Advertisement

“ಹಸಿದವರತ್ತ ನಮ್ಮ ಚಿತ್ತ’ಅಭಿಯಾನಕ್ಕೆ ಶತದಿನೋತ್ಸವ

04:08 PM Jul 04, 2020 | Suhan S |

ಬೆಳಗಾವಿ: ದೇಶ ಎದುರಿಸುತ್ತಿರುವ ಪ್ರಸಕ್ತ ಬಿಕ್ಕಟ್ಟಿನಿಂದ ಪಾರಾಗಬೇಕಾದರೆ ನಾವು ಮೊದಲು ಬದಲಾಗಬೇಕು. ಈ ಬದಲಾವಣೆ ಅಥವಾ ಪರಿಹಾರ ಹೊರಗಿನಿಂದ ಬರದೇ ನಮ್ಮೊಳಗೇ ಇದೆ ಎಂದು ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಕಳೆದ ಮಾರ್ಚ್‌ 23ರಿಂದ ಹಮ್ಮಿಕೊಂಡಿದ್ದ ಹಸಿದವರತ್ತ ನಮ್ಮ ಚಿತ್ತ ಅಭಿಯಾನದ ಶತದಿನೋತ್ಸವ ಮತ್ತು ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕಾರಂಜಿ ಮಠದ ಗುರುಸಿದ್ಧ ಸ್ವಾಮಿಗಳು ಮಾತನಾಡಿ, ಕೋವಿಡ್ ವೈರಾಣುವಿಗೆ ಹೆದರಿ ಜನರೆಲ್ಲರೂ ಮನೆಯಲ್ಲಿ ಕುಳಿತಾಗ ಕ್ರಿಯಾ ಸಮಿತಿಯ ತಂಡವು ನೂರು ದಿನಗಳ ಕಾಲ ಸತತವಾಗಿ ಆಹಾರ ಧಾನ್ಯದ ಕಿಟ್‌ ವಿತರಿಸಿದ್ದು ಸಾಮಾನ್ಯ ಸಂಗತಿಯಲ್ಲ ಎಂದರು.

ನಾಗನೂರು ರುದ್ರಾಕ್ಷಿ ಮಠದ ಡಾ| ಅಲ್ಲಮಪ್ರಭು ಸ್ವಾಮಿಗಳು ಮಾತನಾಡಿ, ವಿಧಾನ ಪರಿಷತ್ತಿನಲ್ಲಿ ಗಡಿಭಾಗದಿಂದ ಒಂದು ಗಟ್ಟಿಯಾದ ಧ್ವನಿಯ ಅವಶ್ಯಕತೆಯಿದೆ. ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರನ್ನು ರಾಜ್ಯ ಸರಕಾರ ಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕು ಎಂದರು.

ಉ. ಕರ್ನಾಟಕದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಕರ್ನಾಟಕದ ಮುಖ್ಯಸ್ಥರಾದ ರಾಘವೇಂದ್ರ ಕಾಗವಾಡ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಧಾರವಾಡ ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ ಮಾತನಾಡಿದರು. ರಾಜ್ಯಸಭೆಯ ನೂತನ ಸದಸ್ಯ ಈರಣ್ಣ ಕಡಾಡಿ ಅವರನ್ನು, ಅಭಿಯಾನದಲ್ಲಿ ಪಾಲ್ಗೊಂಡ 40 ಕಾರ್ಯಕರ್ತರು ಹಾಗೂ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರನ್ನು ಸನ್ಮಾನಿಸಲಾಯಿತು. ಅಶೋಕ ಚಂದರಗಿ ಸ್ವಾಗತಿಸಿದು. ಗೋಪಾಲ ಖಟಾವಕರ ನಿರೂಪಿಸಿದರು. ಶಂಕರ ಬಾಗೇವಾಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next