Advertisement

ರಿಕ್ಷಾ ಬಾವಿಗೆ ಬಿದ್ದು 10 ಮಂದಿ ಸಾವು

09:30 AM Mar 26, 2018 | Team Udayavani |

ಹೈದರಾಬಾದ್‌ : ರಿಕ್ಷಾವೊಂದು ಕೃಷಿ ಸಂಬಂಧಿತ ಬಾವಿಗೆ ಬಿದ್ದ ಪರಿಣಾಮ ನಿಜಮಾಬಾದ್‌ ಜಿಲ್ಲೆಯಲ್ಲಿ ಆರು ಮಕ್ಕಳು ಸಹಿತ 10 ಮಂದಿ ಸಾವಿಗೀಡಾಗಿದ್ದಾರೆ. ಬೈಪಾಸ್‌ ರಸ್ತೆಯಲ್ಲಿ ಸಾಗುತ್ತಿದ್ದ ರಿಕ್ಷಾದಲ್ಲಿ ಒಟ್ಟು 14 ಮಂದಿ ಇದ್ದರು. ರಿಕ್ಷಾ ಚಾಲಕ ಸಹಿತ ನಾಲ್ವರನ್ನು ರಕ್ಷಿಸಲಾಗಿದೆ. 40-50 ವಯಸ್ಸಿನ ನಾಲ್ವರು ಮಹಿಳೆಯರು ಕೂಡ ಸಾವನ್ನಪ್ಪಿದ್ದಾರೆ. ಲೆಕ್ಕಕ್ಕಿಂತ ಹೆಚ್ಚು ಜನರನ್ನು ತುಂಬಿಸಿಕೊಂಡಿದ್ದ ರಿಕ್ಷಾ ಅತೀ ವೇಗವಾಗಿ ಚಲಿಸಿರುವುದೇ ದುರ್ಘ‌ಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next