Advertisement

10km ದೂರದಲ್ಲಿರುವ ಪ್ರವಾಸಿತಾಣಕ್ಕೆ ಕರೆದೊಯ್ಯಲಿಲ್ಲವೆಂದು ನೇಣಿಗೆ ಶರಣಾದ 10 ವರ್ಷದ ಬಾಲಕಿ

02:49 PM May 24, 2024 | Team Udayavani |

ಮಧ್ಯಪ್ರದೇಶ: ಪ್ರವಾಸಿ ತಾಣಕ್ಕೆ ಕರೆದೊಯ್ಯಲು ತಾಯಿ ನಿರಾಕರಿಸಿದರೆಂದು ಹತ್ತು ವರ್ಷದ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಧ್ಯಪ್ರದೇಶದಲ್ಲಿ ಗುರುವಾರ ನಡೆದಿದೆ.

Advertisement

ಧನ್ವಂತ್ರಿ ನಗರ ಠಾಣೆ ಇನ್ಸ್‌ಪೆಕ್ಟರ್ ವಿನೋದ್ ಪಾಠಕ್ ಅವರ ಹೇಳಿಕೆಯಂತೆ ಐದನೇ ತರಗತಿ ವಿದ್ಯಾರ್ಥಿನಿಯಾಗಿರುವ ಬಾಲಕಿ ತನ್ನ ತಾಯಿಯನ್ನು 10 ಕಿಮೀ ದೂರದಲ್ಲಿರುವ ಜಬಲ್‌ಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಭೇದಘಾಟ್‌ಗೆ ಕರೆದುಕೊಂಡು ಹೋಗುವಂತೆ ಪೀಡಿಸುತ್ತಿದ್ದಳು ಆದರೆ ತಾಯಿ ಇದಕ್ಕೆ ನಿರಾಕರಿಸಿದ್ದಾರೆ ಇದರಿಂದ ಮನನೊಂದ ಮಗಳು ಮನೆಯ ಮೊದಲ ಮಹಡಿಯಲ್ಲಿರುವ ಕೊನೆಗೆ ತೆರಳಿ ಬಟ್ಟೆಯನ್ನು ಕುತ್ತಿಗೆಗೆ ಸುತ್ತಿ ನೇಣು ಬಿಗಿದುಕೊಂಡಿದ್ದಾಳೆ ಎನ್ನಲಾಗಿದೆ.

ಘಟನೆ ಸಂಬಂಧ ಧನ್ವಂತ್ರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Head Coach; ಬಿಸಿಸಿಐ ಆಫರ್ ತಿರಸ್ಕರಿಸಿದ್ದೇನೆ ಎಂದ ಪಾಂಟಿಂಗ್; ತಿರುಗೇಟು ನೀಡಿದ ಜಯ್ ಶಾ

Advertisement

Udayavani is now on Telegram. Click here to join our channel and stay updated with the latest news.

Next