Advertisement

ಸೂಫಿ ದರ್ಗಾದೊಳಗೆ ಆತ್ಮಹತ್ಯಾ ಬಾಂಬ್ ಅಟ್ಯಾಕ್ 70ಕ್ಕೂ ಅಧಿಕ ಮಂದಿ ಬಲಿ

11:47 PM Feb 16, 2017 | Team Udayavani |

ಕರಾಚಿ:ಇಲ್ಲಿನ ಶೆವಾನ್ ನಗರದ ಸೂಫಿ ಷಹಬಾಝ್ ಖಲಂದರ್ ದರ್ಗಾದೊಳಗೆ ಗುರುವಾರ ರಾತ್ರಿ ಐಸಿಸ್ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡ ಪರಿಣಾಮ ಸುಮಾರು 70ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ, ಘಟನೆಯಲ್ಲಿ 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Advertisement

ಆತ್ಮಹತ್ಯಾ ಬಾಂಬರ್ ಗೋಲ್ಡನ್ ಗೇಟ್ ಮೂಲಕ ದರ್ಗಾದೊಳಗೆ ಪ್ರವೇಶಿಸಿ, ದರ್ಗಾದೊಳಗೆ ಸೂಫಿ ನೃತ್ಯವಾದ ಧಾಮಲ್ ನಡೆಯುತ್ತಿದ್ದ ವೇಳೆ ತನ್ನನ್ನು ತಾನು ಸ್ಫೋಟಿಸಿಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಈ ಆತ್ಮಹತ್ಯಾ ಬಾಂಬ್ ದಾಳಿ ಹೊಣೆಯನ್ನು ಐಸಿಸ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿದೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ಪೊಲೀಸ್ ಅಧಿಕಾರಿಗಳ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next