ತುರುವೇಕೆರೆ: ತಾಲೂಕಿನಲ್ಲಿ ಕೋವಿಡ್ 19 ಬಾಧೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ಇಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸುಮಾರು 100 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಉಪಭಾಗಾಧಿಕಾರಿ ನಂದಿನಿ ಹೇಳಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಿ ಏರ್ಪಡಿಸಿರುವ ವ್ಯವಸ್ಥೆ ಪರಿಶೀಲಿ ಸಲು ಆಗಮಿಸಿದ್ದಾಗ ಮಾತನಾಡಿ, ಸೋಂಕಿ ತರ ಪ್ರಥಮ ಚಿಕಿತ್ಸೆಗೆ ಇಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ರಾಜ್ಯದ ವಿವಿಧ ಕಡೆಗಳಿಂದ ಗ್ರಾಮಗಳಿಗೆ ಬರುತ್ತಿರುವ ಮಂದಿಯಿಂದ ಕೋವಿಡ್ 19 ಹಬ್ಬುತ್ತಿರುವುದು ವಿಷಾದನೀಯ ಎಂದು ಹೇಳಿದರು. ರೋಗದಿಂದ ಮುಕ್ತವಾಗಿದ್ದ ತಾಲೂಕಿನಲ್ಲಿ ಕೋವಿಡ್ 19 ಹರಡುತ್ತಿರುವುದು ಗಾಬರಿ ಹುಟ್ಟಿಸಿದೆ. ಗ್ರಾಮಗಳಿಗೆ ಬರುವ ಇತರೆ ಊರಿನವರ ಬಗ್ಗೆ ಕೂಡಲೇ ಮಾಹಿತಿ ನೀಡಿದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು. ಅರಿವು-ಸಾರ್ವಜನಿಕರು ಕೋವಿಡ್ 19 ದಿಂದ ದೂರಾಗಲು ಜಾಗೃತರಾಗುವುದು ಮುಖ್ಯ.
ಪ್ರತಿ ಕ್ಷಣ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು. ತಮ್ಮ ಆರೋಗ್ಯದತ್ತ ಗಮನ ನೀಡಿದಲ್ಲಿ ತಮ್ಮ ಆರೋಗ್ಯವೂ ಹಾಗೂ ಇತರರ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ತಿಳಿಸಿದರು. ತಾಲೂಕಿನ ಮೇಲಿನವರಗೇನ ಹಳ್ಳಿಯ ಬಾಲಕನಿಗೆ ಸೋಂಕು ತಗುಲಿದೆ. ಬೆಂಗಳೂರಿನಿಂದ ಬಂದಿದ್ದವರಿಂದ ಈ ಸೋಂಕು ತಗುಲಿದೆ ಎಂದು ಅನುಮಾನ ವಿದೆ. ಸದ್ಯ ಬಾಲಕನಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಸುಪ್ರಿಯಾ ಮಾಹಿತಿ ನೀಡಿದರು. ಸಹಕಾರ-ತಾಲೂಕಿನಲ್ಲಿ ಕೋವಿಡ್ 19 ಹೆಚ್ಚು ತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಹಾಗೂ ತಾಲೂಕಿನ ಇತರೆ ಪ್ರದೇಶಗಳಲ್ಲಿ ವ್ಯಾಪಾರಸ್ಥರು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯವಹರಿಸಬೇಕೆಂದು ಮನವಿ ಮಾಡಿರುವ ಶಾಸಕ ಮಸಲಾ ಜಯರಾಮ್ ತಾಲೂಕಿನ ಜನತೆ ಸಹಕರಿಸಿ ಕೋವಿಡ್ 19ವನ್ನು ಹಿಮ್ಮೆಟ್ಟಿಸಲು ವಿನಂತಿಸಿ ಮಾಡಿದರು. ತಹಶೀಲ್ದಾರ್ ನಯೀಮ್ ಉನ್ನಿಸ್ಸಾ, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶ್ರೀಧರ್ ಇತರರು ಇದ್ದರು.