Advertisement
ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಗೆದ್ದಿತ್ತು. ರಾಜಸ್ಥಾನ ಝುನ್‌ರನ್‌ನಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಸಿಎಂ ಅಶೋಕ್ ಗೆಹ್ಲೋಟ್ ಉಜ್ವಲ ಯೋಜನೆಯ ಅನ್ವಯ ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಸಿಲಿಂಡರ್ ಪಡೆದುಕೊಳ್ಳಲು ಅರ್ಹರಾಗಿ ದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ 500 ರೂ.ಗೆ ಸಿಲಿಂಡರ್ ನೀಡುತ್ತೇವೆ ಎಂದು ಗೆಹ್ಲೋಟ್ ವಾಗ್ಧಾನ ಮಾಡಿದ್ದಾರೆ. ಮಹಿಳೆಯೇ ಮುಖ್ಯಸ್ಥೆ ಯಾಗಿರುವ ಕುಟುಂಬಕ್ಕೆ ಮೂರು ಕಂತು ಗಳಲ್ಲಿ ಪ್ರತೀ ವರ್ಷ 10 ಸಾವಿರ ರೂ.ಗಳನ್ನು ಖಾತೆಗೆ ನೀಡಲಾಗುತ್ತದೆ ಎಂದರು.
Related Articles
Advertisement
ಗೆದ್ದರೆ ಮತ್ತೆ ನಾನೇಕೆ ಸಿಎಂ ಆಗಬಾರದು?“ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡರೆ ನಾನೇಕೆ ರಾಜಸ್ಥಾನದ ಸಿಎಂ ಹುದ್ದೆಯಲ್ಲಿ ಮುಂದುವರಿಯಬಾರದು?’ ಹೀಗೆಂದು ಅಶೋಕ್ ಗೆಹ್ಲೋಟ್ ಪ್ರಶ್ನಿಸಿದ್ದಾರೆ. ಈ ಮೂಲಕ ಸಚಿನ್ ಪೈಲಟ್‌ಗೆ ಅಧಿಕಾರ ಹಸ್ತಾಂತರ ಮಾಡುವುದು ಅಸಂಭವ ಎಂಬ ಸುಳಿವನ್ನೂ ನೀಡಿದ್ದಾರೆ. “ನ್ಯೂಸ್18” ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಮಾಜಿ ಡಿಸಿಎಂ ಸಚಿನ್ ಪೈಲಟ್ ಬಗ್ಗೆ ತಮಗೆ ಮಮತೆ ಇದೆ. ನಾವಿಬ್ಬರೂ ಮರೆತು ಮತ್ತು ಕ್ಷಮಿಸಿ ಬಿಡು ಎಂಬ ಧೋರಣೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಬಿಜೆಪಿ ರಾಜಸ್ಥಾನದಲ್ಲಿ ಕೇವಲ ಧರ್ಮವನ್ನು ಮುಂದಿಟ್ಟು ಕೊಂಡು ರಾಜಕೀಯ ನಡೆಸುತ್ತಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ದೂರಿದ್ದಾರೆ. ಬಿಜೆಪಿಯ ಹಿಂದುತ್ವ ಭಾವನೆಯನ್ನು ಕೆರಳಿಸಿ ಮತ ಕೇಳುವ ಜಾಯಮಾನವನ್ನು ಈ ಬಾರಿ ಮತದಾರರು ತಿರಸ್ಕರಿಸಲಿದ್ದಾರೆ. ಹಿಂದೂ ಸಮುದಾಯದವರನ್ನೂ ಸೇರಿಸಿಕೊಂಡು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಮ್ಮ ಸರಕಾರ ಜಾರಿ ಮಾಡಿದೆ. ಅದನ್ನು ಗೌರವಿಸಿ ಮತದಾರರು ಮತ್ತೂಮ್ಮೆ ಕಾಂಗ್ರೆಸ್ ನೇತೃತ್ವದ ಸರಕಾರಕ್ಕೆ ಅಧಿಕಾರ ನೀಡಿದರೆ, ಸಿಎಂ ಹುದ್ದೆಯಲ್ಲಿ ನಾನೇ ಮುಂದುವರಿಯುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.