Advertisement
ರಾಜಧಾನಿ ಜನತೆಗೆ ಕಡಿಮೆ ದರದಲ್ಲಿ ಉಪಹಾರ ಮತ್ತು ಊಟ ವಿತರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಯೋಜನೆಯನ್ನು 2017-18ನೇ ಸಾಲಿನ ಆಯವ್ಯಯದಲ್ಲಿ ಪ್ರಕಟಿಸಿದೆ. ಜತೆಗೆ ಯೋಜನೆ ಅನುಷ್ಠಾನಕ್ಕಾಗಿ 100 ಕೋಟಿ ರೂ. ಅನುದಾನ ಒದಗಿಸಿರುವ ರಾಜ್ಯ ಸರ್ಕಾರ, ಯೋಜನೆ ಅನುಷ್ಠಾನದ ಜವಾಬ್ದಾರಿಯನ್ನು ಪಾಲಿಕೆಗೆ ವಹಿಸಿದೆ.
Related Articles
Advertisement
ಮೂರು ದಿನಕ್ಕೆ ಒಂದು ಕ್ಯಾಂಟೀನ್ ರೆಡಿ!: ಪ್ರೀಕಾಸ್ಟ್ ಎಲಿಮೆಂಟ್‌ಗಳನ್ನು ಬಳಸಿ ಕೇವಲ ಮೂರು ದಿನಗಳಲ್ಲಿ ಒಂದು ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತದೆ. ಪಾಲಿಕೆಗೆ ಬರಲಿರುವ ತಜ್ಞರ 10 ತಂಡಗಳು ತಿಂಗಳಿಗೆ 100 ಕ್ಯಾಂಟೀನ್ ನಿರ್ಮಿಸಲಿದ್ದಾರೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಗುರುತಿಸಿರುವ 102 ಸ್ಥಳಗಳಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮೊದಲ ಹಂತದಲ್ಲಿ 102 ಕ್ಯಾಂಟೀನ್!: ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಪಾಲಿಕೆಯ 198 ವಾರ್ಡ್‌ಗಳಲ್ಲೂ ಅಧಿಕಾರಿಗಳು ಸ್ಥಳ ಗುರುತಿಸಿದ್ದಾರೆ. ಆದರೆ, ಸದ್ಯ ಕ್ಯಾಂಟೀನ್ ನಿರ್ಮಾಣಕ್ಕೆ ಸಿದ್ಧವಾಗಿರುವುದು 102 ಸ್ಥಳ ಮಾತ್ರ. ಹೀಗಾಗಿ ಮೊದಲ ಹಂತವಾಗಿ 102 ವಾರ್ಡ್‌ಗಳಲ್ಲಿ ಕ್ಯಾಂಟೀನ್ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಉಳಿದಿರುವ 96 ವಾರ್ಡ್‌ಗಳಲ್ಲಿಯೂ ಸ್ಥಳ ಗುರುತು ಮಾಡಲಾಗಿದೆಯಾದರೂ ಕ್ಯಾಂಟೀನ್ ನಿರ್ಮಾಣಕ್ಕೆ ಕೆಲ ಲೋಪಗಳಿರುವುದರಿಂದ ಅವುಗಳನ್ನು ಸರಿಪಡಿಸಿದ ನಂತರ ಆ ಭಾಗಗಳಲ್ಲಿ ಕ್ಯಾಂಟೀನ್ ನಿರ್ಮಿಸಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.
ಹೊಸೂರಿನ ಕೃಷ್ಣಗಿರಿಯಿಂದ ನಗರಕ್ಕೆ ಇಂದಿರಾ ಕ್ಯಾಂಟೀನ್ ಎಲಿಮೆಂಟ್‌ಗಳ ರವಾನೆ ಕಾರ್ಯ ಆರಂಭವಾಗಿದ್ದು, ಎಲಿಮೆಂಟ್ ಪೂರೈಸುವ ಕಾರ್ಖಾನೆಯಿಂದ ಪರಿಣಿತರ 10 ಹತ್ತು ತಂಡ ಬರಲಿವೆ. ಒಂದು ತಂಡ ಮೂರು ದಿನಕ್ಕೆ ಒಂದು ಕ್ಯಾಂಟೀನ್ ಸಿದ್ಧಪಡಿಸಲಿದ್ದು, ಅವರಿಗೆ ಅಗತ್ಯವಾದ ನೆರವನ್ನು ಪಾಲಿಕೆ ನೀಡಲಿದೆ. – ಜಿ.ಪದ್ಮಾವತಿ, ಮೇಯರ್ ಕ್ಯಾಂಟೀನ್ ಊಟಕ್ಕೆ ಕ್ಷೇತ್ರವಾರ ಟೆಂಡರ್ ಆಹ್ವಾನ: ಇಂದಿರಾ ಕ್ಯಾಂಟೀನ್ ಯೋಜನೆಗೆ ಅಡುಗೆ ಸಿದ್ಧಪಡಿಸಿ ಪೂರೈಸಲು ಪ್ರತಿ ವಿಧಾನಸಭಾ ಕ್ಷೇತ್ರದಿಂದ ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್‌ನಲ್ಲಿ ಪಾಲ್ಗೊಂಡ ಅರ್ಹ ಗುತ್ತಿಗೆದಾರರಿಗೆ ಜುಲೈ 19ರಂದು ಕಾರ್ಯಾದೇಶ ನೀಡಲು ಪಾಲಿಕೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಆಹಾರ ಪೂರೈಕೆದಾರರಿಗೆ ಪಾಲಿಕೆಯಿಂದ ಹಲವಾರು ಷರತ್ತುಗಳನ್ನು ಸಹ ವಿಧಿಸಲಾಗಿದೆ. ಗುತ್ತಿಗೆದಾರರಿಗೆ ಪಾಲಿಕೆ ವಿಧಿಸಿದ ಷರತ್ತುಗಳೇನು?
