Advertisement

ಪದವಿ ಬಿಟ್ಟು ದಿನಸಿ ವ್ಯಾಪಾರ ಆರಂಭ!

08:02 PM Nov 01, 2021 | Team Udayavani |

ಮುಂಬೈ: ಕ್ಯಾಲಿಫೋರ್ನಿಯಾದ ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ಪದವಿ ಪಡೆಯುತ್ತಿದ್ದ ಮುಂಬೈನ ಇಬ್ಬರು ಯುವಕರು ವಿದ್ಯಾಭ್ಯಾಸ ತ್ಯಜಿಸಿ, ದಿನಸಿ ಡೆಲಿವರಿ ಮಾಡುವ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ.

Advertisement

ಆ ಆ್ಯಪ್‌ ಇದೀಗ ಹೂಡಿಕೆದಾರರನ್ನು ಆಕರ್ಷಿಸಲಾರಂಭಿಸಿದೆ. ಮುಂಬೈನ 19 ವರ್ಷದ ಯುವಕರಾದ ಆದಿತ್‌ ಪಲೀಚಾ ಮತ್ತು ಕೈವಲ್ಯಾ ವೊಹ್ರಾ, ಜೆಪ್ಟೊ ಹೆಸರಿನ ಆ್ಯಪ್‌ ತಯಾರಿಸಿದ್ದಾರೆ.

ಈ ಆ್ಯಪ್‌ನಲ್ಲಿ ಕೇವಲ 10 ನಿಮಿಷಗಳಲ್ಲಿ ದಿನಸಿ ಡೆಲಿವರಿ ಮಾಡಲಾಗುತ್ತಿದೆ. ಈ ಆ್ಯಪ್‌ಗೆ ಇದೀಗ ವೈ ಕಾಂಬಿನೇಟರ್‌ ಮತ್ತು ಗ್ಲೇಡ್‌ ಬ್ರೂಕ್‌ ಕ್ಯಾಪಿಟಲ್‌ ಸಂಸ್ಥೆಯಿಂದ 60 ಮಿಲಿಯನ್‌ ಡಾಲರ್‌ ಹೂಡಿಕೆಯಾಗಿದೆ. ಈಗಾಗಲೇ ನೆಕ್ಸ್‌ಸ್‌ ವೆಂಚರ್‌, ಗ್ಲೋಬಲ್‌ ವೆಂಡರ್ಸ್‌ನಂತಹ ಹಲವು ಸಂಸ್ಥೆಗಳಿಂದ ಜೆಪ್ಟೋಗೆ ಹೂಡಿಕೆಯಾಗಿದ್ದು, ಜೆಪ್ಟೋ ಮೌಲ್ಯ 200ರಿಂದ 300 ಮಿಲಿಯನ್‌ ಡಾಲರ್‌ಗೇರಿದೆ.

ಇದನ್ನೂ ಓದಿ:ಉತ್ತಮ ಸಂಸ್ತಾರ ನೀಡುವವರೇ ಜಂಗಮರು: ಗುಡಗುಂಟಿಮಠ

 

Advertisement
Advertisement

Udayavani is now on Telegram. Click here to join our channel and stay updated with the latest news.

Next