Advertisement

ಕಸ ಸಂಗ್ರಹಕ್ಕೆ ನಗರಸಭೆಗೆ 10 ಹೊಸ ವಾಹನ

10:38 PM Jul 09, 2019 | mahesh |

ಪುತ್ತೂರು: ಪುತ್ತೂರನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ‘ಸ್ವಚ್ಛ ಪುತ್ತೂರು’ ಕಲ್ಪನೆಯಲ್ಲಿ ಮುಂದಡಿಯಿಟ್ಟಿರುವ ಪುತ್ತೂರು ನಗರಸಭೆಗೆ 4.49 ಕೋಟಿ ರೂ.ಗಳಲ್ಲಿ ನೈರ್ಮಲ್ಯ ಘಟಕ ಸೇರಿದಂತೆ ಮನೆ ಮನೆ ಕಸ ಸಂಗ್ರಹಕ್ಕೆ 10 ನೂತನ ವಾಹನ ಗಳು ಮಂಜೂರಾಗಿದ್ದು, ಸೆಪ್ಟಂಬರ್‌ ಅಂತ್ಯದೊಳಗೆ ಈ ವಾಹನಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲಿವೆ.

Advertisement

ಸ್ವಚ್ಛ ಭಾರತ್‌ ಯೋಜನೆಯಡಿ ಪುತ್ತೂರು ನಗರಸಭೆಗೆ ಡಿಪಿಆರ್‌ ಮಂಜೂರಾತಿ ಲಭಿಸಿದ್ದು, ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಒಗ್ಗೂಡುವಿಕೆ ಅನುದಾನ ಮಂಜೂರಾಗಿದೆ. ದ.ಕ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಂಜೂರಾತಿ ಲಭಿಸಿದೆ.

ಶೇಕಡಾವಾರು ಅನುದಾನ
ಪ್ರಸ್ತುತ ಸ್ವಚ್ಛ ಭಾರತ್‌ ಯೋಜನೆಯಡಿ ಮಂಜೂರಾಗಿರುವ ಅನುದಾನವು ಮೂರು ಮೂಲಗಳಿಂದ ಶೇಕಡಾವಾರು ಅನುದಾನದಲ್ಲಿ ಲಭ್ಯವಾಗಿದೆ. ಕೇಂದ್ರ ಸರಕಾರದಿಂದ ಶೇ. 35 ಅಂದರೆ 1.57 ಕೋಟಿ ರೂ., ರಾಜ್ಯ ಸರಕಾರದ ಶೇ. 23.30 ಅಂದರೆ 1.04 ಕೋಟಿ ರೂ. ಹಾಗೂ ಸ್ಥಳೀಯ ಸಂಸ್ಥೆಯ (ಯುಎಲ್ಡಿ) ಶೇ. 41.70 ಅಂದರೆ 1.87 ಕೋಟಿ ರೂ. ಹೀಗೆ ಒಟ್ಟು 4.49.38 ಕೋಟಿ ರೂ. ಅನುದಾನ ಮಂಜೂರಾಗಿದೆ.

ಸ್ಥಳೀಯ ಸಂಸ್ಥೆಯ ಎಸ್‌ಎಫ್‌ಸಿಹಾಗೂ 14ನೇ ಹಣಕಾಸು ಯೋಜನೆಯ ಮೂಲಕ ಅನುದಾನ ಮೀಸಲಿರಿಸಲಾಗಿದೆ. ಈ ಒಟ್ಟು ಅನುದಾನದಲ್ಲಿ ಕಸ ವಿಲೇವಾರಿ ವಾಹನಗಳು ಸಹಿತ 1.02.55 ಕೋ.ರೂ.ನಲ್ಲಿ ನೈರ್ಮಲ್ಯ ಘಟಕ (ಸ್ಯಾನಿಟರಿ ಲ್ಯಾಂಡ್‌ ಫಿಲ್ ಸೈಟ್) ಹಾಗೂ 3.50 ಲಕ್ಷ ರೂ.ಗಳನ್ನು ವಿಡ್ರೊ ಫ್ಲಾ ್ಯಟ್ಫಾರ್ಮ್ಗೆ ಮೀಸಲಿರಿಸಲಾಗಿದೆ.

