Advertisement

ಮಾದಕವಸ್ತು ಮಿಶ್ರಿತ 100 ಕೆಜಿ ಚಾಕೊಲೆಟ್‌ ವಶ

12:41 AM Jul 20, 2023 | Team Udayavani |

ಮಂಗಳೂರು: ನಗರದ ಎರಡು ಕಡೆ ಮಾರಾಟ ಮಾಡಲಾಗು ತ್ತಿದ್ದ ಸುಮಾರು 100 ಕೆಜಿಯಷ್ಟು ಮಾದಕ ವಸ್ತು ಮಿಶ್ರಿತ ಚಾಕೊಲೆಟ್‌ಗಳನ್ನು ಪಾಂಡೇಶ್ವರ ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದಾರೆ.

Advertisement

ನಗರದ ರಥಬೀದಿಯಲ್ಲಿ ಮನೋಹರ್‌ ಶೇಟ್‌ ಮತ್ತು ನಗರದ ಫ‌ಳ್ನೀರ್‌ನ ಗೂಡಂಗಡಿಯಲ್ಲಿ ಉತ್ತರ ಪ್ರದೇಶ ಮೂಲದ ಬೆಚನ್‌ ಸೋನ್ಕರ್‌ ಎಂಬಾತ ಮಾದಕ ವಸ್ತು ಮಿಶ್ರಿತ “ಬಾಂಗ್‌’ ಎಂಬ ಚಾಕೊಲೆಟ್‌ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಒಟ್ಟು ಸುಮಾರು 100 ಕೆಜಿ ಚಾಕೊಲೆಟ್‌ಗಳನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಈ ಚಾಕೊಲೆಟ್‌ನ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅದರ ವರದಿ ಆಧಾರ ದಲ್ಲಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next