Advertisement

Madhya Pradesh ಶಾಲೆಗಳಲ್ಲಿ 100 ಕೋಟಿ ರೂ. ಪುಸ್ತಕ ಹಗರಣ: 20 ಪ್ರಾಂಶುಪಾಲರ ಬಂಧನ

12:56 AM May 29, 2024 | Team Udayavani |

ಭೋಪಾಲ್‌: ಮಧ್ಯಪ್ರದೇಶದ ಜಬಲ್ಪುರದಲ್ಲಿ ಅಕ್ರಮವಾಗಿ ಶುಲ್ಕ ಹೆಚ್ಚಳ ಮಾಡುವುದರ ಜತೆಗೆ ಖಾಸಗಿ ಪ್ರಕಾಶಕರ ಬಳಿಯೇ ಪುಸ್ತಕಗಳನ್ನು ಖರೀದಿಸುವಂತೆ ವಿದ್ಯಾರ್ಥಿಗಳನ್ನು ಆಗ್ರಹಿಸಿ, 100 ಕೋಟಿ ರೂ. ಹಗರಣ ನಡೆಸಿರುವ ಆರೋಪದ ಮೇರೆಗೆ 11 ಖಾಸಗಿ ಶಾಲೆಗಳ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ. ಶಾಲೆಯ ಆಡಳಿತ ಮಂಡಳಿಗಳ ಸದಸ್ಯರು, ಪ್ರಾಂಶುಪಾಲರು ಸೇರಿ ಕನಿಷ್ಠ 51 ಮಂದಿಯನ್ನು ಎಫ್ಐಆರ್‌ನಲ್ಲಿ ಹೆಸರಿಸಿ 20 ಮಂದಿಯನ್ನು ಬಂಧಿಸಲಾಗಿದೆ. ಇನ್ನು ಎಲ್ಲ 11 ಶಾಲೆಗಳಿಗೂ ತಲಾ 2 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಪೋಷಕರಿಂದ ದೋಚಿರುವ ಎಲ್ಲ ಹಣವನ್ನು 30 ದಿನಗಳ ಒಳಗೆ ಹಿಂದಿರುಗಿಸುವಂತೆ ಡೀಸಿ ಆದೇಶಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next