Advertisement
ತಾಲೂಕಿನಲ್ಲಿ ಸರಕಾರಿ ಇಲಾಖೆ, ಭಾರತೀಯ ವೈದ್ಯಕೀಯ ಸಂಸ್ಥೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ 100 ಹಾಸಿಗೆಗಳ ಕೊರೊನಾ ಸೆಂಟರ್ ಆರಂಭಿಸುವ ಚಿಂತನೆ ನಡೆದಿದ್ದು, ಎರಡು ದಿನಗಳಲ್ಲಿ ರೂಪರೇಷೆ ಪೂರ್ಣಗೊಳ್ಳಲಿವೆ. ಕೊರೊನಾ ಸೋಂಕಿತರಿಗೆ ದಿನದ 24 ಗಂಟೆ ಸೇವೆ ಲಭಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದ್ದು, ಸರಕಾರಿ ಯಂತ್ರ ಮತ್ತು ಖಾಸಗಿ ಸಂಸ್ಥೆಗಳು ಅಂದಾಜು 70:30 ಅನುಪಾತದಲ್ಲಿ ಕೆಲಸ ನಡೆಯಲಿದೆ.
Related Articles
Advertisement
ಸಹಕಾರ ತತ್ವದಡಿಯಲ್ಲಿ ನಿರ್ಮಾಣವಾಗಲಿರುವ ಕೊರೊನಾ ಸೆಂಟರ್‌ದಲ್ಲಿ ಖಾಸಗಿ ವೈದ್ಯರ ಪಾತ್ರ ಬಹುಮುಖ್ಯ. ದಿನದ 24 ಗಂಟೆ ಸೇವೆ ನಿರ್ವಹಿಸುವ ಕೊರೊನಾ ಸೆಂಟರ್ ದಲ್ಲಿ 8 ಗಂಟೆ ನಿಗದಿಪಡಿಸಿದ ಅವಧಿ ಯಲ್ಲಿ ಮೂರು ವಿಭಾಗದಲ್ಲಿ ವೈದ್ಯರು, ನರ್ಸ್‌ಗಳ ತಂಡ ಕೆಲಸ ನಿರ್ವಹಿಸುವ ಯೋಜನೆ ಇದಾಗಿದೆ. 24 ಗಂಟೆ ಸೇವೆ ಸಲ್ಲಿಸುವ ಕೊರೊನಾ ಸೆಂಟರ್‌ನಲ್ಲಿ ರೋಗಿಗಳಿಗೆ ನೀರು, ವಿದ್ಯುತ್, ಶೌಚಾಲಯ, ಸ್ವತ್ಛತೆ, ಭದ್ರತೆ, ಉಪಹಾರ, ಊಟದ ವ್ಯವಸ್ಥೆ ನಡೆಯಲಿದೆ. ಈಗಾಗಲೇ ಶಾಸಕ ಆನಂದ ನ್ಯಾಮಗೌಡ ನೇತೃತ್ವದಲ್ಲಿ ಕಂದಾಯ, ಆರೋಗ್ಯ ಇಲಾಖೆ, ನಗರಸಭೆ, ಪೊಲೀಸ್ ಮತ್ತು ಭಾರತೀಯ ವೈದ್ಯಕೀಯ ಸಂಸ್ಥೆಯ ಖಾಸಗಿ ಆಸ್ಪತ್ರೆಗಳ ವೈದ್ಯರ ಜಂಟಿ ಸಭೆ ನಡೆದಿದ್ದು, ಬಹುತೇಕ ಯಶಸ್ವಿಯಾಗಿದೆ. ತಾಲೂಕಿನ ಕೊರೊನಾ ಸೋಂಕಿತರಿಗೆ ಉತ್ತಮ ಸೇವೆ ಲಭ್ಯವಾಗಲಿದೆ.
ಕಂದಾಯ ಇಲಾಖೆ 100 ಹಾಸಿಗೆಯ ಸುಸಜ್ಜಿತ ಕಟ್ಟಡ ನೀಡಲಿದೆ. ಆರೋಗ್ಯ ಇಲಾಖೆ ಆಕ್ಸಿಜನ್, ರೋಗಿಗಳಿಗೆ ಪಿಪಿ ಕಿಟ್, ಔಷಧಿ ಸಹಿತ ಇತರೇ ಪರಿಕರ ನೀಡಲಿದೆ. ಪೊಲೀಸ್ ಇಲಾಖೆ ಸುರಕ್ಷತೆ, ಭದ್ರತೆ ವ್ಯವಸ್ಥೆ ಮಾಡಲಿದೆ. ನಗರಸಭೆ ಕಾರ್ಮಿಕರು ಸ್ವತ್ಛತೆ ಕಾಪಾಡಲಿದೆ. ಖಾಸಗಿ ವೈದ್ಯರ ತಂಡ ದಿನದ 24 ಗಂಟೆ ರೋಗಿಗಳಿಗೆ ಚಿಕಿತ್ಸೆ ನೀಡಲಿದೆ.