Advertisement
ಪಾಸಿಟಿವ್ ಸಂಖ್ಯೆ ಕಡಿಮೆ: ದೇಶಾದ್ಯಂತ ಸೋಂಕು ಪತ್ತೆ ಪರೀಕ್ಷೆಯನ್ನು ವ್ಯಾಪಕವಾಗಿ ಹೆಚ್ಚಿಸ ಲಾಗಿದೆ. ಇದರ ಜತೆಗೆ ಸೋಂಕು ಪಾಸಿಟಿವ್ ಆಗುವ ಪ್ರಕರಣಗಳು ಕಡಿಮೆಯಾ ಗಿವೆ. ಸೋಮ ವಾರದಿಂದ ಮಂಗಳವಾರದ ಅವಧಿಯಲ್ಲಿ ಈ ಅಂಶ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಖಾತೆ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
ರಷ್ಯಾ ಜತೆಗೆ ಮಾತುಕತೆ: ಸೋಂಕು ತಡೆಗೆ ರಷ್ಯಾ ಅಭಿವೃದ್ಧಿಪಡಿಸಿರುವ “ಸ್ಪುಟ್ನಿಕ್-5′ ಲಸಿಕೆಯನ್ನು ಖರೀದಿಸುವ ಬಗ್ಗೆ ಮಾತುಕತೆಗಳು ನಡೆದಿವೆ. ರಷ್ಯಾ ಜತೆಗೆ ಪ್ರಾಥಮಿಕ ಮಾಹಿತಿ ಹಂಚಿ ಕೊಳ್ಳಲಾಗಿದೆ ಎಂದು ಆರೋಗ್ಯ ಕಾರ್ಯ ದರ್ಶಿ ತಿಳಿಸಿದ್ದಾರೆ. ಮಾಸ್ಕ್ ಧರಿಸದವರೇ ಕಾರಣ: ಐಸಿಎಂಆರ್
ಸೋಂಕು ದೇಶ ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸಲು ಮಾಸ್ಕ್ ಧರಿಸದೇ ಬೇಜವಾಬ್ದಾರಿ ಯುತವಾಗಿ ವರ್ತಿಸು ವವರೇ ಕಾರಣ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ತಜ್ಞರು ಅಭಿ ಪ್ರಾಯಪಟ್ಟಿದ್ದಾರೆ. ಸೋಂಕು ವ್ಯಾಪಿಸಲು ಕಿರಿಯರು ಕಾರಣ, ಹಿರಿಯರು ಕಾರಣ ಎಂದು ನಾವು ಹೇಳುವುದಿಲ್ಲ. ಬದಲಿಗೆ, ಮಾಸ್ಕ್ ಧರಿಸದೇ ಸಾರ್ವಜನಿಕವಾಗಿ ಓಡಾಡುವವರು, ನಿರ್ಲಕ್ಷ್ಯ ವಹಿಸುವವರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ವ್ಯಾಪಿಸಿತು ಎಂದು ಐಸಿಎಂಆರ್ ಡಿಜಿ ಡಾ. ಬಲರಾಂ ಭಾರ್ಗವ ಹೇಳಿದ್ದಾರೆ. ಇದೇ ವೇಳೆ, ದೇಶದಲ್ಲಿ 3 ಲಸಿಕೆಗಳು ಮುಂಚೂಣಿಯಲ್ಲಿದ್ದು, ಮಾನವನ ಮೇಲಿನ ಪ್ರಯೋಗ ಪ್ರಕ್ರಿಯೆ ನಡೆಸಲಾಗುತ್ತಿವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.