Advertisement

Uttarakhand: ವಿದ್ಯಾರ್ಥಿಗಳಿಗೆ 10 ದಿನ ಬ್ಯಾಗ್‌ರಹಿತ ದಿನ

09:02 PM Jan 10, 2024 | Team Udayavani |

ಡೆಹ್ರಾಡೂನ್‌: ಮಕ್ಕಳ ಮೇಲೆ ಪುಸ್ತಕಗಳ ಹೊರೆ ತಪ್ಪಿಸಲು ಶಾಲೆಗಳಲ್ಲಿ ಪ್ರತಿ ಶೈಕ್ಷಣಿಕ ವರ್ಷದಲ್ಲಿ 10 ದಿನಗಳು “ಬ್ಯಾಗ್‌ ರಹಿತ’ ದಿನಗಳನ್ನು ಜಾರಿಗೆ ತರಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ 6ನೇ ತರಗತಿಯಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಪ್ರತಿ ಕೊನೆಯ ಶನಿವಾರ “ಬ್ಯಾಗ್‌ ರಹಿತ’ ದಿನ ಅನುಷ್ಠಾನಕ್ಕೆ ತರಲಾಗುವುದು.

Advertisement

2020ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ಇದನ್ನು ಜಾರಿಗೊಳಿಸಲಾಗುತ್ತಿದೆ. ಈ ದಿನಗಳಂದು ಮಕ್ಕಳಿಗೆ ಪುಸ್ತಕಗಳ ಹೊರೆಯನ್ನು ಕಡಿಮೆ ಮಾಡಿಸುವ ಜತೆಗೆ ಅವರಿಗೆ ಆಸಕ್ತಿ ಇರುವ ಪಠ್ಯೇತರ ಚಟುವಟಿಕೆಗಲ್ಲಿ ತೊಡಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next