Advertisement

ಸಿಐಎಸ್‌ಎಫ್ ನಲ್ಲಿ ಶೇ.10ರಷ್ಟು ಮೀಸಲು

08:46 PM Mar 17, 2023 | Team Udayavani |

ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್)ಯ ಉದ್ಯೋಗಗಳಲ್ಲಿ ನಿವೃತ್ತ ಅಗ್ನಿವೀರರಿಗೆ ಶೇ.10ರಷ್ಟು ಮೀಸಲು ಕಲ್ಪಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಣೆ ಹೊರಡಿಸಿದೆ.

Advertisement

ಇದೇ ರೀತಿ ಕಳೆದ ವಾರ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯ ಉದ್ಯೋಗಗಳಲ್ಲಿ ನಿವೃತ್ತ ಅಗ್ನವೀರರಿಗೆ ಶೇ.10ರಷ್ಟು ಮೀಸಲಿಡುವ ಬಗ್ಗೆ ಸಚಿವಾಲಯ ಘೋಷಿಸಿತ್ತು.

1968ರ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಕಾಯ್ದೆಗೆ ತಿದ್ದುಪಡಿ ತಂದ ನಂತರ ಈ ಕುರಿತು ಅಧಿಸೂಚನೆ ಹೊರಡಿಸಲಿರುವ ಸಚಿವಾಲಯ, ಸಿಐಎಸ್‌ಎಫ್ ಉದ್ಯೋಗಗಳಲ್ಲಿ ಮೊದಲ ಬ್ಯಾಚ್‌ನ ಅಗ್ನಿವೀರರ ಗರಿಷ್ಠ ವಯೋಮಿತಿ 5 ವರ್ಷ ಸಡಿಲಿಕೆ ಹಾಗೂ ಇತರೆ ಬ್ಯಾಚ್‌ಗಳ ಅಗ್ನಿವೀರರಿಗೆ ಗರಿಷ್ಠ ವಯೋಮಿತಿ 3 ವರ್ಷ ಸಡಿಲಿಕೆ ಮಾಡಿ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next