ಸಿಬಂದಿ ಕೊರತೆ
ನಿಯಮದ ಪ್ರಕಾರ 700 ಮಂದಿಗೆ ಒಬ್ಬ ಪೌರಕಾರ್ಮಿಕ ಬೇಕಿದ್ದು, ಪುತ್ತೂರು ನಗರಸಭೆಯಲ್ಲಿ ಒಟ್ಟು 100 ಮಂದಿ ಕಾರ್ಯಾ ಚರಿಸಬೇಕು. ಆದರೆ 41 ಮಂದಿ ಗುತ್ತಿಗೆ ಆಧಾರದಲ್ಲಿ ಕಾರ್ಯಾಚರಿಸುತ್ತಿದ್ದಾರೆ. ನಗರಸಭೆಯಲ್ಲಿ 15 ಖಾಯಂ ಕಾರ್ಮಿಕರಿದ್ದು, ಅವರಲ್ಲಿ ಮೂವರು ನೀರು ಬಿಡುವ ಕಾರ್ಯ ಹಾಗೂ ಇನ್ನೂ ಮೂವರು ನಗರಸಭೆ ಕಚೇರಿ ಯಲ್ಲಿ ಅಟೆಂಡರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

ಪುತ್ತೂರು ನಗರಸಭೆಯಲ್ಲಿ ಹಾಲಿ ಒಟ್ಟು 7 ವಾಹನಗಳು ಮನೆ ಮನೆ ಕಸ ಸಂಗ್ರಹದ ಕಾರ್ಯ ನಡೆಸುತ್ತಿವೆ. ಪುತ್ತೂರು ನಗರಸಭೆಯ ಮೂರು ಟಾಟಾ ಏಸ್‌ ಆಟೋಲಿಫ್ಟ್‌ ವಾಹನಗಳು ಹಾಗೂ ನಾಲ್ಕು ವಾಹನಗಳು ಹೊರಗುತ್ತಿಗೆಯಲ್ಲಿ ಕಾರ್ಯಾಚರಿಸುತ್ತಿವೆ. ಜತೆಗೆ ಒಂದು ನಗರಸಭೆಯ ಮಿನಿ ಟಿಪ್ಪರ್‌ ಕಾರ್ಯಾಚರಿಸುತ್ತಿದೆ. ಮುಂದೆ ಮನೆ ಮನೆ ಕಸ ಸಂಗ್ರಹಕ್ಕೆ 10 ಬೊಲೆರೊ ಪಿಕ್‌ಅಪ್‌ ಹೊಸ ವಾಹನಗಳು ನಗರಸಭೆಗೆ ಬರಲಿದ್ದು, ಒಂದು ಮಿನಿ ಟಿಪ್ಪರ್‌ ಆಗಮಿಸಲಿದೆ. ಹೊರಗುತ್ತಿಗೆಯ ವಾಹನಗಳನ್ನು ಕೈಬಿಟ್ಟರೆ ಒಟ್ಟು 15 ವಾಹನಗಳಿಂದ ಕಸ ವಿಲೇವಾರಿ ಕಾರ್ಯ ನಡೆಯಲಿದೆ.

ಹೊಸ ವಾಹನಗಳು

ಸ್ವಚ್ಛ ಪುತ್ತೂರು ಅಭಿಯಾನ

ನಗರಸಭೆಗೆ ಸ್ವಚ್ಛ ಭಾರತ್‌ ಯೋಜನೆಯಡಿ 4.49 ಕೋ.ರೂ.ಗಳು ಮಂಜೂರಾಗಿದ್ದು, 10 ಕಸ ಸಂಗ್ರಹ ಹೊಸ ವಾಹನಗಳು ಆಗಮಿಸಲಿವೆ. ರೋಟರಿ ಕ್ಲಬ್‌, ಹಸುರು ದಳ ಹಾಗೂ ನಗರಸಭೆಯ ಸಹಯೋಗದಲ್ಲಿ ಸ್ವಚ್ಛ ಪುತ್ತೂರು ಅಭಿಯಾನ ಕೈಗೊಂಡಿದ್ದು, ಕಸ ಸಂಗ್ರಹಣೆಯ ಸಂದರ್ಭ ಹಸಿ ಕಸ, ಒಣ ಕಸ ಹಾಗೂ ಅಪಾಯಕಾರಿ ಕಸಗಳನ್ನು ಪ್ರತ್ಯೇಕ ಮಾಡಿ ನೀಡುವಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.
– ರೂಪಾ ಟಿ. ಶೆಟ್ಟಿ, ಪೌರಾಯುಕ್ತೆ, ಪುತ್ತೂರು ನಗರಸಭೆ
Advertisement

Udayavani is now on Telegram. Click here to join our channel and stay updated with the latest news.

Next