Advertisement

ಲಾಕ್‌ಡೌನ್‌ ಸಮಯದಲ್ಲಿ “ರಾಮಾಯಣ’ರಚಿಸಿದ 10 ವರ್ಷದ ಬಾಲಕ !

11:29 PM Feb 28, 2021 | sudhir |

ಭುವನೇಶ್ವರ್‌: ಲಾಕ್‌ಡೌನ್‌ ವೇಳೆ 10ನೇ ವಯಸ್ಸಿನ ಚಿಣ್ಣರೆಲ್ಲ ಆನ್‌ಲೈನ್‌ ಕ್ಲಾಸಿನಲ್ಲಿ ಬ್ಯುಸಿ ಇದ್ದಾಗ ಒಡಿಶಾದ ಅದೇ ವಯಸ್ಸಿನ ಜಾಣನೊಬ್ಬ “ರಾಮಾಯಣ’ವನ್ನೇ ಮರು ರಚಿಸಿದ್ದಾನೆ.

Advertisement

ಈ ಪೌರಾಣಿಕ ಮಹಾಕಾವ್ಯವನ್ನು ಒಡಿಶ್ಶಿ ಭಾಷೆಯಲ್ಲಿ ಬರೆದಿರುವ ಆಯುಷ್‌ ಕುಮಾರ್‌ ಖುಂಟಿಯಾ ತನ್ನ ಕೃತಿಗೆ “ಪಿಲಾಕಾ ರಾಮಾಯಣ’ (ಮಕ್ಕಳ ರಾಮಾಯಣ) ಎಂಬ ಶೀರ್ಷಿಕೆ ನೀಡಿದ್ದಾನೆ.

“ಲಾಕ್‌ಡೌನ್‌ ನ ಮಾರ್ಚ್‌ ತಿಂಗಳಿನಲ್ಲಿ ಚಿಕ್ಕಪ್ಪನೊಂದಿಗೆ ಕುಳಿತು ಡಿಡಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣವನ್ನು ನಿತ್ಯ ನೋಡುತ್ತಿದ್ದೆ. ಬಳಿಕ ನೋಟ್‌ಬುಕ್‌ನಲ್ಲಿ ನನ್ನದೇ ಶೈಲಿಯಲ್ಲಿ ಕಥೆ ಮರುಕಟ್ಟುತ್ತಿದ್ದೆ. ಎರಡೇ ತಿಂಗಳಲ್ಲಿ ಈ ಕೃತಿ ಮುಗಿದಿದೆ’ ಅಂತಾನೆ, ಆಯುಷ್‌. ಅಂದಹಾಗೆ, ಈ ಕೃತಿಯ ಒಟ್ಟು ಪುಟಗಳು 104!

Advertisement

Udayavani is now on Telegram. Click here to join our channel and stay updated with the latest news.

Next