– ಆಹಾರ ಸುರಕ್ಷತೆ ಕಾಯ್ದೆ 2006ರಡಿ ಸುರಕ್ಷಿತ ಆಹಾರ ಪದಾರ್ಥ ಪೂರೈಕೆ
– ಬ್ರ್ಯಾಂಡೆಡ್ ಅಡುಗೆ ಎಣ್ಣೆ, ಆಹಾರ ಪದಾರ್ಥ ಬಳಕೆ ಕಡ್ಡಾಯ
– ಪ್ರತಿ ಕ್ಯಾಂಟೀನ್‌ನಲ್ಲಿ ಪ್ರತಿ ಅವಧಿಗೆ 300 ಮಂದಿಗೆ ಊಟ, ತಿಂಡಿ ಪೂರೈಸಬೇಕು
– ಆಹಾರ ಸಿದ್ಧಪಡಿಸುವ ಮತ್ತು ಪೂರೈಕೆ ಸಿಬ್ಬಂದಿಯನ್ನು ಕಡ್ಡಾಯವಾಗಿ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು
– ಆಹಾರ ಪೂರೈಕೆ ಪ್ರಮಾಣ ಮಿತಿಯ ನಿಯಂತ್ರಣ ಅಧಿಕಾರ ಪಾಲಿಕೆಗೆ
– ಹೆಚ್ಚುವರಿ ಆಹಾರ ತಯಾರಿಕೆಗೆ ಗುತ್ತಿಗೆದಾರರು ಸಿದ್ಧವಿರಬೇಕು
– ಷರತ್ತುಗಳನ್ನು ಉಲ್ಲಂ ಸುವ ಗುತ್ತಿಗೆದಾರರಿಗೆ ದಂಡ ವಿಧಿಸುವ ಅಧಿಕಾರ ಪಾಲಿಕೆಗಿದೆ ಕ್ಯಾಂಟಿನ್ ವೇಳಾಪಟ್ಟಿ
– ಬೆಳಗಿನ ಉಪಾಹಾರ-ಬೆಳಗ್ಗೆ 7.30 ರಿಂದ 10
– ಮಧ್ಯಾಹ್ನ ಊಟ-ಮಧ್ಯಾಹ್ನ 12.30 ರಿಂದ 3
– ರಾತ್ರಿ ಊಟ-ಸಂಜೆ 7.30ರಿಂದ ರಾತ್ರಿ 9ರವರೆಗೆ ಇಂದಿರಾ ಕ್ಯಾಂಟೀನ್ ಮೆನು
* ವಾರ-ಬೆಳಗಿನ ಉಪಾಹಾರ-ಮಧ್ಯಾಹ್ನ/ರಾತ್ರಿ ಊಟ
* ಸೋಮವಾರ-3 ಇಡ್ಲಿ, ಪುಳಿಯೋಗರೆ, ಚಟ್ನಿ,ಅನ್ನ, ತರಕಾರಿ ಸಾಂಬಾರ್, ಮೊಸರನ್ನ, ಚಟ್ನಿ, ಟಮೊಟೋಬಾತ್
* ಮಂಗಳವಾರ-ಖಾರಾಬಾತ್, ಕಾಯಿ ಸಾಸಿವೆ ಚಿತ್ರನ್ನಾ, ಮೊಸರನ್ನ
* ಬುಧವಾರ-ಪೊಂಗಲ್, ವಾಂಗಿಬಾತ್, ಮೊಸರನ್ನ
* ಗುರುವಾರ-ರವಾ ಕಿಚಡಿ, ಬಿಸಿಬೇಳೆ ಬಾತ್, ಮೊಸರನ್ನ
* ಶುಕ್ರವಾರ-ಚಿತ್ರಾನ್ನ, ಮೆಂತ್ಯಪಲಾವ್, ಮೊಸರನ್ನ
* ಶನಿವಾರ-ವಾಂಗಿಬಾತ್, ಪುಳಿಯೋಗರೆ, ಮೊಸರನ್ನ
* ಭಾನುವಾರ-ಖಾರಾಬಾತ್, ಕೇಸರಿ ಬಾತ್, ದರ್ಶಿನಿ ಫಲಾವ್, ಮೊಸರನ್ನ