡುವ “ಮೇರೋ ರುಖ್‌, ಮೇರೋ ಸಂತತಿ'(ಮರ ಬೆಳೆಸಿ, ಪರಂಪರೆ ಉಳಿಸಿ) ಎನ್ನುವ ಉಪಕ್ರಮ ಇದಾಗಿದ್ದು, ಮಗುವಿನ ಪೋಷಕರು ತಮ್ಮ ಕಂದನ ಆಗಮನದ ಸಂಕೇತವಾಗಿ 100 ಸಸಿಗಳನ್ನು ಪಡೆದು, ನೆಡಲಿದ್ದಾರೆ.

ಮಕ್ಕಳ ಜತೆ-ಜತೆಯಲ್ಲೇ ಸಸಿಗಳು ಬೆಳೆದು ಮರವಾಗುವ ಮೂಲಕ ಪೋಷಕರು-ಮಕ್ಕಳು ಹಾಗೂ ಪಕೃತಿ ನಡುವಿನ ಸಂಬಂಧಕ್ಕೆ ಸಾಕ್ಷಿಯಾಗಲಿವೆ.ಹಿಮಾಲಯದ ತಪ್ಪಲಿನಲ್ಲಿರುವ ಸಿಕ್ಕಿಂ ಪರ್ವತದಿಂದ ಆಸರೆ ಪಡೆದುಕೊಂಡಿದೆ.

ಪ್ರಕೃತಿಯನ್ನೇ ದೇವರೆಂದೇ ನಾವು ಆರಾಧಿಸುತ್ತೇವೆ ಅಂಥ ಪ್ರಕೃತಿಗೆ ನಾವು ನೀಡಬಹುದಾದ ಸಣ್ಣ ಉಡುಗೊರೆ ಈ ಉಪಕ್ರಮ ಎಂದು ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಾಮಂಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next