ವೇಣೂರು: ಸರಕಾರದ ನಿರ್ಧಾರಕ್ಕೆ ಜನ ಕೈಜೋಡಿಸಿರುವುದರಿಂದ ಕೋವಿಡ್ 19 ವಿರುದ್ಧದ ಹೋರಾಟದ ಫಲ ಆಶಾದಾಯಕವಾಗಿದೆ. ಲಾಕ್‌ಡೌನ್‌ದಿಂದ ಸಂಕಷ್ಟಕ್ಕೀಡಾದವರಿಗೆ ಕಾರ್ಯಕರ್ತರು, ಸಂಘ ಸಂಸ್ಥೆಗಳು, ಉದ್ಯಮಿಗಳು ಸಹಾಯ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಲಾಕ್‌ಡೌನ್‌ದಿಂದ ತೊಂದರೆಗೊಳಗಾದ ಅಸಹಾಯಕರಿಗೆ ಸರಕಾರದ ಮೂಲಕ ಪ್ರತಿ ಬೂತ್‌ಮಟ್ಟದಲ್ಲಿ 100 ಆಹಾರ ಸಾಮಗ್ರಿ ಕಿಟ್ ನೀಡಲಾಗುವುದು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ವೇಣೂರು ಹೋಬಳಿ ಮಟ್ಟದ 10 ಗ್ರಾಮ ಪಂಚಾಯತ್‌ಗಳಿಗೆ ಬುಧವಾರ ಭೇಟಿ ನೀಡಿ ಕೋವಿಡ್ 19 ವೈರಸ್ ಹರಡದಂತೆ ವಹಿಸಿರುವ ಕ್ರಮ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿ, ಕೋವಿಡ್ 19 ವಿರುದ್ಧದ ಹೋರಾಟದ ಬಗೆಗಿನ ನಮ್ಮ ನಿರ್ಧಾರಗಳನ್ನು ವಿದೇಶಗಳೂ ಅನುಸರಿಸುತ್ತಿವೆ ಎಂದರು. ಗ್ರಾಮಗಳ ಮೂಲ ಸೌಲಭ್ಯಗಳ ಕೊರತೆಗಳಲ್ಲಿ ಆಲಿಸಿದ ಶಾಸಕರು ಪರ್ಯಾಯ ವ್ಯವಸ್ಥೆಗೆ ಸೂಚಿಸಿದರಲ್ಲದೆ, ಕೆಲವುಗಳಿಗೆ ತುರ್ತು ಅನುದಾನ ದೊರಕಿಸುವುದಾಗಿ ತಿಳಿಸಿದರು.
ಈ ಸಂದರ್ಭ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಒದಗಿಸಲಾದ ಮಾಸ್ಕ್ ಹಾಗೂ ಇತರ ಪರಿಕರಗಳನ್ನು ಶಾಸಕರು ಹಸ್ತಾಂತರಿಸಿದರು.
ತಾ.ಪಂ. ಸದಸ್ಯ ಸುಧೀರ್ ಆರ್. ಸುವರ್ಣ, ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯರಾಮ್, ಅಂಡಿಂಜೆ ಗ್ರಾ.ಪಂ. ಅಧ್ಯಕ್ಷ ಮೋಹನ್ ಅಂಡಿಂಜೆ, ನಾರಾವಿ ಗ್ರಾ.ಪಂ. ಅಧ್ಯಕ್ಷ ರವೀಂದ್ರ ಪೂಜಾರಿ, ಉಪಾಧ್ಯಕ್ಷೆ ಯಶೋದಾ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಮಾರ್ ಮಿತ್ತಮಾರು, ಮರೋಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಉಪಾಧ್ಯಕ್ಷೆ ವನಿತಾ, ಕಾಶಿಪಟ್ಣ ಗ್ರಾ.ಪಂ. ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ಉಪಾಧ್ಯಕ್ಷೆ ಮಮತಾ, ಹೊಸಂಗಡಿ ಗ್ರಾ.ಪಂ. ಅಧ್ಯಕ್ಷೆ ಹೇಮಾ ವಸಂತ್, ಉಪಾಧ್ಯಕ್ಷೆ ಲಲಿತಾ ಟಿ. ಹೆಗ್ಡೆ, ವಿವಿಧ ಗ್ರಾ.ಪಂ. ಸದಸ್ಯರು, ಪಿಡಿಒಗಳಾದ ಪುರುಷೋತ್ತಮ ಜಿ., ಗಣೇಶ್ ಶೆಟ್ಟಿ, ವಾಸುದೇವ ಜಿ., ಇಮಿ¤ಯಾಜ್, ರವಿ ಎಸ್.ಎಂ., ಆಶಾಲತಾ, ರವಿ, ಪ್ರಮುಖರಾದ ಶಿವಪ್ರಸಾದ್ ಅಜಿಲ, ಸುಂದರ ಹೆಗ್ಡೆ ಬಿ.ಇ, ಶೇಖ್ ಲತೀಫ್, ರೋ| ರಾಜಗೋಪಾಲ್ ಭಟ್, ಸದಾನಂದ ಪೂಜಾರಿ ಉಂಗಿಲಬೈಲು, ಪೊಲೀಸ್ ಉಪ ನಿರೀಕ್ಷಕ ಲೋಲಾಕ್ಷ ಕೆ., ಅಳದಂಗಡಿ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಡಾ| ಚೈತ್ರಾ, ನಾರಾವಿ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಡಾ| ದೀಕ್ಷಿತಾ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಸಹಕಾರ ಅಗತ್ಯ
ಆಶಾ ಕಾರ್ಯಕರ್ತೆಯರು, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರು ಹಾಗೂ ಪೊಲೀಸ್ ಇಲಾಖೆ ಕೋವಿಡ್ 19 ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ನಾವೂ ಸಹಕರಿಸಿದಾಗ ಶೀಘ್ರ ಕೋವಿಡ್ 19 ಮುಕ್ತವಾಗಲು ಸಾಧ್ಯ.
-ಹರೀಶ್ ಪೂಂಜ
ಶಾಸಕರು