ಶಹಾಬಾದ: ಹತ್ತು ರೂ. ನಾಣ್ಯದ ಚಲಾವಣೆ ಕುರಿತು ಜಾಗೃತಿ ಮೂಡಿಸುವಂತೆ ಒತ್ತಾಯಿಸಿ ಜೆಡಿಎಸ್ ಮುಖಂಡರು ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹತ್ತು ರೂ. ನಕಲಿ ನಾಣ್ಯಗಳು ಚಲಾವಣೆಗೆ ಬಂದಿವೆ ಎಂಬುದು ಸುಳ್ಳು ಸುದ್ದಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಭಯ ನೀಡಿದ್ದರೂ ವ್ಯಾಪಾರಿಗಳು ಹಾಗೂ ಜನಸಾಮಾನ್ಯರು ನಾಣ್ಯ ನಿರಾಕರಿಸುತ್ತಿದ್ದಾರೆ.
ಇದರಿಂದ ಸಾರ್ವಜನಿಕರಲ್ಲಿ ಹಾಗೂ ವ್ಯಾಪಾರಿಗಳಲ್ಲಿ ಸಾಕಷ್ಟುಗೊಂದಲವಾಗಿದೆ. ಸುಳ್ಳು ವದಂತಿಯಿಂದ ಯಾರು 10 ರೂ. ನಾಣ್ಯ ತೆಗೆದುಕೊಳ್ಳತ್ತಿಲ್ಲ. ಹಲವು ಕಡೆ ಸಮಸ್ಯೆಯಾಗಿದೆ ಎಂದು ಜೆಡಿಎಸ್ ನಗರ ಅಧ್ಯಕ್ಷ ರಾಜ್ ಮಹ್ಮದ್ ರಾಜಾ, ಪ್ರಧಾನ ಕಾರ್ಯದರ್ಶಿ ಲೋಹಿತ ಕಟ್ಟಿ ತಿಳಿಸಿದರು.
ಅಲ್ಲದೇ ನಗರದ ಸಿಂಡಿಕೇಟ್, ಎಸ್‌ಬಿಎಚ್, ಕೆನರಾ ಬ್ಯಾಂಕ್ ಅಧಿಕಾರಿಗಳು ಸಹ 10 ರೂ. ನಾಣ್ಯ ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ನಗರದ ಬುಹುತೇಕ ಅಂಗಡಿ, ಸಣ್ಣ ಪುಟ್ಟ ವ್ಯವಹಾರದವರು ನಾಣ್ಯ ತೆಗೆದುಕೊಳ್ಳುತ್ತಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿ ಕಾರಿಗಳು ಕ್ರಮ ಕೈಗೊಂಡು 10 ಚಲಾವಣೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಬಸವರಾಜ ಮಯೂರ, ಅಬ್ದುಲ್ ಜಬ್ಟಾರ್, ಸುಭಾಸ ಸಾಕ್ರೆ, ಶೇಖ್ ಮಹೇಬೂಬ್, ರಮೇಶ ಮಿರಜಕರ್, ಇಸೂಫ್ ಸಾಹೇಬ್, ಸಿಖಂದರ್ ಸೇಠ, ಸಂತೋಷ ಸೂರ್ಯವಂಶಿ, ಅಬ್ದುಲ್ ಕರೀಮ ಹಾಗೂ ಪದಾಧಿಕಾರಿಗಳು ಇದ್ದರು.