Advertisement
ಇನ್ನುಳಿದಂತೆ ವಿಜಯಪುರ ಜಿಲ್ಲಾ ಪ್ರವಾಸದಿಂದಾಗಿ 16 ವರ್ಷದ ಬಾಲಕ(ಪಿ.10146) ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಆಗಮಿಸಿದ 9 ವರ್ಷದ ಬಾಲಕಿ (ಪಿ-10153)ಗೆ ಸೋಂಕು ಇರುವುದು ದೃಢವಾಗಿದೆ. ಸೋಂಕಿತರನ್ನು ಚಿಕಿತ್ಸೆಗಾಗಿ ನಿಗದಿತ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರೊಂದಿಗೆ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿರುವವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ. ಸೋಂಕಿನ ಶಂಕೆ ಕಂಡು ಬಂದವರ ಗಂಟಲು ದ್ರವ ಸಂಗ್ರಹಿಸಿ, ಪರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದರು.
ದೃಢಪಟ್ಟಿದೆ. ಇನ್ನುಳಿದಂತೆ 3 ವರ್ಷದ ಮಗು ಸೋಂಕಿತನ ಪುತ್ರಿ. ಹೀಗಾಗಿ ಸಂಬಂ ಧಿಕರು ಹಾಗೂ ಸಹ ಸಿಬ್ಬಂದಿಗಳಲ್ಲಿ ಕೊರೊನಾ ಆತಂಕ ಹೆಚ್ಚಿದೆ. 413 ಜನರ ವರದಿ ಬಾಕಿ: ಕೊರೊನಾ ಸೋಂಕಿನ ಪರೀಕ್ಷೆಗಾಗಿ 9330 ಜನರ ಗಂಟಲಿನ ಮಾದರಿ ಸಂಗ್ರಹಿಸಿದ್ದು, 104 (ಇಂದಿನ 10 ಸೇರಿ) ಪ್ರಕರಣಗಳು ದೃಢ ಪಟ್ಟಿವೆ. 8813 ವರದಿಗಳು ನಕಾರಾತ್ಮಕವಾಗಿವೆ. 55 ಪ್ರಕರಣಗಳು ಸಕ್ರಿಯವಾಗಿದ್ದು, 413 ಜನರ ವರದಿ ಬರಬೇಕಿದೆ. ಈವರೆಗೆ 8759 ಜನರು ನಿಗಾದಲ್ಲಿದ್ದು, 80 ಜನರು ವೈದ್ಯಕೀಯ ಸೌಲಭ್ಯಗಳೊಂದಿಗೆ ಆಸ್ಪತ್ರೆಯಲ್ಲಿ ನಿಗಾದಲ್ಲಿರಿಸಲಾಗಿದೆ. ಜೊತೆಗೆ ಜೂ. 25ರ ವರೆಗೆ ಮಹಾರಾಷ್ಟ್ರದಿಂದ ಗದಗ ರೈಲು ನಿಲ್ದಾಣಕ್ಕೆ 1048 ಪ್ರಯಾಣಿಕರು ಆಗಮಿಸಿದ್ದಾರೆ. 385 ಜನ ಗದಗ ಜಿಲ್ಲೆಗೆ ಸಂಬಂಧಿಸಿದ್ದಾರೆ. ಅವರರಲ್ಲಿ 334 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಹಾಗೂ 51 ಜನರನ್ನು ಗೃಹ ದಿಗ್ಬಂಧನದಲ್ಲಿ ಇರಿಸಲಾಗಿದೆ. 334 ಜನರ ಪೈಕಿ 15 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿರುತ್ತದೆ. 663 ಜನರು ಬೇರೆ
ಜಿಲ್ಲೆಯವರಾಗಿದ್ದು, ಸಂಬಂಧಪಟ್ಟ ಜಿಲ್ಲೆಗಳಿಗೆ ಕಳುಹಿಸಲಾಗಿದೆ.
Related Articles
ಗದಗ: ಕೋವಿಡ್-19 ನಿಯಂತ್ರಣಕ್ಕಾಗಿ ಲಾಕ್‌ಡೌನ್ ಜಾರಿಗೊಳಿಸುವಲ್ಲಿ ಜಿಲ್ಲೆಯ ಪೊಲೀಸ್ ಪಡೆ ಶ್ರಮಿಸಿರುವುದು ಶ್ಲಾಘನೀಯ. ತಮ್ಮ ಕರ್ತವ್ಯದೊಂದಿಗೆ ವೈಯಕ್ತಿಕ ಸುರಕ್ಷತೆಗೆ ಒತ್ತು ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಯತೀಶ್ ಎನ್. ಸಲಹೆ ನೀಡಿದ್ದಾರೆ. ಲಾಕ್‌ಡೌನ್ ಜಾರಿ ಸಂದರ್ಭದಲ್ಲಿ ಜಿಲ್ಲಾ ಗಡಿಯ ಚೆಕ್ ಪೋಸ್ಟ್‌ಗಳಲ್ಲಿ ವೈಯಕ್ತಿಕ ಶುಚಿತ್ವ, ಸುರಕ್ಷತೆ ಜೊತೆಗೆ ಸಾರ್ವಜನಿಕರನ್ನು ಕೋವಿಡ್-19 ಸೋಂಕಿನಿಂದ ರಕ್ಷಿಸುವಲ್ಲಿ ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಯೋಧರಂತೆ ಕಾರ್ಯನಿರ್ವಹಿಸಿದ್ದಾರೆ. ಕೋವಿಡ್-19 ಸೋಂಕು ನಿಯಂತ್ರಣದ ಮುಂದುವರಿದ ಕಾರ್ಯಾಚರಣೆಯಲ್ಲಿ ಈಗ ಲಾಕ್‌ಡೌನ್ ತೆರವಿನ ಸ್ಥಿತಿಯಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ವೈಯಕ್ತಿಕ ಸುರಕ್ಷತೆಯಿಂದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕಿದೆ. ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಕೊವಿಡ್-19 ಸೋಂಕು ತಡೆಗೆ ಇಲಾಖೆಯಿಂದ ಪೂರೈಸಲಾದ ಸುರಕ್ಷತಾ ಸಾಮಗ್ರಿಗಳಾದ ಮುಖಕ್ಕೆ ಮಾಸ್ಕ್, ಹ್ಯಾಂಡ್ ಗ್ಲೌಸ್, ಹೆಡ್‌ಶೀಲ್ಡ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಜೊತೆಗೆ ತಮ್ಮ ಕುಟುಂಬಗಳ ಸುರಕ್ಷತೆ ಕುರಿತು ಎಚ್ಚರವಹಿಸಬೇಕು ಎಂದು ಸಲಹೆ ನೀಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement