Advertisement

ರಮೇಶ್‌ ಈಗ ಸೈಬರ್‌ ಕ್ರೈಂ ತನಿಖಾಧಿಕಾರಿ

01:40 PM May 11, 2020 | Suhan S |

ರಮೇಶ್‌ ಅರವಿಂದ್‌… ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ, ನಿರ್ದೇಶಕ ಇದೆಲ್ಲದರ ಹೊರತಾಗಿ ಅವರೊಬ್ಬ ಒಳ್ಳೆಯ ಬರಹಗಾರ ಮತ್ತು ಮಾತುಗಾರ ಕೂಡ. ಎರಡುವರೆ ದಶಕಕ್ಕೂ ಹೆಚ್ಚು ಕಾಲ ಕನ್ನಡ ಸಿನಿಮಾ ರಂಗದಲ್ಲಿರುವ ರಮೇಶ್‌ ಅರವಿಂದ್‌ ಅವರನ್ನು ತ್ಯಾಗರಾಜ ಎಂದೇ ಕರೆಯುವುದುಂಟು. ಅದಕ್ಕೆ ಕಾರಣ, ಅವರು ಬಹುತೇಕ ಸಿನಿಮಾಗಳಲ್ಲಿ ತ್ಯಾಗ ಮಾಡುವ ಪಾತ್ರಗಳನ್ನೇ ಮಾಡಿದ್ದು. ಅಂತಹ ರಮೇಶ್‌ ಅರವಿಂದ್‌ ಅವರ ಮುಂದಿನ ಸಿನಿಮಾ ಯಾವುದು, ಸದ್ಯಕ್ಕೆ ಬೇರೇನು ಮಾಡುತ್ತಿದ್ದಾರೆ ಎಂಬಿತ್ಯಾದಿ ಕುರಿತು ಒಂದು ರೌಂಡಪ್‌.

Advertisement

ರಮೇಶ್‌ ಅರವಿಂದ್‌ ಅವರೀಗ ನೂರರ ಗಡಿದಾಟಿದ್ದಾರೆ. ನೂರು ಸಿನಿಮಾಗಳನ್ನು ಪೂರೈಸಿರುವ ಅವರ ಖಾತೆಯಲ್ಲಿ ಬಹುತೇಕ ಹಿಟ್‌ ಚಿತ್ರಗಳೇ ತುಂಬಿಕೊಂಡಿವೆ. ರಮೇಶ್‌ ಅರವಿಂದ್‌ ತೆರೆಯ ಮೇಲೆ ಹೇಗೆ ಜನರನ್ನು ರಂಜಿಸಿದ್ದಾರೋ, ಹಾಗೆಯೇ, ನಿಜ ಬದುಕಿನಲ್ಲೂ ಜನರಿಗೆ ಹತ್ತಿರವಾಗಿದ್ದಾರೆ. ಹಲವಾರು ವೇದಿಕೆಗಳಲ್ಲಿ ಅವರು ಸಾಕಷ್ಟು ವಿಷಯಗಳ ಮೇಲೆ ಉಪನ್ಯಾಸ ನೀಡುವ ಮೂಲಕ ವಿದ್ಯಾರ್ಥಿಗಳಿಗೆ, ಅಧ್ಯಾಪಕ ವೃಂದಕ್ಕೆ ಪ್ರೀತಿ ಪಾತ್ರರಾಗಿದ್ದಾರೆ. ಸಂದರ್ಭಕ್ಕನುಗುಣವಾಗಿ ಅವರು ಮಾಡುವ ಭಾಷಣಗಳಲ್ಲಿ ಮೌಲ್ಯಗಳೇ ತುಂಬಿರುತ್ತೆ. ಅವರು ಹೇಳುವ ಒಂದೊಂದು ಕಥೆಗಳಲ್ಲೂ ಸತ್ವ, ಸತ್ಯ ಅಡಗಿರುತ್ತೆ.

