Advertisement

ಮಂಗಳೂರು ವಿಮಾನ ದುರಂತ@10: ಸಿಡಿದ ವಿಮಾನ: 158 ಜೀವ ಭಸ್ಮ

08:52 AM May 22, 2020 | mahesh |

ವಿಮಾನ ರನ್‌ವೇ ಮುಟ್ಟಿಯಾನಿಗಳು ಗಮ್ಯ ತಲುಪಿದ ನಿರಾಳತೆಯಲ್ಲಿ ಇಳಿಯಲು ಸಜ್ಜಾಗುತ್ತಿದ್ದಂತೆಯೇ ನಿಲುಗಡೆಗೆ ಬರದ ವಿಮಾನ ಮುಂದೋಡುತ್ತಲೆ ತಡೆಗಳನ್ನು ಕೆಡವಿ ಕಮರಿಗೆ ಬಿದ್ದು, ಸ್ಫೋಟಿಸಿ ಉರಿದು 158 ಯಾನಿಗಳ ಬದುಕನ್ನೇ ನುಂಗಿ ನೊಣೆದಿತ್ತು. ಪವಾಡ ಸದೃಶರಾಗಿ ಪಾರಾದ ಎಂಟು ಮಂದಿಗೆ ಆಘಾತ ಜೀವಮಾನವಿಡೀ ಕಾಡುವ ದುಃಸ್ವಪ್ನವಾಯಿತು. ಪ್ರತ್ಯಕ್ಷದರ್ಶಿಗಳ ಅಂತರಂಗವನ್ನು ಅಲ್ಲಾಡಿಸಿಬಿಟ್ಟಿತು. ಕೇಳಿದವರ, ದೂರದರ್ಶನದಲ್ಲಿ ವೀಕ್ಷಿಸಿದವರ ಹೃದಯಗಳನ್ನು ವಿಷಣ್ಣತೆಯಲ್ಲಿ ಮುಳುಗಿಸಿಬಿಟ್ಟಿತು.(ಉದಯವಾಣಿ ದೈನಿಕದಲ್ಲಿ ಅಂದು ಪ್ರಕಟವಾದ ವರದಿ)

Advertisement

ಮಂಗಳೂರು: ದುಬಾೖನಿಂದ ಶನಿವಾರ ಮುಂಜಾನೆ ಬಜ್ಪೆ ವಿಮಾನ ನಿಲ್ದಾ ಣಕ್ಕೆ ಬಂದ ಏರಿಂಡಿಯಾ ಎಕ್ಸ್‌ ಪ್ರಸ್‌ ವಿಮಾನ ನಿಯಂ ತ್ರಣ ಕಳೆ ದು ಕೊಂಡು ಸಮೀಪದ ಕೆಂಜಾರು ಎಂಬಲ್ಲಿ ಪತನಗೊಂಡಭೀಕರ ದುರಂತದಲ್ಲಿ 158 ಮಂದಿ ಪ್ರಯಾಣಿ ಕರು ಮರಣ ಹೊಂದಿದ್ದರು. ಕೇವಲ ಎಂಟು ಮಂದಿ ಮಾತ್ರ ಬದುಕುಳಿದಿದ್ದರು. ಬಹು ತೇಕ ಕಳೇ ಬರಗಳು ಸುಟ್ಟುಕರಕಲಾಗಿದ್ದು ಗುರುತು ಹಿಡಿಯಲು ಕೂಡಾ ಸಾಧ್ಯವಿಲ್ಲವಾಗಿತ್ತು. ಇದು ಜಗತ್ತಿನ ಅತೀ ಭೀಕರ ವಿಮಾನ ದುರಂತಗಳಲ್ಲೊಂದಾಗಿದೆ.

