Advertisement

10 ಶಾಸಕರ ರಾಜೀನಾಮೆ ಬಗ್ಗೆ ನಿರ್ಧರಿಸಿ: ಸುಪ್ರೀಂ

12:19 AM Jul 12, 2019 | Team Udayavani |

ನವದೆಹಲಿ: “ಹತ್ತು ಮಂದಿ ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಸಂಜೆಯ ಒಳಗಾಗಿ ನಿರ್ಧಾರ ಕೈಗೊಳ್ಳಬೇಕು’ ಎಂದು ಸುಪ್ರೀಂಕೋರ್ಟ್‌ ಸ್ಪೀಕರ್‌ ರಮೇಶ್‌ ಕುಮಾರ್‌ಗೆ
ಮಾಡಿದ್ದ ಸಲಹೆ ರಾಜ್ಯ ರಾಜಕೀಯದಲ್ಲಿ ಗುರುವಾರ ಧಾವಂತ ಸೃಷ್ಟಿಸಿತ್ತು.


Advertisement

ಅತೃಪ್ತ ಶಾಸಕರು ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ಸ್ಪೀಕರ್‌ಗೆ ಸೂಚಿಸಬೇಕು ಎಂದು ಮಾಡಿದ್ದ ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯ ಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠ, ಸಂಜೆ ಆರಕ್ಕೆ ಸ್ಪೀಕರ್‌ಗೆ ಮತ್ತೆ ರಾಜೀನಾಮೆ ಸಲ್ಲಿಸಬೇಕು ಎಂದು ಸೂಚಿಸಿತ್ತಲ್ಲದೆ, ತಕ್ಷಣವೇ ನಿರ್ಧಾರ ಕೈಗೊಳ್ಳಿ
ಎಂದೂ ಸ್ಪೀಕರ್‌ಗೆ ತಿಳಿಸಿತ್ತು.

ಈ ಆದೇಶ ಹೊರಬಿದ್ದ ಕೆಲವೇ ಗಂಟೆಗಳ ಅವಧಿಯಲ್ಲಿ ಸ್ಪೀಕರ್‌ ರಮೇಶ್‌ಕುಮಾರ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ರಾಜೀನಾಮೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲು ಸಮಯ ಬೇಕು. ಅದಕ್ಕಾಗಿ ಶುಕ್ರವಾರದವರೆಗೆ ಕಾಲಾವಕಾಶ ನೀಡಬೇಕೆಂದು ಕೋರಿದ್ದರು. ಅಪರಾಹ್ನ ಮತ್ತೆ ಸೇರಿದ ಕೋರ್ಟ್‌, ಈಗಾಗಲೇ ಕರ್ನಾಟಕ ಪ್ರಕರಣದ ಕುರಿತು ಆದೇಶ ನೀಡಿಯಾಗಿದೆ. ಶುಕ್ರವಾರ ವಿಚಾರಣೆ ಕೈಗೆತ್ತಿಕೊಳ್ಳೋಣ ಎಂದು ಸ್ಪೀಕರ್‌ ಪರ ವಕೀಲ ಅಭಿಷೇಕ್‌ ಮನು ಸಿಂ Ìಗೆ ನ್ಯಾಯಮೂರ್ತಿಗಳು ಹೇಳಿದರು.

ಅತೃಪ್ತ ಶಾಸಕರ ಪರವಾಗಿ ಹಿರಿಯ ನ್ಯಾಯವಾದಿ ಮುಕುಲ್‌ ರೋಹಟಗಿ ವಾದಿಸಿದರು. ಮುಂಬೈನಿಂದ ಬೆಂಗಳೂರಿಗೆ ತಲುಪಿದ ಬಳಿಕ ವಿಮಾನ ನಿಲ್ದಾಣದಿಂದ ವಿಧಾನಸೌಧದ ವರೆಗೆ ಬಿಗಿಭದ್ರತೆ ನೀಡುವಂತೆ ಕರ್ನಾಟಕ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚನೆ ನೀಡಬೇಕು ಅಥವಾ ಸಿಆರ್‌ಪಿಎಫ್ ಭದ್ರತೆ ನೀಡಬೇಕು. ಮುಂಬೈನಲ್ಲಿ ಏನಾಗಿದೆ ಎನ್ನುವುದನ್ನು ನೋಡಿದ್ದೇನೆ. ಸದ್ಯದ ಪರಿಸ್ಥಿತಿ ಆ ರೀತಿ ಇರುವುದರಿಂದ ಇಂಥ ನಿರ್ದೇಶನದ ಅಗತ್ಯವಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಯಾವ ಹೋಟೆಲ್‌ ಎಂದು ಕೇಳಿದಾಗ “ರಿನೆಯಸೆನ್ಸ್‌’ ಎಂದು ರೋಹಟಗಿ ಉತ್ತರಿಸಿದರು.

