Advertisement

ನಮ್ಮ ಅಪ್ಪಾಜಿ ಕ್ಯಾಂಟೀನ್‌ಗೆ 100 ದಿನ

11:31 AM Nov 10, 2017 | |

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗೆ ಪರ್ಯಾಯವಾಗಿ ಜೆಡಿಎಸ್‌ನ ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ ಬಸವನಗುಡಿಯ ಹನುಮಂತನಗರದಲ್ಲಿ ಆರಂಭಿಸಿದ್ದ “ಅಪ್ಪಾಜಿ ಕ್ಯಾಂಟೀನ್‌’ 100 ದಿನ ಪೂರೈಸಿದೆ. ಪ್ರತಿದಿನ ಬೆಳಗ್ಗೆ ತಿಂಡಿ ಮತ್ತು ಮಧ್ಯಾಹ್ನ ಊಟ ಸೇರಿ ಮೂರು ಸಾವಿರ ಜನರಂತೆ ಒಟ್ಟು 100 ದಿನಗಳಲ್ಲಿ ಮೂರು ಲಕ್ಷ ಮಂದಿ  ಉಪಹಾರ ಸೇವಿಸಿದ್ದಾರೆ.

Advertisement

ಮುಂದಿನ ದಿನಗಳಲ್ಲಿ ಜೆಡಿಎಸ್‌ ವತಿಯಿಂದ ರಾಜ್ಯಾದ್ಯಂತ ಅಪ್ಪಾಜಿ ಕ್ಯಾಂಟೀನ್‌ ಪ್ರಾರಂಭಿಸಲಾಗುವುದು ಎಂದು ಟಿ.ಎ.ಶರವಣ ತಿಳಿಸಿದರು. ಜೆಡಿಎಸ್‌ನ ಪಕ್ಷ ಕಚೇರಿಯಲ್ಲಿ ಶೀಘ್ರದಲ್ಲೇ ಅಪ್ಪಾಜಿ ಕ್ಯಾಂಟೀನ್‌ ಪ್ರಾರಂಭಿಸಲಾಗುವುದು.

ಡಿಸೆಂಬರ್‌ 14 ರಂದು ಕ್ಯಾಂಟೀನ್‌ ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು. ಅಪ್ಪಾಜಿ ಕ್ಯಾಂಟೀನ್‌ 100 ದಿನ ಪೂರೈಸಿದ ಸಂದರ್ಭದಲ್ಲಿ ನಟಿ ಶರ್ಮಿಳಾ ಮಾಂಡ್ರೆ ಹಾಜರಿದ್ದು ಶುಭ ಕೋರಿದರು. ಅಪ್ಪಾಜಿ ಕ್ಯಾಂಟೀನ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next