Advertisement

10 ವರ್ಷದ ವಿದ್ಯಾರ್ಥಿನಿಯ ಅತ್ಯಾಚಾರ; ಪ್ರಾಂಶುಪಾಲನ ಬಂಧನ!

06:39 PM Aug 04, 2023 | Team Udayavani |

ಮಹದೇವಪುರ: ಹತ್ತು ವರ್ಷದ ವಿದ್ಯಾರ್ಥಿನಿ ಮೇಲೆ ಶಾಲಾ ಪ್ರಾಂಶುಪಾಲನೇ ಅತ್ಯಾಚಾರವೆಸಗಿರುವ ಆರೋಪದ ಹಿನ್ನೆಲೆ ವರ್ತೂರು ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಮುಳ್ಳೂರು ಸಮೀಪದ ಪ್ರತಿಷ್ಠಿತ ಖಾಸಗಿ ಶಾಲೆಯ ಸಂಸ್ಥಾಪಕ ಹಾಗೂ ಪ್ರಾಂಶುಪಾಲ ಲ್ಯಾಬರ್ಡ್ ಪುಷ್ಪರಾಜ್ ನನ್ನು(65) ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.

2ನೇ ತರಗತಿ ವ್ಯಾಸಂಗ ಮಾಡುತ್ತಿರುವ 10 ವರ್ಷದ ವಿದ್ಯಾರ್ಥಿನಿ ಎಂದಿನಂತೆ ಗುರುವಾರ ಬೆಳಗ್ಗೆ ಶಾಲೆಗೆ ಹೋದಾಗ ಆರೋಪಿ ಪ್ರಾಂಶುಪಾಲ ಶಾಲೆಯ ಪಕ್ಕದಲ್ಲಿರುವ ಖಾಲಿ ಕೊಠಡಿಗೆ ಕರೆದೊಯ್ದು ಅತ್ಯಚಾರವೆಸಗಿ ನಂತರ ಆಕೆಗೆ ಎದುರಿಸಿ ಕೇಕ್ ತಿನ್ನಿಸಿ ಕಳುಹಿಸಿದ್ದಾನೆ. ಶಾಲೆ ಮುಗಿಸಿಕೊಂಡು 3.30ರ ಸುಮಾರಿಗೆ ವಿದ್ಯಾರ್ಥಿನಿ ಮನೆಗೆ ಹೋದಾಗ ಹೊಟ್ಟೆನೋವು ಕಾಣಿಸಿಕೊಂಡಿದೆ. ತಾಯಿ ವಿಚಾರಿಸಿದಾಗ ಶಾಲೆಯಲ್ಲಿ ನಡೆದ ಘಟನೆಯನ್ನು ಮಗಳು ತಿಳಿಸಿದ್ದಾಳೆ.ತಕ್ಷಣ ಮಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ. ನಂತರ ವಿದ್ಯಾರ್ಥಿನಿ ತಾಯಿ ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next