Advertisement
ಕೇಬಲ್ ಕಾರಿಗೆ ಸ್ಥಳ ನಿಗದಿಕೇಬಲ್ ಕಾರು ಪಯಣಕ್ಕೆ ಪೂರಕವಾಗಿರುವ ಸ್ಥಳವನ್ನು ಗೊತ್ತುಪಡಿಸಲಾಗಿದ್ದು, ಟೂರಿಸಂ ಸರ್ಕ್ಯೂಟ್ ಒಳಪಡುವಂತೆ ರಾಣಿಪುರಂ ಚಾರಣಧಾಮದ ಸಮೀಪದಲ್ಲಿರುವ ಏಳು ಎಕರೆ ಸ್ಥಳದಲ್ಲಿ ಹೊಸ ಪ್ರವಾಸಿ ಯೋಜನೆ ಅನಾವರಣಗೊಳ್ಳಲಿದೆ. ಚಂಗನಶ್ಯೇರಿಯ ಅಪ್ಲೈಡ್ ಪ್ರಾಪರ್ಟಿಸ್ ಅಂಡ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಅಧಿಕಾರಿಗಳು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಅವರನ್ನು ಭೇಟಿ ಮಾಡಿ ಭೂ ಸ್ಥಳದ ರೇಖಾಚಿತ್ರವನ್ನು ಹಸ್ತಾಂತರಿಸಿದರು.
ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಪ್ರವಾಸೋ ದ್ಯಮ ಅಭಿವೃದ್ಧಿ ಯೋಜನೆಯ ಪ್ರಾಥಮಿಕ ಹಂತದ ಕೆಲಸ ಕಾರ್ಯಗಳಿಗೆ ಅಂಕಿತ ಹಾಕಲಾಗಿದೆ. ಇದಕ್ಕೆ ಅಗತ್ಯವಿರುವ ಮೂಲಭೂತ ಅಗತ್ಯತೆಗಳನ್ನು ಶೀಘ್ರದಲ್ಲೇ ಪೂರೈಸಲಾಗುವುದು ಎಂದು ಕಂಪೆನಿ ಅಧಿಕೃತರು ತಿಳಿಸಿದ್ದಾರೆ. ಬೆಟ್ಟದಲ್ಲಿ ಗ್ಲಾಸ್ ಹೌಸ್
ಯೋಜನೆಯಡಿ ಚಾರಣಧಾಮದ ಬೆಟ್ಟ ಪ್ರದೇಶದಲ್ಲಿ ಗ್ಲಾಸ್ ಹೌಸ್ ನಿರ್ಮಾಣವಾಗಲಿದೆ. ಖಾಸಗಿ ಸಹಭಾಗಿತ್ವವನ್ನು ಡಿ.ಟಿ.ಪಿ.ಸಿ ಈ ಹಿಂದೆಯೇ ಅಪೇಕ್ಷಿಸಿತ್ತು ಎಂದು ಹೇಳಲಾಗಿದೆ. ಕಲ್ಲಿಕೋಟೆಯ ಖಾಸಗಿ ಸಂಸ್ಥೆ ಅಧಿಕೃತರು ಮುಂದಿನವಾರ ರಾಣಿಪುರಕ್ಕೆ ಆಗಮಿಸಿ, ಗ್ಲಾಸ್ ಹೌಸ್ ನಿರ್ಮಾಣ ಕಾರ್ಯದ ಬಗ್ಗೆ ಅಧ್ಯಯನ ನಡೆಸಲಿದ್ದಾರೆ ಎಂದು ಡಿ.ಟಿ.ಪಿ.ಸಿ. ಪ್ರಬಂಧಕ ಪಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.