ದಾವಣಗೆರೆ: ಕೊರೊನಾ ಹೋಗಿದೆ ಎಂದೂಯಾರೂ ಮೈ ಮರೆಯುವಂತಿಲ್ಲ. ಜಾಗ್ರತೆವಹಿಸಿ ಪ್ರತಿಯೊಬ್ಬರೂ ಲಸಿಕೆ ಪಡೆದು ಜೀವಉಳಿಸಿಕೊಳ್ಳಬೇಕು ಎಂದು ಸಂಸದ ಡಾ| ಜಿ.ಎಂ.ಸಿದ್ದೇಶ್ವರ ಹೇಳಿದರು.
ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿಶನಿವಾರ ದೇಶದಲ್ಲಿ 100 ಕೋಟಿ ಜನರಿಗೆಲಸಿಕೆ ಹಾಕಿ ಸಾಧನೆಗೈದ ಹಿನ್ನೆಲೆಯಲ್ಲಿಕೊರೊನಾ ಸೇನಾನಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಚೀನಾ, ಆಸ್ಟ್ರೇಲಿಯಾ,ಅಮೆರಿಕಾದಲ್ಲಿ ಮೂರನೇ ಅಲೆ ಆರಂಭವಾಗಿದೆ.ಹೀಗಾಗಿ ಎಲ್ಲರೂ ಎಚ್ಚರಿಕೆ ವಹಿಸಿ ದೇಶವನ್ನುಕಾಪಾಡಬೇಕು ಎಂದರು.ಇಡೀ ಪ್ರಪಂಚದಲ್ಲಿಯೇ 100 ಕೋಟಿಲಸಿಕೆ ನೀಡಿ ಜನರ ಪ್ರಾಣ ರಕ್ಷಿಸಿರುವುದುಭಾರತದ ಹೆಗ್ಗಳಿಕೆಯಾಗಿದೆ. ಮೋದಿನೇತƒತ್ವದಲ್ಲಿ ದೇಶಾದ್ಯಂತ ಲಸಿಕೆ ಹಾಕುತ್ತಿದ್ದೇವೆ.
ಕೊರೊನಾ ಮಹಾಮಾರಿಯಿಂದ ದೇಶತತ್ತರಿಸಿದ ಸಂದರ್ಭದಲ್ಲಿ ಪ್ರಧಾನಿ ಮೋದಿಅವರು ದಿಟ್ಟತನದಿಂದ ಹಲವು ಕ್ರಮಕೈಗೊಂಡು 100 ಕೋಟಿ ಡೋಸ್ ಲಸಿಕೆನೀಡಿರುವುದು ವಿಶ್ವದಲ್ಲಿಯೇ ದೊಡ್ಡಮೈಲುಗಲ್ಲು ಎಂದರು.ಇಲ್ಲಿಯವರೆಗೂ ಕೊರೊನಾ ವಾರಿಯರ್‌ಗಳು ಜೀವದ ಹಂಗು ತೊರೆದು ಜನರ ಪ್ರಾಣ ರಕ್ಷಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೊರೊನಾಸೇನಾನಿಗಳನ್ನು ಸತ್ಕರಿಸುತ್ತಿದ್ದೇವೆ. ಜಿಲ್ಲೆಯಲ್ಲಿಈವರೆಗೆ 14.50 ಲಕ್ಷ ಜನರಿಗೆ ಲಸಿಕೆ ನೀಡಿದ್ದು,ಶೇ. 82ರಷ್ಟು ಜನ ಲಸಿಕೆ ಪಡೆದಿದ್ದಾರೆ. ಆದರೆಜಿಲ್ಲೆಯ ಕೆಲವೆಡೆ ಲಸಿಕೆ ಹಾಕಿಸಿಕೊಳ್ಳಲುಹಿಂದೇಟು ಹಾಕುತ್ತಿದ್ದಾರೆ.
ಯಾರೂ ಉದಾಸಿನಮಾಡಬಾರದು. ಲಸಿಕೆ ಪಡೆದು ಜೀವರಕ್ಷಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ಸಂಸದ ಡಾ| ಜಿ.ಎಂ. ಸಿದ್ದೇಶ್ವರ,ಶಾಸಕ ಎಸ್.ಎ. ರವೀಂದ್ರನಾಥ್, ಪಾಲಿಕೆಮೇಯರ್ ಎಸ್.ಟಿ. ವೀರೇಶ್ ಕೊರೊನಾವಾರಿಯರ್‌ಗಳನ್ನು ಸನ್ಮಾನಿಸಿದರು. ಇದೇ ವೇಳೆಬಿಜೆಪಿ ಕಾರ್ಯಕರ್ತರು ಸಿಹಿ ವಿತರಿಸಿದರು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕಡಾ| ಎ.ಎಚ್. ಶಿವಯೋಗಿಸ್ವಾಮಿ, ಬಿಜೆಪಿರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಜಯರುದ್ರೇಶ್, ದೂಡಾ ಮಾಜಿ ಅಧ್ಯಕ್ಷಯಶವಂತರಾವ್ ಜಾಧವ್, ದೂಡಾ ಅಧ್ಯಕ್ಷದೇವರಮನಿ ಶಿವಕುಮಾರ್, ಶಿವಶಂಕರ್,ಶಿವನಗೌಡ ಪಾಟೀಲ್, ಶಿವರಾಜ್ ಪಾಟೀಲ್‌ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.