Advertisement

ಪ್ರತಿ ಕುಟುಂಬಕ್ಕೂ 100 ದಿನ ಉದ್ಯೋಗ

05:26 PM Dec 20, 2021 | Team Udayavani |

ಮಾನ್ವಿ: ಗ್ರಾಮೀಣ ಭಾಗದಲ್ಲಿ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಲು ಸರ್ಕಾರ ನರೇಗಾ ಯೋಜನೆಯಡಿ ಜಾಬ್‌ ಕಾರ್ಡ್‌ ಹೊಂದಿದ ಪ್ರತಿ ಕುಟುಂಬಕ್ಕೂ 100 ದಿನಗಳ ಉದ್ಯೋಗ ನೀಡುವ ಯೋಜನೆ ರೂಪಿಸಿದೆ ಎಂದು ತಾಲೂಕು ಐಇಸಿ ಸಂಯೋಜಕ ವೀರೇಶ ಹೇಳಿದರು.

Advertisement

ದೇವಿಪುರ ಗ್ರಾಮದಲ್ಲಿ ತಾಪಂ ಹಾಗೂ ಚಿಕ್ಕ ಕೋಟ್ನಕಲ್‌ ಗ್ರಾಪಂ ವತಿಯಿಂದ ನಡೆದ ನರೇಗಾ ವಿಷಯಧಾರಿತ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮಹಿಳೆಯರು ಹಾಗೂ ಪುರುಷರಿಗೆ ಸಮಾನ ವೇತನ ನೀಡಲಾಗುತ್ತಿದೆ. ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಹಾಗೂ ತೋಟಗಾರಿಕೆ ಬೆಳೆ ಬೆಳೆಯಲು ಮತ್ತು ವಸತಿ ಯೋಜನೆಯಡಿ ಮನೆ ನಿರ್ಮಿಸಲು ಕೂಡ ಅವಕಾಶವಿದ್ದು, ಗ್ರಾಮಕ್ಕೆ ಶಾಶ್ವತ ಬಹು ಉಪಯೋಗಿ ಕಾಮಗಾರಿ ಕೈಗೊಳ್ಳುವ ಮೂಲಕ ಗ್ರಾಮ ಅಭಿವೃದ್ಧಿಪಡಿಸಿಕೊಳ್ಳಬಹುದು ಎಂದು ತಿಳಿಸಿದರು. ಕಾರ್ಯಾಗಾರದಲ್ಲಿ ಗ್ರಾಮದ ಕೂಲಿಕಾರರು, ಸ್ವ-ಸಹಾಯ ಗುಂಪಿನ ಸದಸ್ಯರು, ರೈತರು ಹಾಗೂ ಗ್ರಾಮ ಕಾಯಕ ಮಿತ್ರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next