Advertisement
ಕೊರಟಗೆರೆ ತಾಲೂಕಿನ ಸುಪ್ರಸಿದ್ದ ಸಸ್ಯಸಂಜೀವಿನಿ ಶ್ರೀಕ್ಷೇತ್ರ ಸಿದ್ದರಬೆಟ್ಟದ ಶ್ರೀಬಾಳೆಹೊನ್ನೂರು ಖಾಸಾಶಾಖಾ ಶ್ರೀಮಠದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ 17ನೇ ವರ್ಷದ ವಾರ್ಷಿಕೋತ್ಸವ, ಜಗಜ್ಯೋತಿ ಬಸವೇಶ್ವರ ಜಯಂತೋತ್ಸವ, ಉಚಿತ ಸಾಮೂಹಿಕ ವಿವಾಹ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ, ಸಿದ್ದರಬೆಟ್ಟ ಶ್ರೀಮಠದ ಧಾರ್ಮಿಕ ಮತ್ತು ಶೈಕ್ಷಣಿಕ ಸೇವೆಯು ಆಧುನಿಕ ಜಗತ್ತಿಯಲ್ಲಿ ಪ್ರಜ್ವಲಿಸುತ್ತಿದೆ. ಸಿದ್ದರಬೆಟ್ಟ ಶ್ರೀಮಠವು ಲಕ್ಷಾಂತರ ಜನ ಭಕ್ತರಿಗೆ ಧರ್ಮದ ವಿಚಾರಧಾರೆ ತಿಳಿಸುವ ಪ್ರಯತ್ನ ಮಾಡಿದೆ. ಮಾಡಿದ್ದಾರೆ. ಸಿದ್ದಗಂಗಾ ಶ್ರೀಮಠದ ರೀತಿಯಲ್ಲಿ ಸಿದ್ದರಬೆಟ್ಟ ಶ್ರೀಮಠವು ಇನ್ನಷ್ಟು ಪ್ರಜ್ವಲಿಸಲಿ. ದೇವರಾಯನದುರ್ಗ, ಗೊರವನಹಳ್ಳಿ, ಕ್ಯಾಮೇನಹಳ್ಳಿ ಮತ್ತು ಸಿದ್ದರಬೆಟ್ಟ ಕ್ಷೇತ್ರವು ಪ್ರವಾಸೋದ್ಯಮ ಅಡಿಯಲ್ಲಿ ಅಭಿವೃದ್ದಿ ಆಗಲಿದೆ ಎಂದು ಭರವಸೆ ನೀಡಿದರು.ನಮ್ಮ ದೇಶದ ಸಂಸ್ಕಾರ ಮತ್ತು ಸಂಸ್ಕೃತಿಯು ನಮ್ಮ ಧರ್ಮದ ಗಂಟಿನಲ್ಲಿದೆ. ಧರ್ಮ ಪ್ರಚಾರವು ಯಾರೊಬ್ಬರ ಸ್ವತ್ತು ಅಲ್ಲ. ಧರ್ಮಕ್ಕೆ ಯಾರು ಪಾಲಕ ಆಗೋದಿಕ್ಕೆ ಸಾಧ್ಯವಿಲ್ಲ. ಭಾರತದ ಐಶ್ವರ್ಯವಂತ ವಿಚಾರಧಾರೆ ಪ್ರತಿಯೊಬ್ಬ ಭಾರತೀಯನಿಗೆ ಸೇರಿದೆ. ಸಂವಿಧಾನವು ಅವರವರ ಧರ್ಮ ಆಚರಣೆಗೆ ಅವಕಾಶ ಕಲ್ಪಿಸಿದೆ. ಧರ್ಮವು ಎಲ್ಲರಿಗೆ ಸೇರಬೇಕು ಎಂಬುದೇ ನಮ್ಮ ನಂಬಿಕೆ ಎಂದರು. ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಧರ್ಮಪಾಲನೆಯ ಸ್ವಾಮರಸ್ಯ ಮತ್ತು ಶಾಂತಿ ಸುವ್ಯವಸ್ಥೆಗೆ ಶ್ರೀಮಠಗಳ ಸಹಕಾರವು ಇನ್ನಷ್ಟು ಅಗತ್ಯವಿದೆ. ಸಾಮೂಹಿಕ ವಿವಾಹವು ಬಡಮಕ್ಕಳಿಗೆ ಮಾತ್ರ ಸಿಮೀತ ಆಗುವುದು ಬೇಡ. ಉಳ್ಳವರು ಸಹ ಸಾಮೂಹಿಕ ವಿವಾಹ ಮಾಡಿಕೊಂಡರೇ ನಮ್ಮ ಸಮಾಜಕ್ಕೆ ಮಾದರಿ. ಸಿದ್ದರಬೆಟ್ಟ ಶ್ರೀಮಠವು ಪರಿಸರ ಜಾಗೃತಿಗೆ ಹೆಚ್ಚಿನ ಕಾಳಜಿ ವಹಿಸಿದೆ. ಬಡಮಕ್ಕಳ ಶೈಕ್ಷಣಿಕ ಕ್ಷೇತ್ರಕ್ಕೆ ನಮ್ಮ ರಾಜ್ಯದ ಶ್ರೀಮಠಗಳ ಕೊಡುಗೆ ಅನನ್ಯ. ಸಿದ್ದಗಂಗಾ ಶ್ರೀಮಠವು ಬಡಮಕ್ಕಳ ಶೈಕ್ಷಣಿಕ ದೇವಾಲಯ ಎಂದರೇ ತಪ್ಪಾಗದು ಎಂದು ಹೇಳಿದರು. ಧರ್ಮಗಳ ನಡುವೆ ಯಾವುದೇ ಬಿರುಕು ಇರಬಾರದು. ಮತಗಳಿಗಾಗಿ ರಾಜಕೀಯ ನಾಯಕರಿಂದ ಮಾತ್ರ ಬಿರುಕು ಉಂಟಾಗುತ್ತೇ ಅಷ್ಟೆ. ಯಾವ ಧರ್ಮವು ಕೂಡ ಮತ್ತೊಂದು ಧರ್ಮದ ವಿರುದ್ದ ಧ್ವೇಷದ ಪ್ರೇರಣೆ ಉಂಟು ಮಾಡೋಲ್ಲ. ನಮ್ಮ ಪೂರ್ವಜರು ನೀಡಿದ ಕೂಡುಗೆಯು ಮುಂದುವರೆಯಲಿದೆ. ಚುನಾವಣೆ ಗೆಲುವು ಹಾಗೂ ಮತಗಳ ದುರಾಸೆಗೆ ಪ್ರಸ್ತುತ ಸಮಾಜದಲ್ಲಿ ಧರ್ಮದ ದ್ವೇಷವು ಬೆಳೆಯುತ್ತಿರೊದು ಖಂಡನೀಯ ಎಂದರು. ಎಡೆಯೂರು ಶ್ರೀರೇಣುಕಾ ಶಿವಾಚಾರ್ಯರು, ಎಲೆರಾಂಪುರದ ಡಾ.ಹನುಮಂತ ಸ್ವಾಮೀಜಿ, ಬೆಳ್ಳಾವಿಯ ಶ್ರೀವೀರಬಸವ ಶ್ರೀಗಳು, ಬೀರೂರು ರುದ್ರಮುನಿ ಶ್ರೀಗಳು, ಹಲಕರಟಿಯ ಶ್ರೀಮುನೀಂದ್ರ ಶ್ರೀಗಳು, ಕಲ್ಕೇರಿಯ ಶ್ರೀಸಿದ್ದರಾಮ ಶ್ರೀಗಳು, ತಂಗನಹಳ್ಳಿಯ ಶ್ರೀಬಸವಲಿಂಗ ಶ್ರೀಗಳು, ಹತ್ತಿಕಣವಸ ಪ್ರಭುಶಾಂತ ಶ್ರೀಗಳವರು ಪಾಲ್ಗೊಂಡು 50 ಜನ ವೀರಮಾಹೇಶ್ವರ ಮತ್ತು ಶ್ರೀಮಠದ ಭಕ್ತರಿಗೆ ಅಯ್ಯಾಚಾರ ಶಿವದೀಕ್ಷೆ ನೇರವೇರಿಸಿದ ನಂತರ 17 ಜೋಡಿ ನವ ದಂಪತಿಗಳಿಗೆ ಆರ್ಶಿವಾದ ಮಾಡಿದರು. ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ, ತಹಶೀಲ್ದಾರ್ ಮುನಿಸ್ವಾಮಿರೆಡ್ಡಿ, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್, ಮುಖಂಡರಾದ ಸಿದ್ದಮಲ್ಲಪ್ಪ, ಬಲರಾಮಯ್ಯ, ಸಿದ್ದಗಿರಿ ನಂಜುಂಡ ಸ್ವಾಮಿ, ಜಯರಾಮ್, ಪುಟ್ಟನರಸಪ್ಪ, ಮಲ್ಲೇಕಾವು ಸೋಮಣ್ಣ, ಅರವಿಂದ್, ತಿಪ್ಪೇಸ್ವಾಮಿ, ಗಿರೀಶ್, ಹರೀಶ್, ನಂಜಾರಾಧ್ಯ, ವಿನಯ್, ರುದ್ರಮುನಿ, ರಾಮಮೂರ್ತಿ ಸೇರಿದಂತೆ ಇತರರು ಇದ್ದರು. ಶ್ರೀಕ್ಷೆತ್ರದಲ್ಲಿ ಹಬ್ಬದ ಸಡಗರ..
ಸಿದ್ದರಬೆಟ್ಟ ಶ್ರೀಕ್ಷೇತ್ರದ ಶ್ರೀಸಿದ್ದೇಶ್ವರ ಸ್ವಾಮಿಗೆ ಕುಂಭಾಭಿಷೇಕ ಮತ್ತು ಬಿಲ್ವಾರ್ಚನೆ, ಉಚಿತ ಸಾಮೂಹಿಕ ದೀಕ್ಷಾ ಸಂಸ್ಕಾರ ಸಮಾರಂಭ, ಶ್ರೀಜಗದ್ಗುರು ರೇಣುಕಾಚಾರ್ಯರು ಮತ್ತು ಶ್ರೀಬಸವೇಶ್ವರ ಪಲ್ಲಕ್ಕಿ ಉತ್ಸವ, 17ನವ ಜೋಡಿಗಳ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಜರುಗಿತು. ಗ್ರಂಥಾಲಯ ಸಹಕಾರದಿಂದ ನಡೆದ ಪುಸ್ತಕ ದಾಸೋಹ ಮತ್ತು ಅರಣ್ಯ ಇಲಾಖೆಯ ಸಹಬಾಗಿತ್ವದಿಂದ ಜರುಗಿದ ಸಸಿ ವಿತರಣೆ ಕಾರ್ಯಕ್ರಮ ಯಶಸ್ವಿಕಂಡಿದೆ. ಗುರುರಕ್ಷೆ ಮತ್ತು ಧರ್ಮ ಜನಜಾಗೃತಿ ಕಾರ್ಯಕ್ರಮವು ಸಿದ್ದರಬೆಟ್ಟ ಶ್ರೀಕ್ಷೇತ್ರದಲ್ಲಿ ಹಬ್ಬದ ಸಡಗರದ ವಾತವರಣವನ್ನೇ ಸೃಷ್ಟಿಸಿತ್ತು.