Advertisement
ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರದ ಎಸ್‌ಸಿ, ಎಸ್‌ಟಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಅನುದಾನದಲ್ಲಿ ಕೆಲ ಭಾಗ ಶಾಲಾ ಕಟ್ಟಡ ದುರಸ್ತಿ ಸೇರಿದಂತೆ ಮೂಲಭೂತ ಸೌಲಭ್ಯಕ್ಕೆ ಅವಕಾಶ ಕಲ್ಪಿಸಿದಲ್ಲಿ ಶಾಲೆಗಳು ಅಭಿವೃದ್ಧಿ ಸಾಧ್ಯವಾಗಲಿದೆ. ಇದನ್ನು ಮನಗೊಂಡು ತಾವು ಮಾಡಿರುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳು ಒಪ್ಪಿದ್ದು, ಮುಂಬರುವ ಬಜೆಟ್‌ನಲ್ಲಿ ಅನುಮೋದನೆ ದೊರೆಯಲಿದೆ ಎಂದು ತಿಳಿಸಿದರು.
ಈಗಾಗಲೆ ಸುತ್ತೋಲೆ ಹೊರಡಿಸಲಾಗಿದೆ. ಅಲ್ಲದೆ ಬೋಧನಾ ವಿಧಾನ, ಪಠ್ಯಪುಸ್ತಕ ಬದಲಾವಣೆಯನ್ನೂ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. 10 ಸಾವಿರ ಶಿಕ್ಷಕರ ನೇಮಕ: ಪ್ರಾಥಮಿಕ ಶಿಕ್ಷಣ ವಿಭಾಗದಲ್ಲಿ 14,729 ಶಿಕ್ಷಕರ ಕೊರತೆ ಇದ್ದು, ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ನಿವೃತ್ತಿಯಾಗಲಿರುವ ಶಿಕ್ಷರನ್ನು ಸಹ ಗಮನದಲ್ಲಿ ಇಟ್ಟುಕೊಂಡು ಈ ಸಾಲಿನಲ್ಲಿ 10 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತದೆ. ಪ್ರೌಢಶಾಲಾ ವಿಭಾಗದಲ್ಲಿ 3 ಸಾವಿರ ಶಿಕ್ಷಕರ ಕೊರತೆ ಇದ್ದು, 1689 ಶಿಕ್ಷಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಯಲ್ಲಿದೆ. ಇನ್ನು ಪಿಯು ವಿಭಾಗದಲ್ಲಿ ಕೆಲ ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದೆ. ಶೀಘ್ರವೇ 1900 ಉಪನ್ಯಾಸಕರ ನೇಮಕವಾಗಲಿದೆ, ಮುಂದಿನ ಮೂರು ವರ್ಷಗಳಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರ ಕೊರತೆ ನೀಗಲಿದೆ ಎಂದರು.
Related Articles
Advertisement
ಭರವಸೆ: ಹುಣಸೂರು ತಾಲೂಕಿನ ರತ್ನಪುರಿ ಸರಕಾರಿ ಪಿಯು ಕಾಲೇಜಿನ ಇಬ್ಬರು ವಿಜಾnನ ವಿಭಾಗದ ಉಪನ್ಯಾಸಕರನ್ನು ಜೆ.ಡಿ.ಎಸ್.ನ ವಿಧಾನಪರಿಷತ್ ಸದಸ್ಯರ ಶಿಪಾರಸ್ಸಿನ ಮೇರೆಗೆ ಬೇರೆಡೆಗೆ ನಿಯೋಜಿಸಿರು ಬಗ್ಗೆ “ಉದಯವಾಣಿ’ಯಲ್ಲಿ ಬಂದಿರುವ ವರದಿಯ ಬಗ್ಗೆ ಮಾತನಾಡಿದ ಸಚಿವರು, ನಿಯೋಜನೆ ಮಾಡಿರುವ ಪಿಯು ಡಿಡಿ ಅವರನ್ನು ವಿಚಾರಣೆಗೆ ಒಳಪಡಿಸಿ ಅಗತ್ಯಕ್ರಮ ಕೈಗೊಳ್ಳುವುದಾಗಿ ಸಚಿವ ತನ್ವೀರ್‌ಸೇಠ್ ತಿಳಿಸಿದರು. ಹುಣಸೂರು ತಾಲೂಕಿನ ಚಿಲ್ಕುಂದ, ಹಿರಿಕ್ಯಾತನಹಳ್ಳಿ ಹಾಗೂ ಗುರುಪುರಕ್ಕೆ ಪಿಯು ಕಾಲೇಜು ಮಂಜೂರು ಮಾಡುವಂತೆ ಸಚಿವರನ್ನು ಕೋರಲಾಗಿದೆ ಎಂದು ಶಾಸಕ ಮಂಜುನಾಥ್ ತಿಳಿಸಿದರು. ಮಾಜಿ ಜಿಪಂ ಸದಸ್ಯ ಸಿ.ಟಿ.ರಾಜಣ್ಣ ಇದ್ದರು. ಈ ಹಿಂದೆ ಎಸ್ಸೆಸ್ಸೆಲ್ಸಿ ವರೆಗೆ ನೀಡುತ್ತಿದ್ದ ಗ್ರೇಸ್‌ಮಾರ್ಕ್ಸ್ಗೆ ಈ ಬಾರಿ ಬಹುತೇಕ ಕಡಿವಾಣ ಬೀಳಲಿದೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ.
-ತನ್ವೀರ್‌ಸೇಠ್, ಶಿಕ್ಷಣ ಸಚಿವ