ಕೋಲಾರ: ಮೀಟರ್ ಬಡ್ಡಿ ಶೋಷಣೆ ತಪ್ಪಿಸಿ ಸಮಾಜದ ಕಟ್ಟಕಡೆಯ ಪ್ರತಿ ರೈತನಿಗೂ ಸಾಲ ತಲುಪಿಸಿದಾಗ ಮಾತ್ರ ಸಹಕಾರ ಆಂದೋ ಲನ ಯಶಸ್ವಿಯಾಗಲು ಸಾಧ್ಯ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದ ದಿ.ನಾಗಯ್ಯರೆಡ್ಡಿ ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಅಪೆಕ್ಸ್ ಬ್ಯಾಂಕ್ ಕೊಡುಗೆಯಾಗಿ ನೀಡಿದ ಕಂಪ್ಯೂಟರ್‌ಗಳನ್ನು 100 ಕ್ಕೂ ಹೆಚ್ಚು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ವಿತರಿಸುವ ಹಾಗೂ ಮೈಕ್ರೋ ಎಟಿಎಂಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹಾಗೂ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ನೀಲಕಂಠೇಗೌಡ ಮನವಿಗೆ ಸ್ಪಂದಿಸಿ ಮತ್ತೆ 100 ಕಂಪ್ಯೂಟರ್ ಒದಗಿಸುವ ಭರವಸೆ ನೀಡಿದರು.
ವೃಥಾ ಆರೋಪ ಸಲ್ಲದು: ಶಾಸಕ ಕೆ. ಶ್ರೀನಿವಾಸಗೌಡ ಮಾತನಾಡಿ, ಸಹಕಾರ ಬ್ಯಾಂಕಿನ ವಿರುದಟಛಿ ವೃಥಾ ಆರೋಪ ಸಲ್ಲದು, ತಪ್ಪಾಗಿದ್ದರೆ ನೇರವಾಗಿ ಬಂದು ಕೇಳಬೇಕು, ಮುಳುಗಿ ಹೋಗಿದ್ದ ಬ್ಯಾಂಕ್ ಇಂದು ಇಷ್ಟೊಂದು ಅಭಿವೃದ್ಧಿ ಹೊಂದಿದೆ. ಇದನ್ನು ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲೂ ಇದೆ ಎಂದು ಹೇಳಿದರು.
ಸುಳ್ಳುದೂರಿಗೆ ಸ್ಪಂದನೆ ಅಗತ್ಯವಿಲ್ಲ: ಮೈಕ್ರೊ ಎಟಿಎಂಗೆ ಚಾಲನೆ ನೀಡಿದ ಶಾಸಕಿ ಹಾಗೂ ಬ್ಯಾಂಕ್ ನಿರ್ದೇಶಕಿ ರೂಪಕಲಾ, ಭದ್ರತೆ ಇಲ್ಲದೇ ಸಾಲ ನೀಡಿ ತಾಯಂದಿರ ಬದುಕಿಗೆ ನೆರವಾಗುತ್ತಿರುವ ಬ್ಯಾಂಕಿನ ವಿರುದ ಬರುವ ಸುಳ್ಳು ದೂರುಗಳಿಗೆ ಸ್ಪಂದನೆ ಅಗತ್ಯವಿಲ್ಲ ಎಂದು ಹೇಳಿದರು. ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಶ್ರೀಕಂಠೇಗೌಡ, ಸಹಕಾರ ವ್ಯವಸ್ಥೆ ಸರಿಪಡಿಸಲು ಎಲ್ಲರೂ ಕೈಜೋಡಿಸಬೇಕು,
ಸರ್ಕಾರಿ ಇಲಾಖೆಗಳ ಹಣ ಡಿಸಿಸಿ ಬ್ಯಾಂಕಿನಲ್ಲಿಡಲು ಸರ್ಕಾರದ ಮೇಲೆ ಒತ್ತಡ ತರಬೇಕು, ಎಂಪಿಸಿಎಸ್‌ಗಳ ವೈಯಕ್ತಿಕ ಖಾತೆ ಸೊಸೈಟಿ, ಡಿಸಿಸಿ ಬ್ಯಾಂಕಿನಲ್ಲಿ ತೆರೆಯುವಂತೆ ಮಾಡಬೇಕು ಎಂದು ವಿವರಿಸಿದರು. ನಬಾರ್ಡ್ ಎಜಿಎಂ ನಟರಾಜನ್, ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಇಂದು ಮಾದರಿಯಾಗಿದೆ, ಇದಕ್ಕೆ ಕಾರಣರಾದ ಆಡಳಿತ ಮಂಡಳಿ ಸದಸ್ಯರು ಅಭಿನಂದನಾರ್ಹರು ಎಂದು ಹೇಳಿದರು.
ವ್ಯವಸ್ಥಾಪಕ ಹುಸೇನ್ ದೊಡ್ಡಮನಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಎಜಿಎಂ ಶಿವಕುಮಾರ್ ಬ್ಯಾಂಕ್ ಬೆಳೆದು ಬಂದ ಕುರಿತ ಮಾಹಿತಿ ಒದಗಿಸಿದರು. ಅಪೆಕ್ಸ್ ಬ್ಯಾಂಕ್ ಎಂಡಿ ವೆಂಕಟಸ್ವಾಮಿ, ಅಪೆಕ್ಸ್‌ನ ನಾಗಣ್ಣ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ಎಂ.ಎಲ್. ಅನಿಲ್‌ಕುಮಾರ್, ನಾಗನಾಳ ಸೋಮಣ್ಣ, ನಾರಾಯಣರೆಡ್ಡಿ, ಕೆ.ವಿ.ದಯಾನಂದ್, ಯಲವಾರ ಸೊಣ್ಣೇಗೌಡ, ಹನುಮಂತರೆಡ್ಡಿ, ವೆಂಕಟಶಿವಾರೆಡ್ಡಿ, ವೆಂಕಟರೆಡ್ಡಿ, ಚನ್ನರಾ ಯಪ್ಪ, ನಾಗಿರೆಡ್ಡಿ, ಗೋವಿಂದರಾಜು, ಎಂ.ಡಿ.ರವಿ, ಎಜಿಎಂಗಳಾದ ಬೈರೇಗೌಡ, ನಾಗೇಶ್ ಮತ್ತಿತರರಿದ್ದರು.