Advertisement

ಟ್ರಕ್ – ಆಟೋ ನಡುವೆ  ಭೀಕರ ಅಪಘಾತ: 10 ಜನರ ದುರ್ಮರಣ

09:19 AM Sep 26, 2019 | Mithun PG |

ಹರ್ಯಾಣ: ಟ್ರಕ್ ಮತ್ತು ಆಟೋ ನಡುವೇ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಜನರು ಸಾವನ್ನಪ್ಪಿ, ಓರ್ವ ಗಾಯಗೊಂಡ ಘಟನೆ ಜಿಂದ್ ಜಿಲ್ಲೆಯ ರಾಮ್ ರಾಯ್ ಗ್ರಾಮದಲ್ಲಿ ನಡೆದಿದೆ.

Advertisement

ಸೇನಾ ನೇಮಕಾತಿ ರ್ಯಾಲಿ ಯಲ್ಲಿ ಪಾಲ್ಗೊಂಡು 11 ಮಂದಿ ಯುವಕರು ಆಟೋ ರಿಕ್ಷಾದಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಟ್ರಕ್ ಹರಿದ ಪರಿಣಾಮ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಓರ್ವ ಆಸ್ಪತ್ರೆಯಲ್ಲಿ ಮೃತನಾಗಿದ್ದಾನೆ.

ಮತ್ತೋರ್ವ ಯುವಕ ಗಂಭಿರ ಗಾಯಗೊಂಡಿದ್ದಾನೆ. ಮೃತರಾದವರಲ್ಲಿ ಐವರು ಜಿಂದ್ ನ ಬುರಡಹಾರ್ ಗ್ರಾಮದವರು, ಇತರರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಜಿಂದ್ ಡಿಎಸ್ ಪಿ ಕಪ್ತಾನ್ ಸಿಂಗ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next