Advertisement

15 ಗ್ರಾಪಂಗಳಿಗೆ ತಲಾ 10 ಲಕ್ಷ ರೂ.

02:28 PM Sep 29, 2019 | Suhan S |

ಬೇತಮಂಗಲ: ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ಗ್ರಾಪಂ ಅನ್ನು ಮಾದರಿ ಮಾಡಲು ಒತ್ತು ನೀಡುವುದಾಗಿ ಶಾಸಕಿ ಎಂ.ರೂಪಕಲಾ ಭರವಸೆ ನೀಡಿದರು.

Advertisement

ಗ್ರಾಮದಲ್ಲಿನ ಕಚೇರಿಯಲ್ಲಿ ವಿವಿಧ ಗ್ರಾಪಂಗಳ ಸದಸ್ಯರು ಮತ್ತು ಮುಖಂಡರೊಂದಿಗೆ ಸಭೆ ನಡೆಸಿದ ಅವರು, ಗ್ರಾಮೀಣಾಭಿವೃದ್ಧಿಗೆ 1.5 ಕೋಟಿ ರೂ. ಅನುದಾನ ಬಿಡುಗಡೆ ಯಾಗಿದೆ. 15 ಗ್ರಾಪಂಗಳು ತಲಾ 10 ಲಕ್ಷ ರೂ. ಬಿಡುಗಡೆ ಮಾಡಿದ್ದು, ಅಗತ್ಯ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುವಂತೆ ಸೂಚಿಸಿದರು. ಬೇತಮಂಗಲ ಗ್ರಾಮದಲ್ಲಿ ಸೂಕ್ತ ಬಸ್‌ ನಿಲ್ದಾಣ, ಪೊಲೀಸ್‌ ಠಾಣೆ ಕಟ್ಟಡ, ವಾಹನ ನಿಲುಗಡೆಗೆ ಸ್ಥಳ, ಪಾಲಾರ್‌ ಕೆರೆಯ ದುರಸ್ತಿ, ಹಳೇ ಮದ್ರಾಸ್‌ ರಸ್ತೆ ಒತ್ತುವರಿ ತೆರವು ಮಾಡಿ ಅಭಿವೃದ್ಧಿ ಮಾಡುವುದು ಸೇರಿ ಇನ್ನೂ ಹಲವು ಕಾರ್ಯಕ್ರಮ ಶೀಘ್ರದಲ್ಲೇ ಪರಿಹಾರ ಮಾಡಬೇಕೆಂದು ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಶಾಸಕರಲ್ಲಿ ಮನವಿ ಮಾಡಿದರು.

ಶಾಸಕಿ ತಕ್ಷಣ ಸ್ಪಂದಿಸಿ ಸ್ಥಳಕ್ಕೆ ಕಂದಾಯ ಅಧಿಕಾರಿ ಮಂಜುನಾಥ್‌ ಮತ್ತು ಗ್ರಾಮದ ಹಿರಿಯರ ಜೊತೆ ಚರ್ಚಿಸಿ ಕೂಡಲೇ ಸರ್ಕಾರಿ ಜಾಗ ಗುರುತಿಸುವಂತೆ ತಿಳಿಸಿದರು. ಆದಷ್ಟೂ ಬೇಗ ಕಾಮಗಾರಿ ಕೈಗೆತ್ತಿಕೊಂಡು ಮಾದರಿ ಗ್ರಾಪಂ ಮಾಡುವುದಾಗಿ ಭರವಸೆ ನೀಡಿದರು.

ಜಿಪಂ ಮಾಜಿ ಸದಸ್ಯ ಅ.ಮು. ಲಕ್ಷ್ಮೀನಾರಾಯಣ್‌, ಗ್ರಾಪಂ ಅಧ್ಯಕ್ಷ ಕಿರಣ್‌ ಕುಮಾರ್‌, ಮಾಜಿ ಅಧ್ಯಕ್ಷ ದುರ್ಗಾ ಪ್ರಸಾದ್‌, ಪ್ರಸನ್ನ, ಟಿ.ಗೊಲ್ಲಹಳ್ಳಿ ಅಧ್ಯಕ್ಷೆ ಮಂಜುಳಾ, ಪಾಪಣ್ಣ, ಗ್ರಾಪಂ ಸದಸ್ಯರಾದ ಮಂಜುನಾಥ್‌, ವಿನು, ವಿವಿಧ ಗ್ರಾಪಂಗಳ ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next