Advertisement

70 ಮಂದಿ ಸಾವಿಗೆ ಕಾರಣವಾದ 10 ಮಂದಿಗೆ ಮರಣದಂಡನೆ

12:12 PM Feb 22, 2017 | Team Udayavani |

ಕೈರೋ: 2012 ಫೆಬ್ರವರಿಯಲ್ಲಿ ಈಜಿಪ್ಟ್ ನಲ್ಲಿ ನಡೆದ ಫ‌ುಟ್‌ಬಾಲ್‌ ದುರಂತಕ್ಕೆ ಸಂಬಂಧಪಟ್ಟಂತೆ ಈಜಿಪ್ಟ್ ಸರ್ವೋಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ಪ್ರಕಟಿಸಿದೆ. 

Advertisement

ಘಟನೆಗೆ ಕಾರಣರಾದ 10 ಮಂದಿಗೆ ಕೆಳ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದಿರುವ ಸರ್ವೋಚ್ಚ ನ್ಯಾಯಪೀಠ ತೀರ್ಪಿನಲ್ಲಿ ಯಾವ ತಪ್ಪೂ ಇಲ್ಲ ಎಂದಿದೆ. ಇದೇ ತೀರ್ಪಿನಲ್ಲಿ 10 ಮಂದಿಗೆ 15, 14 ಮಂದಿಗೆ 10, 15 ಮಂದಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

2012ರಲ್ಲಿ ಕೈರೋದ ಪೋರ್ಟ್‌ ಸಯ್ಯದ್‌ ಮೈದಾನದಲ್ಲಿ ಅಲ್‌ ಮಸ್ರಿ ಮತ್ತು ಅಲ್‌ ಅಹ್ಲಿ ತಂಡಗಳ ನಡುವೆ ಪಂದ್ಯ ನಡೆದಿತ್ತು. ಈ ವೇಳೆ ಮೈದಾನಕ್ಕೆ ನುಗ್ಗಿದ ಅಲ್‌ ಮಸ್ರಿ ತಂಡದ ಬೆಂಬಲಿಗರು ವ್ಯಾಪಕ ದಾಂಧಲೆ ನಡೆಸಿದರು. 

ಇದು ಮೈದಾನದಲ್ಲಿ ತುಂಬಿಕೊಂಡಿದ್ದ ಪ್ರೇಕ್ಷಕರಲ್ಲಿ ಭೀತಿ ಹುಟ್ಟಿಸಿ ನೂಕುನುಗ್ಗಲು ಉಂಟಾಯಿತು. ಕಾಲು¤ಳಿತಕ್ಕೆ ಸಿಲುಕಿ ಕೆಲವರು ಮೃತಪಟ್ಟರು. ಕೆಲವರನ್ನು ಮೈದಾನದಿಂದ ಹೊರಗೆ ಎತ್ತಿ ಎಸೆಯಲಾಯಿತು. ಇದರ ಪರಿಣಾಮ 70 ಮಂದಿ ಮೃತಪಟ್ಟಿದ್ದರು. ಈಜಿಪ್ಟ್ನಲ್ಲಿ ಈ ರೀತಿಯ ಘಟನೆಗಳು ಮಾಮೂಲು.

Advertisement

Udayavani is now on Telegram. Click here to join our channel and stay updated with the latest news.

Next