ಮುಂಜಾನೆ 6.20ರ ವೇಳೆಗೆ ಈ ನತ ದೃಷ್ಟ ವಿಮಾನ ಎಲ್ಲಾ ಸುರಕ್ಷಾ ಸಂಕೇತಗಳ ವಿನಿಮಯದೊಂದಿಗೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ವಸ್ತುಶಃ ಇಳಿದಿತ್ತು. ಆದರೆ ರನ್‌ ವೇಯಲ್ಲಿ ನಿಲ್ಲದೆ ಮುಂದಕ್ಕೆ ಚಲಿಸುತ್ತಲೇ ಅಲ್ಲಿನ ಸೂಚನಾ ಗೋಪುರದ ಎರಡು ಕಂಬಗಳಿಗೆ ಢಿಕ್ಕಿಯಾಗಿ, ಕಂಬ ಮುರಿದು ವಿಮಾನ ಅಲ್ಲಿಂದ ಸುಮಾರು 150 ಮೀಟರ್‌ ಅಂತ ರಕ್ಕೆ ಉರುಳಿ ಬಿತ್ತು. ಅಲ್ಲಿ ಅದರ ರೆಕ್ಕೆ ಮುರಿದು ಮತ್ತೆ ಕೆಂಜಾರು ಎಂಬಲ್ಲಿ ಪೂರ್ವ ದಿಕ್ಕಿನಲ್ಲಿ ಮತ್ತೆ ಸುಮಾರು 150 ಮೀ. ಕೆಳಕ್ಕೆ ಧುಮುಕಿತು. ವಿದ್ಯುತ್‌ ಸಂಪ ರ್ಕದ ತಂತಿಗಳನ್ನು ತುಂಡರಿಸುತ್ತಾ ವಿಮಾನ ಪತನವಾಯಿತು. ಮರಗಳ ನಡುವೆ ಭಾರೀ ಸ್ಫೋಟದೊಂದಿಗೆ ಬಿದ್ದ ವಿಮಾನ ಕೆಲವೇ ಕ್ಷಣಗಳಲ್ಲಿ ಬೆಂಕಿಗೆ ಆಹುತಿಯಾಯಿತು. ಭಾರೀ ಪ್ರಮಾಣದಲ್ಲಿ ಕಪ್ಪು ಹೊಗೆ ಆಕಾಶದತ್ತ ಚಿಮ್ಮಿತು.

ಧಾವಿಸಿದ ಸ್ಥಳೀಯರು
ಸ್ಥಳೀಯರು ತತ್‌ಕ್ಷಣದಲ್ಲಿ ಈ ಪ್ರದೇಶಕ್ಕೆ ಬಂದರು. ಆ ವೇಳೆಗೆ ವಿಮಾನ ತುಂಡು ತುಂಡಾಗಿ ಉರಿಯುತ್ತಿತ್ತು. ಸ್ಥಳೀಯರು ವಿಮಾನದಲ್ಲಿದ್ದವರನ್ನು ಹೊರಗೆ ಎಳೆಯಲು ಸುಲಭ ಸಾಧ್ಯವಿರಲಿಲ್ಲ. ಧಗಧಗಿಸುತ್ತಿದ್ದ ಬೆಂಕಿ, ವಿಮಾನದಲ್ಲಿ ಸ್ಫೋಟ, ವಿಮಾನ ಬಿದ್ದಲ್ಲಿಗೆ ಹೋಗಲು ದಾರಿ ಇಲ್ಲದ ಸನ್ನಿ ವೇಶದಿಂದ ತೊಡಕು ಉಂಟಾ ಯಿತು. ಆದರೂ ಕೆಲವರು ಪ್ರಯತ್ನಕ್ಕೆ ಮುಂದಾದರೆ ಹೊತ್ತಿ ಉರಿಯುತ್ತಿದ್ದ ಶರೀರಗಳನ್ನು ಮುಟ್ಟಲು ಸಾಧ್ಯವಾಗುತ್ತಿರಲಿಲ್ಲ. ಬಹುತೇಕ ಶರೀರಗಳು ಸೀಟ್‌ ಬೆಲ್ಟ್ ಧರಿಸಿದ ಸ್ಥಿತಿಯಲ್ಲೇ ಇದ್ದುದರಿಂದ ಅವುಗಳನ್ನು ಎಳೆಯುವುದೂ ಸಾಧ್ಯವಾಗಲಿಲ್ಲ. ಈ ವೇಳೆ ವಿಮಾನ ನಿಲ್ದಾಣದಿಂದ ಮತ್ತು ಪರಿಸರದ ವಿವಿಧ ಉದ್ಯಮ ಸಂಸ್ಥೆಗಳಿಂದ ಅಗ್ನಿ ಶಾಮಕ ದಳಗಳು ಪರಿಸರಕ್ಕೆ ಧಾವಿಸಿ ಬಂದವು. ನಗರದ ವಿವಿಧ ಆಸ್ಪತ್ರೆಗಳಿಂದ ಆ್ಯಂಬುಲೆನ್ಸ್ ಗಳನ್ನು ತರಿಸಲಾಯಿತು. ಪೊಲೀಸರು ಮತ್ತು ವಿವಿಧ ರಕ್ಷಣಾ ವ್ಯವಸ್ಥೆಯವರು ಪರಿಹಾರ ಕ್ರಮ ನಿರತರಾದರು.

