Advertisement

100 ಲಕ್ಷ ಕೋ.ರೂ. ಯೋಜನೆ ಜಾರಿಗೆ ಕಾರ್ಯಪಡೆ

10:46 AM Sep 09, 2019 | Team Udayavani |

ಹೊಸದಿಲ್ಲಿ: ದೇಶದ ಆರ್ಥಿಕತೆ ಕುಸಿತವನ್ನು ನಿಯಂತ್ರಿಸಲು ಕೆಲವೇ ದಿನಗಳ ಹಿಂದೆ ಹಲವು ಘೋಷಣೆ ಮಾಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಈಗ ಮುಂದಿನ 5 ವರ್ಷಗಳವರೆಗೆ ದೇಶದ ಮೂಲ ಸೌಕರ್ಯ ಯೋಜನೆಗಳ
ರೂಪುರೇಷೆಗೆ ಕಾರ್ಯಪಡೆ ರಚಿಸುವುದಾಗಿ ಘೋಷಿಸಿದ್ದಾರೆ.

Advertisement

ಈಗಾಗಲೇ ಮೂಲ ಸೌಕರ್ಯಕ್ಕಾಗಿ 100 ಲಕ್ಷ ಕೋಟಿ ರೂ.ಗಳನ್ನು ನೀಡುವುದಾಗಿ ಕೇಂದ್ರ ಘೋಷಿಸಿದ್ದು, ಈ ಕಾರ್ಯ ಪಡೆಯು ಪ್ರಸ್ತುತ ಹಣಕಾಸು ವರ್ಷ, ಮುಂದಿನ 5 ವರ್ಷ ಕೈಗೊಳ್ಳಲಾಗುವ ಯೋಜನೆಗಳನ್ನು ಗುರುತಿಸಲಿದೆ. ತಾಂತ್ರಿಕವಾಗಿ, ಆರ್ಥಿಕವಾಗಿ ಸೂಕ್ತವಾದ ಯೋಜನೆಗಳನ್ನು ಗುರುತಿಸುವುದು, ಯೋಜನೆ ವೆಚ್ಚ ಅನಗತ್ಯ ವಾಗಿ ಹೆಚ್ಚಳವಾಗುವುದು, ವಿಳಂಬವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕಾರ್ಯಪಡೆ ರೂಪುರೇಷೆ ಸಿದ್ಧಪಡಿಸಲಿದೆ.

ಕಾರ್ಯಪಡೆಯಲ್ಲಿ ಯಾರಿರುತ್ತಾರೆ?
ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ನೇತೃತ್ವ ವಹಿಸ ಲಿದ್ದು, ಇತರ ಅಧಿಕಾರಿಗಳು ಇರುವರು.

ಒಟ್ಟು ಆರು ಸದಸ್ಯರು ಈ ಕಾರ್ಯಪಡೆಯಲ್ಲಿ ಇರಲಿದ್ದಾರೆ. ಅ. 31ರ ವೇಳೆಗೆ ಈ ವರ್ಷದ ಯೋಜನೆಯನ್ನು ಒದಗಿಸಲಿದೆ ಮತ್ತು 2021-25ರ ರೂಪುರೇಷೆಯನ್ನು ಡಿ.31ರಂದು ನೀಡಲಿದೆ.

ಆರ್ಥಿಕತೆಯ ಗುರಿ
5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಗುರಿಯನ್ನು ಸಾಧಿಸಲು ಗುಣಮಟ್ಟದ ಮೂಲಸೌಕರ್ಯ ಅತ್ಯಂತ ಪ್ರಮುಖ. ದೇಶದ ಅಭಿವೃದ್ಧಿ ದರ ಹೆಚ್ಚಳ ಕಾಣಲು ಮೂಲ ಸೌಕರ್ಯದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next