Advertisement

10 ವರ್ಷದ ಬಾಲಕಿ ಭೇಟಿ ಆಸೆ ಈಡೇರಿಸಿದ ಮೋದಿ

09:13 PM Aug 12, 2021 | Team Udayavani |

ನವದೆಹಲಿ: ತಮ್ಮ ಭೇಟಿಗೆ ಅವಕಾಶ ಕೋರಿ ಇ-ಮೇಲ್‌ ಕಳುಹಿಸಿದ್ದ ಮಹಾರಾಷ್ಟ್ರದ 10 ವರ್ಷದ ಬಾಲಕಿಯನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೇಟಿ ಮಾಡಿದ್ದು, ಇಂದು ಅಂತರ್ಜಾಲದಲ್ಲಿ ವೈರಲ್‌ ಆಗಿದೆ.

Advertisement

ಮಹಾರಾಷ್ಟ್ರದ ಶಿರಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾದ ರಾಧಾಕೃಷ್ಣ ವಿಖೆ ಪಾಟೀಲ್‌ ಅವರ ಮೊಮ್ಮಗಳಾದ ಅನಿಷಾ, ಇತ್ತೀಚೆಗೆ ಪ್ರಧಾನಿಯವರಿಗೆ ಇ-ಮೇಲ್‌ ಕಳುಹಿಸಿ, ತಮ್ಮನ್ನು ಭೇಟಿ ಮಾಡಲು ಅವಕಾಶ ಕೋರಿದ್ದಳು.

ಇದನ್ನೂ ಓದಿ:ವಿಶ್ವ ರ್‍ಯಾಂಕಿಂಗ್‌ನಲ್ಲಿ ಚೋಪ್ರಾ ನಂ.2

ಇದಕ್ಕೆ ಪ್ರಧಾನಿ, “ಕೂಡಲೇ ಓಡಿ ಬಾ ಮಗಳೇ” ಎಂದು ಪ್ರತಿಕ್ರಿಯಿಸಿದ್ದರು. “ಶುಕ್ರವಾರ ಇಬ್ಬರೂ 10 ನಿಮಿಷಗಳ ಕಾಲ ಭೇಟಿ ಮಾಡಿ ಶಿಕ್ಷಣ, ಕ್ರೀಡೆ ಹಾಗೂ ಇನ್ನಿತರ ವೈಯಕ್ತಿಕ ಆಸಕ್ತಿಯ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು’ ಎಂದು ರಾಧಾಕೃಷ್ಣ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next