ಹೃದಯ ವಿದ್ರಾವಕ
ದೇಹ ಸುಟ್ಟ ವಾಸನೆ ಪರಿಸರ ಪೂರ್ತಿ ತುಂಬಿತ್ತು. ಮಕ್ಕಳ ದೇಹಗಳು ಸುಟ್ಟು ಒಂದಿಷ್ಟು ಮುದ್ದೆ ಎಂಬಂತಾಗಿತ್ತು. ಆಭರಣಗಳು ಸುಟ್ಟು ನೂಲಿನ ಹಾಗೆ ಕಾಣಿಸುತ್ತಿದ್ದವು. ಸರಕು ಸರಂಜಾಮು ಸುಟ್ಟು ಕರಕಲಾಗಿತ್ತು. ರಸ್ತೆಯಿಂದ ಕಾಡಿನಲ್ಲಿ ಪ್ರಪಾತಕ್ಕೆ ಎಂಬ ಹಾಗೆ ಪತನವಾಗಿದ್ದ ವಿಮಾನದ ಅವಶೇಷಗಳಿಂದ ಒಂದೊಂದೇ ಮೃತ ದೇಹವನ್ನು ಹೊರಕ್ಕೆ ತರಲಾಯಿತು. ರಸ್ತೆಯಲ್ಲಿದ್ದ ಆ್ಯಂಬುಲೆನ್ಸ್‌ಗಳಿಗೆ ಈ ಶವಗಳನ್ನು ತರುವುದು ಮತ್ತಷ್ಟು ಪ್ರಯಾಸಕರವಾಗಿತ್ತು.
ಇದೇ ವೇಳೆ ಸುರಿದ ಮಳೆ ಪರಿಹಾರ ಕಾರ್ಯಕ್ಕೆ ತೀವ್ರ ಅಡಚಣೆಯನ್ನು ಉಂಟು ಮಾಡಿತು.

Advertisement

ರಜೆ-ಸ ಮಾರಂಭ
ಮೃತ ಪ ಟ್ಟವರಲ್ಲಿ ದ.ಕ ನ್ನಡ, ಉಡುಪಿ, ಉ.ಕ ನ್ನಡ ಜಿಲ್ಲೆಯವರಿದ್ದಾರೆ. ಕೇರಳದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ರಜಾ ದಿನಗಳನ್ನು ದುಬಾೖಯಲ್ಲಿ ಕಳೆದು ಹುಟ್ಟೂರಿಗೆ ಹಿಂದಿರುಗುತ್ತಿದ್ದ ತಾಯಿ, ಮಕ್ಕಳು ಹೆಚ್ಚಾಗಿದ್ದರು. ಈ ಮಕ್ಕಳಿಗೆ ಇಲ್ಲಿ ಮುಂದಿನ ವಾರ ಶಾಲಾ ರಂಭ. ಇದೇ ವೇಳೆ, ಮದುವೆ ಇತ್ಯಾದಿ ಶುಭ
ಕಾರ್ಯಗಳಿಗೆ ಊರಿಗೆ ಹೊರಟವರಿದ್ದರು. ವಿಮಾನದಲ್ಲಿ ಪ್ರಯಾ ಣಕ್ಕೆ ಟಿಕೆಟ್‌ ಹೊಂದಿದ್ದ 9 ಮಂದಿ ತಮ್ಮ ಪ್ರಯಾಣವನ್ನು ಕೊನೆಯ ಕ್ಷಣದಲ್ಲಿ ರದ್ದು ಪಡಿಸಿದ್ದರು.

ಹೊರಟ ತಾಣ:  ದುಬಾೖ
ಗಮ್ಯ ತಾಣ:  ಬಜ್ಪೆ
ವಿಮಾನದಲ್ಲಿದ್ದವರು:  166
ಮೃತಪಟ್ಟವರು: 158
ಮಕ್ಕಳು: 19
ಶಿಶುಗಳು: 4
ಮಹಿಳೆಯರು :33
ಪುರುಷರು: 102

Advertisement

Udayavani is now on Telegram. Click here to join our channel and stay updated with the latest news.

Next