ಅವರೀಗ 100 ಸಿನಿಮಾದ ಜಪದಲ್ಲಿದ್ದಾರೆ. ಹೌದು, ಕನ್ನಡದಲ್ಲಿ ಈಗಾಗಲೇ ಅಂಕಿಗಳನ್ನು ಇಟ್ಟುಕೊಂಡು ಹಲವು ಸಿನಿಮಾಗಳು ಮೂಡಿಬಂದಿವೆ. ಆ ಸಾಲಿಗೆ 100 ಕೂಡ ಒಂದು. ಈ ಸಿನಿಮಾಗೆ ರಮೇಶ್‌ ಅರವಿಂದ್‌ ಅವರೇ ನಿರ್ದೇಶಕರು. ನಟನೆ ಕೂಡ ಮಾಡಿದ್ದಾರೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದೆ. ಚಿತ್ರಕೆ ಸೆನ್ಸಾರ್‌ ಮಂಡಳಿಯು ಯು/ಎ ಪ್ರಮಾಣ ಪತ್ರ ಕೂಡ ಸಿಕ್ಕಿದೆ. ಆದರೆ, ಕೊರೊನಾ ಸಮಸ್ಯೆ ಉಲ್ಬಣಿಸಿದ್ದರಿಂದ ಚಿತ್ರ ಬಿಡುಗಡೆ ಕೂಡ ಮುಂದಕ್ಕೆ ಹೋಗಿದೆ.

ಈ ಚಿತ್ರದಲ್ಲಿ ರಮೇಶ್‌ ಅರವಿಂದ್‌ ಅವರು ಸೈಬರ್‌ ಅಪರಾಧ ವಿಭಾಗದ ತನಿಖಾಧಿಕಾರಿ ಪಾತ್ರ ನಿರ್ವಹಿಸಿದ್ದಾರೆ. ರಮೇಶ್‌ ರೆಡ್ಡಿ ಅವರ ನಿರ್ಮಾಣವಿದೆ. ಇಲ್ಲಿ ರಮೇಶ್‌ ಅವರ ತಂಗಿಯಾಗಿ ರಚಿತಾರಾಮ್‌ ಕಾಣಿಸಿಕೊಂಡಿದ್ದಾರೆ. ಇನ್ನು, ಚಿತ್ರದ ಬಗ್ಗೆ ಹೇಳುವುದಾದರೆ, ಸಮಾಜದಲಿ ಅಶಾಂತಿ ಸೃಷ್ಟಿಸಿ ಪಟ್ಟ ಭದ್ರರು ಯಾವಾಗಲೂ ಒಂದಿಲ್ಲೊಂದು ಸಮಸ್ಯೆ ಸೃಷ್ಟಿಸುತ್ತಲೇ ಇರುತ್ತಾರೆ. ಈಗಂತೂ ಸೋಶಿಯಲ್‌ ಮೀಡಿಯಾ ಸಾಕಷ್ಟು ಸಮಸ್ಯೆಯಾಗಿ ಕಾಡುತ್ತಿದೆ. ಅದರಿಂದ ಎಷ್ಟೋ ಜನರ ನೆಮ್ಮದಿ ಹಾಳಾಗುತ್ತಿದೆ. ಅಂತಹ ಅನೇಕ ಘಟನೆಗಳನ್ನಿಟ್ಟುಕೊಂಡು 100 ಸಿನಿಮಾ ಮಾಡಲಾಗಿದೆ. ಈ ವಿಷಯಗಳು ಈ ಚಿತ್ರದ ಹೈಲೈಟ್‌ ಎಂಬುದು ಅವರ ಮಾತು. 100 ಚಿತ್ರಕ್ಕೆ ಸತ್ಯ ಹೆಗಡೆ ಅವರ ಕ್ಯಾಮೆರಾ ಕೈಚಳಕವಿದೆ. ರವಿ ಬಸ್ರೂರ್‌ ಅವರ ಸಂಗೀತ ನೀಡುತ್ತಿದ್ದಾರೆ. ರವಿವರ್ಮ ಅವರು ಸ್ಟಂಟ್ಸ್‌ ಮಾಡಿದ್ದಾರೆ. ಧನು ನೃತ್ಯ ಸಂಯೋಜಿಸಿದ್ದು, ಗುರು ಕಶ್ಯಪ್‌ ಅವರು ಮಾತುಗಳನ್ನು ಪೋಣಿಸಿದ್ದಾರೆ.