ಭದ್ರತೆ ಬೇಕೇ?: ಮಹಾರಾಷ್ಟ್ರ ಅಥವಾ ಕರ್ನಾಟಕದಲ್ಲಿ ಭದ್ರತೆ ಬೇಕೇ ಎಂದು ಮುಖ್ಯ ನ್ಯಾಯಮೂರ್ತಿ ಕೇಳಿದರು. “ಮುಂಬೈನಿಂದ ಕರ್ನಾಟಕಕ್ಕೆ ನಾವೇ ಪ್ರಯಾಣಿಸುತ್ತೇವೆ.
ವಿಮಾನ ನಿಲ್ದಾಣದಿಂದ ಸ್ಪೀಕರ್‌ ಕಚೇರಿ ವರೆಗೆ ತೆರಳುವ ಸಂದರ್ಭದಲ್ಲಿ ಭದ್ರತೆ ಅಗತ್ಯವಿದೆ’ ಎಂದು ಅತೃಪ್ತ ಶಾಸಕರ ಪರ ವಕೀಲ ರೋಹಟಗಿ ಹೇಳಿದರು.

Advertisement

“ನಾವು 15 ಮಂದಿ ಶಾಸಕರು ರಾಜೀನಾಮೆ ನೀಡಿದ್ದೇವೆ. ಜು.1ರಂದು ಖುದ್ದಾಗಿ ಸ್ಪೀಕರ್‌ಗೆ ರಾಜೀನಾಮೆ ನೀಡಿದ್ದೆವು. ಇದಾದ ಬಳಿಕ ಜು.6ರಂದು ನಿಯೋಗದ ಜತೆಗೂಡಿ ಸ್ಪೀಕರ್‌ ಭೇಟಿಗೆ ತೆರಳಿದ್ದೆವು. ನಾವು ಬರುವುದನ್ನು ನೋಡಿ ಅವರು
ಹಿಂಬಾಗಿಲ ಮೂಲಕ ತೆರಳಿದರು. ಜತೆಗೆ ನಮ್ಮನ್ನು ಎಳೆದಾಡಲಾಯಿತು. ನಿಯಮ 190ರ ಪ್ರಕಾರ ತ್ಯಾಗಪತ್ರ ಸಲ್ಲಿಕೆಗೆ ಕಾರಣಗಳನ್ನು ನೀಡಲು ಸಾಧ್ಯವಿಲ್ಲ. ಸ್ಪೀಕರ್‌ ತಮ್ಮ ಕಾರ್ಯವನ್ನು ಸೂಕ್ತವಾಗಿ ನಿರ್ವಹಿಸುತ್ತಿಲ್ಲ. ನಮ್ಮ ಪಕ್ಷಗಳು ಅನರ್ಹಗೊಳಿಸುವ ನಿಟ್ಟಿನಲ್ಲಿ ಅರ್ಜಿಯನ್ನೂ ಸಲ್ಲಿಕೆ ಮಾಡಿದೆ. ಜು.12 ರಂದು ರಾಜ್ಯ ವಿಧಾನಸಭೆಯ ಅಧಿವೇಶನದ ಮೊದಲ ದಿನ. ಹೀಗಿದ್ದರೂ ಈಗಾಗಲೇ ಸಲ್ಲಿಸಲಾಗಿರುವ ರಾಜೀನಾಮೆ
ಯನ್ನು ಸ್ವೀಕರಿಸಲಾಗಿಲ್ಲ. ಕಳೆದ ವರ್ಷದ ಮೇನಲ್ಲಿ ರಾಜ್ಯ ವಿಧಾನಸಭೆಗೆ ಸಂಬಂಧಿಸಿ ದಂತೆ ಇದೇ ಕೋರ್ಟ್‌ ವಿಚಾರಣೆ ನಡೆಸಿತ್ತು’ ಎಂದು ಶಾಸಕರ ಪರ ನ್ಯಾಯವಾದಿ ಮುಕುಲ್‌ ರೋಹಟಗಿ ನ್ಯಾಯ ಪೀಠದ ಮುಂದೆ ಅರಿಕೆ ಮಾಡಿದರು.

