Advertisement

ಕೆಯ್ಯೂರು ಕಾಲೇಜಿಗೆ ಶೇ.100: ಅಭಿನಂದನೆ 

12:25 PM May 11, 2018 | Team Udayavani |

ಕೆಯ್ಯೂರು: ಕೆಯ್ಯೂರಿನ ಸರಕಾರಿ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 100 ಫ‌ಲಿತಾಂಶ ಗಳಿಸಿದ್ದು, ಸಂಸ್ಥೆಯು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣವಾದ ಈ ಸಾಧನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಹೆತ್ತವರನ್ನು ಅಭಿನಂದಿಸುವ ಸಮಾರಂಭ ಕಾಲೇಜಿನಲ್ಲಿ ನಡೆಯಿತು.

Advertisement

ದ್ವಿತೀಯ ಪಿಯುಸಿಯ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಶೇ. 100 ಫ‌ಲಿತಾಂಶ ಕಾಲೇಜಿಗೆ ಬಂದಿದೆ. ಇದಕ್ಕೆ ಕಾರಣಕರ್ತರಾದ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರನ್ನು ಕಾಲೇಜು ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ಪ್ರಾಂಶುಪಾಲರು ಅಭಿನಂದಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಸ್‌.ಬಿ. ಜಯರಾಮ ರೈ ಅಧ್ಯಕ್ಷತೆ ವಹಿಸಿ, ಕಠಿನ ಪರಿಶ್ರಮ ಹಾಗೂ ಶ್ರದ್ಧೆಯಿಂದ ಕಾರ್ಯಪ್ರವೃತ್ತರಾದರೆ ಎಲ್ಲ ರಂಗಗಳಲ್ಲಿ ಯಶಸ್ಸು ಸಾಧ್ಯ. ಸತತ ಪ್ರಯತ್ನದ ಮೂಲಕ ವಿದ್ಯಾರ್ಥಿಗಳು ಮುಂದೆಯೂ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಹಾರೈಸಿದರು.

ಕಾಲೇಜಿನ ಪ್ರಾಚಾರ್ಯೆ ಸುನಂದಾ ವಿ.ಕೆ. ಸ್ವಾಗತಿಸಿದರು. ಉಪನ್ಯಾಸಕರಾದ ಗೀತಾ, ಪ್ರಸನ್ನ ಕುಮಾರಿ, ಪ್ರೌಢಶಾಲಾ ಶಿಕ್ಷಕ ಜಗದೀಶ ಹಾಗೂ ವಿದ್ಯಾರ್ಥಿನಿ ಸೌಜನ್ಯಾ ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕ ಇಸ್ಮಾಯಿಲ್‌ ಪಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕಿ ಉಮಾಶಂಕರಿ ಧನ್ಯವಾದ ಸಮರ್ಪಿಸಿದರು. ಉಪನ್ಯಾಸಕಿ ಗೀತಾ ಕಾರ್ಯಕ್ರಮ ನಿರೂಪಿಸಿದರು.

ಸಮ್ಮಾನಿತರು
ವಿಶಿಷ್ಟ ಶ್ರೇಣಿ ಗಳಿಸಿದ ಸೌಜನ್ಯಾ (ಕಲಾ ವಿಭಾಗ), ರಾಜೇಶ, ಜೆಸ್ಮಿತಾ, ಶಾಹಿನಾ, ಆಯಿಷತ್‌ ಫ‌ಮೀನಾ (ವಾಣಿಜ್ಯ
ವಿಭಾಗ) ಹಾಗೂ ಫಾತಿಮತ್‌ ಸಫ‌ರೀನಾ (ವಿಜ್ಞಾನ ವಿಭಾಗ) ಅವರನ್ನು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಸ್‌.ಬಿ. ಜಯರಾಮ ರೈ ಸಮ್ಮಾನಿಸಿದರು. ಎಲ್ಲ ಉಪನ್ಯಾಸಕರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next