ಲಾಕ್‌ಡೌನ್‌ ವೇಳೆ ರಮೇಶ್‌ ಅರವಿಂದ್‌ ಒಂದಷ್ಟು ಸಿನಿಮಾ ನೋಡಿದ್ದಾರೆ. ತಮ್ಮ ದಿನಚರಿ ಬಗ್ಗೆ ಹೇಳುವ ಅವರು ಎಂದಿನಂತೆ ಮುಂಜಾನೆ ಆರುಕಾಲು ಗಂಟೆಗೆ ಎದ್ದು, ಒಂದುವರೆ ಗಂಟೆ ಕಾಲ ಸಮಯವನ್ನು ವಾಕ್‌ ಮಾಡೋದು, ಯೋಗ ಮಾಡೋದರತ್ತ ಗಮನಿಸುತ್ತಾರೆ. ಇನ್ನು ಶೂಟಿಂಗ್‌

Advertisement

ಇದ್ದರೆ, ಹೋಗಿ ಬರುವ ಹೊತ್ತಿಗೆ ರಾತ್ರಿ ಆಗಿರುತ್ತೆ. ಕೋವಿಡ್  ಹಿನ್ನೆಲೆಯಲ್ಲಿ ಮನೆಯಲ್ಲಿದ್ದರಿಂದ ಆವರು ಅಲ್ಲೂ ಸುಮ್ಮನೆ ಕೂರಲಿಲ್ಲ. ಅವರಿಗೆ ಕಾಮರ್ಸ್‌ ವಿಷಯದ ಮೇಲೆ ಪ್ರೀತಿ ಜಾಸ್ತಿ. ಆ ಆಸಕ್ತಿ ಇದ್ದುದರಿಂದಲೇ ಅವರು ಈಗ ಅಕೌಂಟ್‌, ಡೆಬಿಟ್‌ ಕೆಡಿಟ್‌, ಬ್ಯಾಲೆನ್ಸ್‌ ಶೀಟ್‌ ಕುರಿತ ಮಾಹಿತಿ ಪಡೆದು, ಎಲ್ಲವನ್ನೂ ಸಮಗ್ರವಾಗಿ ಅರಿತು ಕಲಿತುಕೊಂಡಿದ್ದಾರೆ. ಸಿನಿಮಾ ವಿಭಾಗದಲ್ಲೂ ಅವರು ಒಂದಷ್ಟು ವಿಷಯ ಕಲಿಯಲು ಈ ಸಮಯ ವಿನಿಯೋಗಿಸಿದ್ದಾರೆ. ಹೌದು, ವಿಎಸ್‌ ಎಕ್ಸ್‌ ಪ್ರೋಸೆಸ್‌ ಸಿಸ್ಟಂ ಬಗ್ಗೆಯೂ ಅವರು ಕಲಿತಿದ್ದಾರೆ. ಹಳೆಯ ಸ್ಕ್ರಿಪ್ಟ್ಗಳನ್ನು ತಿರುವಿಹಾಕಿದ್ದಾರೆ. ಸಿನಿಮಾಗೆ ಸಂಬಂಧಿಸಿದಂತೆ ಒಂದಷ್ಟು ವಿಷಯ ಕಲಿತಿರುವ ಖುಷಿ ಅವರದು.

Advertisement

Udayavani is now on Telegram. Click here to join our channel and stay updated with the latest news.

Next