Advertisement

10 ಕೈ ಶಾಸಕರು ಬಿಜೆಪಿಗೆ?

01:24 AM Jun 13, 2019 | Team Udayavani |

ಪಣಜಿ: ಗೋವಾದಲ್ಲಿ ಹತ್ತು ಮಂದಿ ಕಾಂಗ್ರೆಸ್‌ ಶಾಸಕರು ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ. ಹೀಗೆಂದು ಗೋವಾ ಬಿಜೆಪಿ ಅಧ್ಯಕ್ಷ ವಿನಯ ತೆಂಡುಲ್ಕರ್‌ ಬುಧವಾರ ಹೇಳಿಕೊಂಡಿದ್ದಾರೆ. 15 ದಿನಗಳಿಂದ ಈ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ. ಸದ್ಯ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಗತ್ಯ ಇರುವ ಬಹುಮತ ಹೊಂದಿದೆ. ಹೀಗಾಗಿ, ಅವರ ಬೇಡಿಕೆ ಪರಿಗಣಿಸಿಲ್ಲ ಎಂದು ಹೇಳಿದ್ದಾರೆ. ಮೈತ್ರಿ ಪಕ್ಷಗಳ ನೆರವಿನಿಂದ ಸರಕಾರ ತನ್ನ ಅವಧಿಯನ್ನೂ ಪೂರೈಸಲಿದೆ ಎಂದಿದ್ದಾರೆ. ಆದರೆ ಗೋವಾಕಾಂಗ್ರೆಸ್‌ ಮುಖ್ಯಸ್ಥ ಗಿರೀಶ್‌ ಚೋದಂಕರ್‌ ಬಿಜೆಪಿ ನಾಯಕ ವಿನಯ ತೆಂಡುಲ್ಕರ್‌ ಹೇಳಿಕೆ ತಿರಸ್ಕರಿಸಿದ್ದಾರೆ.


Advertisement
Advertisement

Udayavani is now on Telegram. Click here to join our channel and stay updated with the latest news.

Next