Advertisement

ನೆರೆ ಸಂತ್ರಸ್ತರಿಗೆ 10 ಲಕ್ಷ ರೂ. ನೆರವು

11:54 PM Sep 28, 2019 | Lakshmi GovindaRaju |

ಬೆಂಗಳೂರು: ಜಯಕರ್ನಾಟಕ ಸಂಘಟನೆಯ ಹೋಟೆಲ್‌ ಘಟಕ ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಲು ನಿರ್ಧರಿಸಿದೆ.

Advertisement

ನೆರೆ ಸಂತ್ರಸ್ತರ ಸಹಾಯಾರ್ಥವಾಗಿ ವಿಜಯನಗರದ ಬಂಟರ ಸಂಘದ ಸಭಾಂಗಣದಲ್ಲಿ ಶನಿವಾರ ಜಯಕರ್ನಾಟಕ ಹೋಟೆಲ್‌ ಘಟಕದಿಂದ ಆಯೋಜಿಸಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಈ ನಿರ್ಧಾರ ಪ್ರಕಟಿಸಿ, ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡುವ ದೇಣಿಗೆಯ ಚೆಕ್‌ ಪ್ರದರ್ಶಿಸಲಾಯಿತು.

ಜಯಕರ್ನಾಟಕ ರಾಜ್ಯಾಧ್ಯಕ್ಷ ಆರ್‌.ಚಂದ್ರಪ್ಪ, ಹೋಟೆಲ್‌ ಘಟಕದ ಅಧ್ಯಕ್ಷ ಉದಯ ಶೆಟ್ಟಿ, ಇಂಡೋ-ಮಿಮ್‌ ಸಂಸ್ಥೆಯ ಸುರೇಶ್‌ ಗೌಡ, ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಪಾಲಿಕೆ ಸದಸ್ಯ ಉಮೇಶ್‌ ಶೆಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದೇ ವೇಳೆ ತೆಂಕುತಿಟ್ಟು ಹಾಗೂ ಬಡಗು ತಿಟ್ಟು ಕಲಾವಿದರ ಸಮಾಗಮದಲ್ಲಿ, ಶ್ರೀ ಕ್ಷೇತ್ರ ಪಾವಂಜೆ (ಹಳೆಯಂಗಡಿ) ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಶ್ರೀತ ಸಂಚಾರಿ ಯಕ್ಷಗಾನ ಮಂಡಳಿಯಿಂದ “ಸಂಪೂರ್ಣ ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಭಾಗವತರಾದ ರವಿಚಂದ್ರ, ಸುರೇಶ್‌ ಶೆಟ್ಟಿ, ಯಕ್ಷ ಕಲಾವಿದರಾದ ಸಂತೋಷ್‌, ಶ್ರೀಧರ್‌ ಭಟ್‌, ರಕ್ಷಿತ್‌ ಶೆಟ್ಟಿ, ಸೀತಾರಾಮ್‌ ಕುಮಾರ್‌ ಸೇರಿ ಹಲವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next