ಅದಕ್ಕೆ ಪ್ರಶ್ನೆ ಮಾಡಿದ ಮುಖ್ಯ ನ್ಯಾಯಮೂರ್ತಿ ಗೊಗೋಯ್‌ “ಒಟ್ಟು ಎಷ್ಟು ಮಂದಿ ಇದ್ದಾರೆ? 15? ನೀವು ಕೇವಲ ಹತ್ತು ಮಂದಿ ಪರ ವಾದಿಸುತ್ತೀರಾ? ಎಂದು ಕೇಳಿದರು.

ಅರಿಕೆ ಮುಂದುವರಿಸಿದ ರೋಹಟಗಿ ಬುಧವಾರ ಶಾಸಕರೊಬ್ಬರನ್ನು ಎಳೆದಾಡಲಾಯಿತು ಎಂದು ದೂರಿದರು.”ಜು.12ರಂದು ವಿಧಾನಸಭೆ ಅಧಿವೇಶನ ಶುರುವಾಗಲಿದೆ. ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡಲು ಸೂಚಿಸದೆ, ಶಾಸಕರನ್ನು ಅನರ್ಹಗೊಳಿಸಲು ಅರ್ಜಿ ಸಲ್ಲಿಕೆ ಮಾಡಲಾಗಿದೆ. ನಾವು ರಾಜೀನಾಮೆ ಸಲ್ಲಿಕೆ ಮಾಡಿ, ಜನರಿಂದ ಪುನರಾಯ್ಕೆ ಆಗಲು ಬಯಸಿದ್ದೇವೆ’ ಎಂದರು.

“ರಾಜೀನಾಮೆ ನೀಡಲು ಅವಕಾಶವಿಲ್ಲ ಎನ್ನುವುದನ್ನು ತಿಳಿದು ನನಗೆ ಅಚ್ಚರಿಯಾಗಿದೆ’ ಎಂದು ರೋಹಟಗಿ ಹೇಳಿದಾಗ, ಮುಖ್ಯ ನ್ಯಾಯಮೂರ್ತಿ “ನಮಗೆ ಯಾವುದೇ ಅಚ್ಚರಿಯಾಗುವುದಿಲ್ಲ’ ಎಂದು ಹೇಳಿದರು.

ಅದನ್ನು ಪರಿಶೀಲಿಸಿದ ನ್ಯಾಯಪೀಠ, ಸೂಕ್ತ ಭದ್ರತೆ ನೀಡುವಂತೆ ಕರ್ನಾಟಕ ಪೊಲೀಸ್‌ ಮಹಾನಿರ್ದೇಶಕರಿಗೆ ಆದೇಶ ಹಾಗೂ ಹತ್ತು ಮಂದಿ ಶಾಸಕರು ಸ್ಪೀಕರ್‌ ಅವರನ್ನು
ಭೇಟಿಯಾಗುವಂತೆಯೂ ಆದೇಶ ನೀಡಿತು.

ಶಾಸಕರಾದ ಪ್ರತಾಪ್‌ ಗೌಡ ಪಾಟೀಲ್‌, ರಮೇಶ್‌ ಜಾರಕಿಹೊಳಿ, ಬೈರತಿ ಬಸವರಾಜ್‌, ಬಿ.ಸಿ.ಪಾಟೀಲ್‌, ಎಸ್‌. ಟಿ.ಸೋಮಶೇಖರ್‌, ಶಿವರಾಮ ಹೆಬ್ಟಾರ್‌, ಮಹೇಶ್‌ ಕುಮಟಳ್ಳಿ, ಕೆ.ಗೋಪಾಲಯ್ಯ, ಎ.ಎಚ್‌.ವಿಶ್ವನಾಥ್‌, ನಾರಾಯಣಗೌಡ ಸ್ಪೀಕರ್‌ ವಿರುದಟಛಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next