Advertisement

ಗಣರಾಜ್ಯೋತ್ಸವಕ್ಕೆ 10 ಮುಖ್ಯ ಅತಿಥಿಗಳು!

06:00 AM Jan 01, 2018 | Team Udayavani |

ನವದೆಹಲಿ: ಈ ವರ್ಷದ ಗಣರಾಜ್ಯೋತ್ಸವ ಐತಿಹಾಸಿಕ ಕ್ಷಣವಾಗಿರಲಿದೆ. ಸಾಮಾನ್ಯವಾಗಿ ವಿದೇಶದ ಗಣ್ಯರನ್ನು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯನ್ನಾಗಿ ಕರೆಸುವ ಸಂಪ್ರದಾಯವಿದ್ದು, ಇದೇ ಮೊದಲ ಬಾರಿಗೆ 10 ದೇಶಗಳ ಮುಖಂಡರನ್ನು ಆಹ್ವಾನಿಸಲಾಗಿದೆ. ಆಸಿಯಾನ್‌ ದೇಶಗಳ ಮುಖಂಡರು ಗಣರಾಜ್ಯೋತ್ಸವ ಕಾರ್ಯಕ್ರಮದ ಅತಿಥಿಯಾಗಿರಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಘೋಷಿಸಿದ್ದಾರೆ.

Advertisement

ಬ್ರುನೈ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್‌, ಮಲೇಷ್ಯಾ, ಮ್ಯಾನ್ಮಾರ್‌, ಫಿಲಿಪ್ಪೀನ್ಸ್‌, ಸಿಂಗಾಪುರ, ಥಾಯ್ಲೆಂಡ್‌ ಮತ್ತು ವಿಯೆಟ್ನಾಂನ ಗಣ್ಯರು ಮುಖ್ಯ ಅತಿಥಿಗಳಾಗಿ ಹಾಜರಾಗಲಿದ್ದಾರೆ. ಆಸಿಯಾನ್‌ ಶೃಂಗ ರೂಪುಗೊಂಡು 50 ವರ್ಷ ಪೂರೈಸಿದ್ದರೆ, ಭಾರತ ಈ ಸಮೂಹಕ್ಕೆ ಸೇರ್ಪಡೆಗೊಂಡು 25 ವರ್ಷಗಳಾಗಿವೆ.

ಅಲ್ಲದೆ, ಇದು ರಾಜತಾಂತ್ರಿಕವಾಗಿ ಅತ್ಯಂತ ಮಹತ್ವದ್ದಾಗಿರಲಿದೆ. ಈ ದೇಶಗಳಲ್ಲಿ ಚೀನಾ ಪ್ರಭಾವವನ್ನು ತಗ್ಗಿಸಲು ಭಾರತ ಈ ರಾಜತಾಂತ್ರಿಕ ನಡೆ ಇಟ್ಟಿದೆ. ಇದರಿಂದಾಗಿ ಭಾರತವು ಈ ದೇಶಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next